
ದೆಹಲಿ: UIDAI ಇಲಾಖೆಯು ಇದೀಗ ಮತ್ತಷ್ಟು ಭದ್ರತಾ ವೈಶಿಷ್ಟ್ಯಗಳಿರುವ ನೂತನ ಆಧಾರ್ PVC ಕಾರ್ಡ್ನ ನೀಡಲು ಮುಂದಾಗಿದೆ. ಕೇವಲ 50 ರೂಪಾಯಿಗೆ ಲಭ್ಯವಿರುವ ಈ ಕಾರ್ಡ್ನ ನಿಮ್ಮ ಜೇಬಿನಲ್ಲಿ ಆರಾಮಾಗಿ ಇಟ್ಟುಕೊಂಡು ಓಡಾಡಬಹುದು ಎಂದು ಇಲಾಖೆಯು ಇದರ ಅನುಕೂಲತೆಯ ಬಗ್ಗೆ ವಿವರಿಸಿದೆ.
ಅಧಿಕ ಬಾಳಿಕೆಯಿರುವ ಈ ಕಾರ್ಡ್ನಲ್ಲಿರುವ ಆಧಾರ್ ಮಾಹಿತಿಯನ್ನು ಆಫ್ಲೈನ್ ಮೂಲಕವೂ ಖಚಿತಪಡಿಸಬಹುದು ಎಂದು UIDAI ಇಲಾಖೆ ಮಾಹಿತಿ ನೀಡಿದೆ. ನೂತನ ಆಧಾರ್ PVC ಕಾರ್ಡ್ ಮೇಲಿರುವ QR ಕೋಡ್ನ ನಿಮ್ಮ mಆಧಾರ್ ಌಪ್ ಅಥವಾ ಯಾವುದೇ ವಿಂಡೋಸ್ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿ ನಿಮ್ಮ ಗುರುತನ್ನು ಖಚಿತಪಡಿಸಬಹುದು ಎಂದು ಆಧಾರ್ ಇಲಾಖೆ ಹೇಳಿದೆ.
ಅಂದ ಹಾಗೆ, ಈ ಕಾರ್ಡ್ನಲ್ಲಿ QR ಕೋಡ್, ಕಾರ್ಡ್ ಹೊಂದಿರುವ ವ್ಯಕ್ತಿಯ ಫೋಟೋ ಮತ್ತು ವಿಳಾಸ, ಮೈಕ್ರೋ ಮಾಹಿತಿ, ಪೂರ್ಣಲೇಖ ಅಥವಾ ಹಾಲೋಗ್ರಾಂ ಮತ್ತು ಕಾರ್ಡ್ ಮುದ್ರಿಸಿದ ದಿನಾಂಕ ಸೇರಿದಂತೆ ಹಲವಾರು ಭದ್ರತಾ ವೈಶಿಷ್ಟ್ಯಗಳಿರಲಿದೆ. ಈ ಕಾರ್ಡ್ ಪಡೆಯುವ ಇಚ್ಛೆ ಹೊಂದಿರುವವರು ಆಧಾರ್ ವೆಬ್ಸೈಟ್ನ (www.uidai.gov.in) ಮೈ ಆಧಾರ್ ವಿಭಾದಲ್ಲಿ ಆರ್ಡರ್ PVC ಕಾರ್ಡ್ ಅನ್ನೋ ಲಿಂಕ್ಗೆ ಹೋಗಬೇಕು.
Published On - 2:57 pm, Sat, 17 October 20