ದೆಹಲಿ ಅಕ್ಟೋಬರ್ 09: ದೇಶದಲ್ಲಿ ಜಾತಿ ಗಣತಿಯನ್ನು (caste census) ಬೆಂಬಲಿಸುವ ಕಾಂಗ್ರೆಸ್ (Congress) ಪಕ್ಷದ ನಿರ್ಣಯದ ಬಗ್ಗೆ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ (Dharmendra Pradhan )ಸೋಮವಾರ ವಾಗ್ದಾಳಿ ನಡೆಸಿದ್ದಾರೆ. ಜನಗಣತಿಯು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಭಾರತದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿ ಆಧಾರಿತ ಜನಗಣತಿ ನಡೆಯುತ್ತಿತ್ತು. ಅದರ ನಂತರ, ಜನಗಣತಿಯನ್ನು ಹೇಗೆ ಮಾಡಬೇಕೆಂಬುದರ ಬಗ್ಗೆ ಪ್ರಜ್ಞಾಪೂರ್ವಕ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು ಎಂದು ಸುದ್ದಿಸಂಸ್ಥೆ ಎಎನ್ಐ ಜತೆ ಮಾತನಾಡಿದ ಕೇಂದ್ರ ಸಚಿವರು ಹೇಳಿದ್ದಾರೆ.
“90 ರ ದಶಕದಲ್ಲಿ ಮಂಡಲ್ ಆಯೋಗದ ಶಿಫಾರಸುಗಳನ್ನು ಮಾಡಿದಾಗ, ಅವರ ತಂದೆ ತೆಗೆದುಕೊಂಡ ನಿಲುವು ಏನು ಎಂದು ನಾನು ರಾಹುಲ್ ಗಾಂಧಿಯನ್ನು ಕೇಳಲು ಬಯಸುತ್ತೇನೆ? ಅವರು(ರಾಜೀವ್ ಗಾಂಧಿ) ಸಂಸತ್ನಲ್ಲಿ ಅದನ್ನು ಕಟುವಾಗಿ ವಿರೋಧಿಸಿದರು. ಅವರು ತುಂಬಾ ಕಾಲ ಅಧಿಕಾರದಲ್ಲಿದ್ದರು. ಅವರು ಈ ಜವಾಬ್ದಾರಿಯನ್ನು ಎಂದಿಗೂ ತೆಗೆದುಕೊಳ್ಳಲಿಲ್ಲ. ಇದು ಕಳೆದ ಕೆಲವು ದಿನಗಳಲ್ಲಿ ಅವರು ಮಾಡಿದ ಪಾಪವನ್ನು ಮರೆಮಾಡಲು ಕಾಂಗ್ರೆಸ್‌ನ ತಂತ್ರವಾಗಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
#WATCH | Delhi | Union Minister Dharmendra Pradhan says, “Census comes within the purview of Central Government. In India, caste-based census was held before independence. After that, there was a conscious decision on how to have a census. I would like to ask Rahul Gandhi that… pic.twitter.com/qxoEphquuv
— ANI (@ANI) October 9, 2023
ಇಂದು ಬೆಳಗ್ಗೆ ದೆಹಲಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ದೇಶದಲ್ಲಿ ಜಾತಿ ಗಣತಿಯ ಕಲ್ಪನೆಯನ್ನು ಪಕ್ಷ ಸರ್ವಾನುಮತದಿಂದ ಬೆಂಬಲಿಸಿತು.
ಪ್ರಧಾನಿ ಜಾತಿ ಗಣತಿ ಮಾಡಲು ಅಸಮರ್ಥರಾಗಿದ್ದಾರೆ. ನಮ್ಮ ನಾಲ್ಕು ಸಿಎಂಗಳಲ್ಲಿ ಮೂವರು ಒಬಿಸಿ ವರ್ಗದವರು. 10 ಬಿಜೆಪಿ ಸಿಎಂಗಳ ಪೈಕಿ ಒಬ್ಬ ಸಿಎಂ ಮಾತ್ರ ಒಬಿಸಿ ವರ್ಗದವರು. ಒಬಿಸಿ ವರ್ಗದಿಂದ ಎಷ್ಟು ಬಿಜೆಪಿ ಸಿಎಂಗಳು ಇದ್ದಾರೆ? ಪ್ರಧಾನಮಂತ್ರಿ ಒಬಿಸಿಗಳಿಗಾಗಿ ಕೆಲಸ ಮಾಡುವುದಿಲ್ಲ ಆದರೆ ಅವರನ್ನು ಪ್ರಮುಖ ಸಮಸ್ಯೆಗಳಿಂದ ದೂರವಿಡಲು ಕೆಲಸ ಮಾಡುತ್ತಾರೆ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್ ಆಡಳಿತವಿರುವ ಎಲ್ಲಾ ರಾಜ್ಯಗಳಾದ ಛತ್ತೀಸ್‌ಗಢ, ಕರ್ನಾಟಕ, ಹಿಮಾಚಲ ಪ್ರದೇಶ ಮತ್ತು ರಾಜಸ್ಥಾನದ ಮುಖ್ಯಮಂತ್ರಿಗಳು ಇದು ಅತ್ಯಂತ ಮಹತ್ವದ ಹೆಜ್ಜೆ ಎಂದು ನಂಬಿದ್ದಾರೆ ಎಂದು ಗಾಂಧಿ ಹೇಳಿದರು.
ಇದನ್ನೂ ಓದಿ: ದೇಶಾದ್ಯಂತ ಜಾತಿ ಗಣತಿ ಬೆಂಬಲಿಸುವ ನಿರ್ಣಯ ಅಂಗೀಕರಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ
ಇವುಗಳಲ್ಲಿ, ರಾಜಸ್ಥಾನ ಸರ್ಕಾರವು ಜಾತಿ ಆಧಾರಿತ ಜನಗಣತಿಯನ್ನು ನಡೆಸಲು ಆದೇಶವನ್ನು ಹೊರಡಿಸಿದೆ, ನವೆಂಬರ್ 23 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಇದು ನಡೆಯಲಿದೆ. ಬಿಹಾರ ಜಾತಿ ಗಣತಿ ಸಮೀಕ್ಷೆಯ ವರದಿಯ ಫಲಿತಾಂಶಗಳನ್ನು ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಅಶೋಕ್ ಗೆಹ್ಲೋಟ್ ಸರ್ಕಾರದ ನಿರ್ಧಾರವು ಬಂದಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ