ಅಮೆರಿಕ ಲವ್ಸ್ ಮೋದಿ, ಅಮೆರಿಕ ಲವ್ಸ್ ಇಂಡಿಯಾ: ಭಾರತವನ್ನ ಹಾಡಿಹೊಗಳಿದ ಟ್ರಂಪ್

|

Updated on: Feb 24, 2020 | 3:04 PM

ಗಾಂಧಿನಗರ: ಚೊಚ್ಚಲ ಬಾರಿಗೆ ಗುಜರಾತ್​ಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಇಲ್ಲಿನ ಮೊಟೆರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. 8 ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ಇಲ್ಲಿಗೆ ಬಂದಿದ್ದೇವೆ. ಅಮೆರಿಕ ಎಂದೆಂದೂ ಭಾರತವನ್ನು ಗೌರವಿಸುತ್ತೆ, ಪ್ರೀತಿಸುತ್ತೆ. ಈ ಸುಂದರವಾದ ಮೊಟೆರಾ ಸ್ಟೇಡಿಯಂನಲ್ಲಿರುವುದು ಸಂತಸ ತಂದಿದೆ  ಎಂದು ಹರ್ಷ ವ್ಯಕ್ತಪಡಿಸಿದರು. ಪ್ರಧಾನಿ ಮೋದಿ ನಡೆದಾಡುವ ಕಥೆ: ಭಾರತೀಯರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಪ್ರಧಾನಿ ಮೋದಿ ಇಲ್ಲಿನ ಯಶಸ್ವಿ ನಾಯಕರಾಗಿದ್ದಾರೆ. ಅತಿ ದೊಡ್ಡ […]

ಅಮೆರಿಕ ಲವ್ಸ್ ಮೋದಿ, ಅಮೆರಿಕ ಲವ್ಸ್ ಇಂಡಿಯಾ: ಭಾರತವನ್ನ ಹಾಡಿಹೊಗಳಿದ ಟ್ರಂಪ್
Follow us on

ಗಾಂಧಿನಗರ: ಚೊಚ್ಚಲ ಬಾರಿಗೆ ಗುಜರಾತ್​ಗೆ ಆಗಮಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್, ಇಲ್ಲಿನ ಮೊಟೆರಾ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ‘ನಮಸ್ತೆ ಟ್ರಂಪ್’ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದಾರೆ. 8 ಸಾವಿರ ಕಿಲೋ ಮೀಟರ್ ಪ್ರಯಾಣಿಸಿ ಇಲ್ಲಿಗೆ ಬಂದಿದ್ದೇವೆ. ಅಮೆರಿಕ ಎಂದೆಂದೂ ಭಾರತವನ್ನು ಗೌರವಿಸುತ್ತೆ, ಪ್ರೀತಿಸುತ್ತೆ. ಈ ಸುಂದರವಾದ ಮೊಟೆರಾ ಸ್ಟೇಡಿಯಂನಲ್ಲಿರುವುದು ಸಂತಸ ತಂದಿದೆ  ಎಂದು ಹರ್ಷ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ ನಡೆದಾಡುವ ಕಥೆ:
ಭಾರತೀಯರಿಗೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ. ಪ್ರಧಾನಿ ಮೋದಿ ಇಲ್ಲಿನ ಯಶಸ್ವಿ ನಾಯಕರಾಗಿದ್ದಾರೆ. ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ನಾಯಕರಾಗಿದ್ದಾರೆ. ಪ್ರಧಾನಿ ಮೋದಿ ಓರ್ವ ನಡೆದಾಡುವ ಕಥೆಯಾಗಿದ್ದಾರೆ. 70 ವರ್ಷದಲ್ಲಿ ಭಾರತ ಆರ್ಥಿಕವಾಗಿ ಪ್ರಬಲ ರಾಷ್ಟ್ರವಾಗಿದೆ. 27 ಕೋಟಿ ಜನರನ್ನು ಬಡತನದಿಂದ ಹೊರತಂದಿದ್ದಾರೆ. ಗ್ರಾಮಗಳಿಗೆ ಇಂಟರ್ನೆಟ್​, ವಿದ್ಯುತ್​ ಸಂಪರ್ಕ ನೀಡಿದ್ದಾರೆ. 7 ಕೋಟಿ ಕುಟುಂಬಗಳಿಗೆ ಉಚಿತ ಗ್ಯಾಸ್​ ಸಂಪರ್ಕ ಕಲ್ಪಿಸಿದ್ದಾರೆ. ದೇಶದಲ್ಲಿ ಶಾಂತಿ ನೆಲೆಸಲು ಹಾಗೂ ಬಡತನ ನಿರ್ಮೂಲನೆಗೆ ಪ್ರಧಾನಿ ಮೋದಿ ಶ್ರಮಿಸುತ್ತಿದ್ದಾರೆ ಎಂದು ಪ್ರಧಾನಿಯನ್ನು ಟ್ರಂಪ್ ಕೊಂಡಾಡಿದರು.

ಸಚಿನ್, ಕೊಹ್ಲಿ ಸಾಧನೆ ಕೊಂಡಾಡಿದ ಟ್ರಂಪ್:
ಧಾರ್ಮಿಕ ಗುರು ಸ್ವಾಮಿ ವಿವೇಕಾನಂದರ ನಾಡಿದು. 2 ಸಾವಿರ ಚಿತ್ರಗಳನ್ನು ಭಾರತದಲ್ಲಿ ನಿರ್ಮಿಸುತ್ತಿದ್ದಾರೆ ಎಂದು ಡಿಡಿಎಲ್​ಜೆ, ಶೋಲೆ ಚಿತ್ರಗಳ ಬಗ್ಗೆ ಟ್ರಂಪ್ ಉಲ್ಲೇಖಿಸಿದರು. ಇದೇ ವೇಳೆ ಕ್ರಿಕೆಟ್​ನಲ್ಲಿ ಸಚಿನ್ ತೆಂಡುಲ್ಕರ್, ವಿರಾಟ್ ಕೊಹ್ಲಿ ಸಾಧನೆಯನ್ನು ಕೊಂಡಾಡಿದರು. ಭಾರತದಲ್ಲಿ ಹೋಳಿ, ದೀಪಾವಳಿ ಹಬ್ಬ ಆಚರಣೆ ಬಗ್ಗೆಯೂ ಉಲ್ಲೇಖ ಮಾಡಿದರು. ಭಾರತದಲ್ಲಿ ಎಲ್ಲ ಧರ್ಮದವರೂ ಸಾಮರಸ್ಯದಿಂದ ಇದ್ದಾರೆ. ನಮ್ಮ ಸೇನೆ ವಿಶ್ವದಲ್ಲೇ ಅತ್ಯಾಧುನಿಕ, ಪ್ರಬಲವಾಗಿದೆ. ಮೊಟೆರಾ ಸ್ಟೇಡಿಯಂಗೆ ಬರುವ ಮುನ್ನ ಉಪ್ಪಿನ ಸತ್ಯಾಗ್ರಹ ನಡೆದ ಸಬರಮತಿ ಆಶ್ರಮಕ್ಕೆ ಭೇಟಿ ನೀಡಿದ್ದೆವು.

ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಎಚ್ಚರಿಕೆ:
ಐಸಿಸ್ ಸೇರಿದಂತೆ ಎಲ್ಲ ಕಡೆ ಇರುವ ಉಗ್ರರ ಮಟ್ಟ. ಈಗಾಗಲೇ ಐಸಿಸ್ ಉಗ್ರರನ್ನು ಶೇಕಡಾ ನೂರರಷ್ಟು ನಾಶಪಡಿಸಿದ್ದೇವೆ. ಭಾರತ, ಅಮೆರಿಕವನ್ನು ಕೆಣಕಿದವರಿಗೆ ತಕ್ಕ ಶಾಸ್ತಿಯಾಗಲಿದೆ. ಭಯೋತ್ಪಾದನೆ ವಿರುದ್ಧ ನಾವು ಜಂಟಿ ಹೋರಾಟ ಮಾಡ್ತೇವೆ. ಪ್ರತಿಯೊಂದು ದೇಶಕ್ಕೂ ತನ್ನ ಗಡಿ ರಕ್ಷಿಸುವ ಹಕ್ಕಿರುತ್ತದೆ. ಪಾಕಿಸ್ತಾನ ಜೊತೆಗೂ ನಮ್ಮ ಬಾಂಧವ್ಯ ಉತ್ತಮವಾಗಿದೆ. ಪಾಕ್​ನಲ್ಲಿರುವ ಉಗ್ರ ಮಟ್ಟ ಹಾಕಲು ಒತ್ತಡ ಹೇರುತ್ತಿದ್ದೇವೆ. ಆದರೆ ಪಾಕಿಸ್ತಾನ ಆತಂಕಕಾರಿ ವಾತಾವರಣ ಸೃಷ್ಟಿಸಬಾರದು ಎಂದು ಪಾಕಿಸ್ತಾನಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದರು.

ನಾಳೆ 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ಒಪ್ಪಂದ:
ಭಾರತದ ಜತೆ ರಕ್ಷಣಾ ಬಾಂಧವ್ಯ ಮತ್ತಷ್ಟು ವೃದ್ಧಿಯಾಗಲಿದೆ. ನಮ್ಮಲ್ಲಿರುವ ಅತ್ಯಾಧುನಿಕ ರಕ್ಷಣಾ ಸಾಮಗ್ರಿ ನೀಡುತ್ತೇವೆ. ನಾಳೆ 3 ಬಿಲಿಯನ್ ಡಾಲರ್ ಮೊತ್ತದ ರಕ್ಷಣಾ ವಲಯದ ಒಪ್ಪಂದ ಘೋಷಣೆ ಮಾಡುತ್ತೇವೆ. ಭಾರತದ ಜತೆ ಅತಿ ದೊಡ್ಡ ವ್ಯಾಪಾರ ಒಪ್ಪಂದ ಆಗಲಿದೆ. ಬಾಹ್ಯಾಕಾಶ ಕ್ಷೇತ್ರದಲ್ಲೂ ನಾವು ಒಪ್ಪಂದ ಮಾಡಿಕೊಳ್ಳಲಿದ್ದೇವೆ. ಭಾರತದ ಭವಿಷ್ಯಕ್ಕೆ ಮೋದಿ ಅಡಿಗಲ್ಲು ಹಾಕುತ್ತಿದ್ದಾರೆ. ಈ ಕ್ರೀಡಾಂಗಣದಲ್ಲಿ 1.25 ಲಕ್ಷ ಜನ ಮಾತ್ರ ಇದ್ದಾರೆ. ಆದರೆ ಭಾರತದ 1.25 ಕೋಟಿ ಜನ ವೀಕ್ಷಿಸುತ್ತಿದ್ದಾರೆ ಎಂದು ಮೊಟೆರಾ ಸ್ಟೇಡಿಯಂನಲ್ಲಿ ಟ್ರಂಪ್‌ ಭಾಷಣ ಮಾಡಿದರು.

ಅಮೆರಿಕ, ಭಾರತ ದೇಶಗಳು ಸೇರಿ ಕಟ್ಟರ್ ಮುಸ್ಲಿಂ ಉಗ್ರವಾದವನ್ನು ಹತ್ತಿಕ್ಕುತ್ತೇವೆ. ಭಾರತ ಕೇವಲ ಪುಸ್ತಕಗಳಲ್ಲಿಲ್ಲ, ಜನರ ಮನಸ್ಸಿನಲ್ಲಿದೆ. ಭಾರತ ಮೊದಲಿನಿಂದಲೂ ಜ್ಞಾನದ ಭಂಡಾರವಾಗಿದೆ. ಭಾರತ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ವಿಶ್ವಾಸ ವ್ಯಕ್ತಪಡಿಸಿದರು.