ಮದುವೆ ಮಂಟಪದಲ್ಲಿ ಡ್ಯಾನ್ಸ್​ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ

ಮದುವೆ ಮಂಟಪದಲ್ಲಿ ಗುಲಾಬಿ ಲೆಹೆಂಗಾ ಧರಿಸಿದ ವಧು ವರನಿಗೆ ಪಂಜ ಕುಸ್ತಿ ಸವಾಲು ಹಾಕಿದ್ದಾಳೆ. ಆತ್ಮವಿಶ್ವಾಸದಿಂದ ಸ್ಪರ್ಧಿಸಿ ಗೆದ್ದ ವಧುವಿನ ದಿಟ್ಟತನ ನೆರೆದಿದ್ದ ಅತಿಥಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿದೆ. ನೆಟ್ಟಿಗರು ವಧುವಿನ ಧೈರ್ಯವನ್ನು ಶ್ಲಾಘಿಸಿ, ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು ಸಾಂಪ್ರದಾಯಿಕ ವಿವಾಹದ ಚೌಕಟ್ಟನ್ನು ಮುರಿದ ನವ ವಧುವಿನ ಕಥೆ.

ಮದುವೆ ಮಂಟಪದಲ್ಲಿ ಡ್ಯಾನ್ಸ್​ ಬಿಟ್ಟು ಪಂಜ ಕುಸ್ತಿಗಿಳಿದ ವಧು-ವರ
ವಧು-ವರ

Updated on: Jun 03, 2026 | 9:41 AM

ನವದೆಹಲಿ, ಜೂನ್ 03: ಸಾಮಾನ್ಯವಾಗಿ ಮದುವೆ(Marriage)ಮಂಟಪದಲ್ಲಿ ವಧು-ವರರು ನಾಚಿಕೆಯಿಂದ ನಿಂತಿರುವುದನ್ನು ಅಥವಾ ರೋಮ್ಯಾಂಟಿಕ್ ಆಗಿ ನೃತ್ಯ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗುತ್ತಿರುವ ವಿಡಿಯೋವೊಂದರಲ್ಲಿ ವಧು ಇವೆಲ್ಲವನ್ನೂ ಬದಿಗಿಟ್ಟು, ವರನಿಗೆ ನೇರವಾಗಿ ಪಂಜ ಕುಸ್ತಿ ಸವಾಲು ಹಾಕಿ ಸಖತ್ ಮನರಂಜನೆ ನೀಡಿದ್ದಾಳೆ.

ಗುಲಾಬಿ ಬಣ್ಣದ ಮದುವೆಯ ಲೆಹೆಂಗಾ ಧರಿಸಿದ್ದ ವಧು, ಮಂಟಪದ ಮಧ್ಯದಲ್ಲಿದ್ದ ಟೇಬಲ್ ಮೇಲಿಟ್ಟು ವರನಿಗೆ ಸವಾಲು ಹಾಕಿದಳು. ನನ್ನೊಂದಿಗೆ ಸ್ಪರ್ಧಿಸಲು ಹುಡುಗಿಯರನ್ನಲ್ಲ, ಹುಡುಗರನ್ನು ಕರೆತನ್ನಿ”ಎಂದು ಆತ್ಮವಿಶ್ವಾಸದಿಂದ ಕೂಗಿದ ವಧುವಿನ ದಿಟ್ಟತನಕ್ಕೆ ನೆರೆದಿದ್ದ ಅತಿಥಿಗಳು ಆಶ್ಚರ್ಯಚಕಿತರಾದರು.

ಕೆಂಪು ಶೆರ್ವಾನಿ ಧರಿಸಿದ್ದ ವರ ಆರಂಭದಲ್ಲಿ ಮುಗುಳ್ನಗುತ್ತಲೇ ಪಂದ್ಯಕ್ಕೆ ಸಿದ್ಧನಾದನಾದರೂ, ಕುಸ್ತಿ ಆರಂಭವಾಗುತ್ತಿದ್ದಂತೆ ವಧುವಿನ ಬಲಕ್ಕೆ ಬೆಚ್ಚಿಬಿದ್ದಿದ್ದಾನೆ. ವಧು ತನ್ನ ಸಂಪೂರ್ಣ ಶಕ್ತಿಯನ್ನು ಬಳಸಿ ವರನ ಕೈಯನ್ನು ಕೆಳಕ್ಕೆ ಒತ್ತಿ, ಅಂತಿಮವಾಗಿ ಪಂದ್ಯವನ್ನು ಗೆದ್ದಿದ್ದಾಳೆ. ಇದನ್ನು ನೋಡುತ್ತಿದ್ದ ಕ್ಯಾಮೆರಾಮನ್ ಹಾಗೂ ನೆರೆದಿದ್ದ ಸಂಬಂಧಿಕರು ನಗುವಿನ ಕಡಲಲ್ಲಿ ತೇಲಿದರು.

ವಿಡಿಯೋ

ನೆಟ್ಟಿಗರ  ಕಮೆಂಟ್
ಭಾರತದ ಸಾಂಪ್ರದಾಯಿಕ ವಿವಾಹಗಳ ಚೌಕಟ್ಟಿನಿಂದ ಸ್ವಲ್ಪ ಹೊರಬಂದು ಹೊಸ ಯುಗದ ವಧುವಿನಂತೆ ಸದ್ದು ಮಾಡಿರುವ ಈಕೆಯ ವಿಡಿಯೋ ಇಂಟರ್ನೆಟ್‌ನಲ್ಲಿ ಭಾರಿ ಧೂಳೆಬ್ಬಿಸುತ್ತಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ವರನ ಕಾಲೆಳೆಯುತ್ತಾ ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಮನೆಯಲ್ಲಿ ಇನ್ಮುಂದೆ ವಧುವಿನದ್ದೇ ಆಡಳಿತ, ಆಕೆಯ ಧೈರ್ಯ ಮೆಚ್ಚಲೇಬೇಕು ಎಂದು ಮತ್ತೊಬ್ಬರು ಬರೆದಿದ್ದಾರೆ. RJ Sagar Meghani ಅವರು ತಮ್ಮ ಇನ್​ಸ್ಟಾಗ್ರಾಂ ಅಕೌಂಟ್​ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

ಯಾರಿಗೂ ಯಾವುದೇ ಹಾನಿಯಾಗದೆ, ಮದುವೆಯ ಸಂಭ್ರಮವನ್ನು ಮತ್ತಷ್ಟು ರಂಗಾಗಿಸಿದ ಈ ಮೋಜಿನ ವಿಡಿಯೋ ಸದ್ಯ ಲಕ್ಷಾಂತರ ವೀಕ್ಷಣೆಗಳನ್ನು ಪಡೆದು ಇಂಟರ್ನೆಟ್‌ನಲ್ಲಿ ಭಾರಿ ಸೌಂಡ್ ಮಾಡುತ್ತಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us