ಪೂಜೆ ಹೂವಿನ ಜೊತೆ ಚರಂಡಿ ಸೇರಿದ ಚಿನ್ನ: ಜೆಸಿಬಿ ಬಳಸಿ ಹುಡುಕಿ ಕೊಟ್ಟ ಪೋಲೀಸರು

ವಿಶಾಖಪಟ್ಟಣಂನ ಶ್ರೀನಗರದಲ್ಲಿ ಪೂಜೆ ಬಳಿಕ ತಿಳಿಯದೆ ಚರಂಡಿಗೆ ಎಸೆದಿದ್ದ ಸುಮಾರು 5 ತೊಲ ಚಿನ್ನದ ಆಭರಣಗಳು ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದ ಪತ್ತೆಯಾಗಿವೆ. ದಂಪತಿ ದೂರು ನೀಡಿದ ಕೂಡಲೇ ಸ್ಪಂದಿಸಿದ ಸ್ಟೀಲ್ ಪ್ಲಾಂಟ್ ಠಾಣೆಯ ಪೊಲೀಸರು, ಜೆಸಿಬಿ ಬಳಸಿ ಚರಂಡಿಯಲ್ಲಿ ಶೋಧ ನಡೆಸಿ ಚಿನ್ನವನ್ನು ಮರಳಿ ಗಳಿಸಿದರು. ಈ ಘಟನೆಯು ಸಾರ್ವಜನಿಕರು ಅಮೂಲ್ಯ ವಸ್ತುಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಸೂಚಿಸುತ್ತದೆ.

ಪೂಜೆ ಹೂವಿನ ಜೊತೆ ಚರಂಡಿ ಸೇರಿದ ಚಿನ್ನ: ಜೆಸಿಬಿ ಬಳಸಿ ಹುಡುಕಿ ಕೊಟ್ಟ ಪೋಲೀಸರು
ಪೊಲೀಸ್ ಚಿನ್ನ ಕಾರ್ಯಚರಣೆ

Updated on: Aug 26, 2026 | 3:36 PM

ವಿಶಾಖಪಟ್ಟಣಂ, ಆ.26: ಪೂಜೆ ಮುಗಿದ ನಂತರ ಕಸದ ಜೊತೆಗೆ ತಿಳಿಯದೇ ಚರಂಡಿಗೆ ಎಸೆದಿದ್ದ ಸುಮಾರು 5 ಗ್ರಾಂ ಚಿನ್ನದ ಆಭರಣಗಳು ಪೋಲೀಸರ ಸಕಾಲಿಕ ಕಾರ್ಯಾಚರಣೆಯಿಂದಾಗಿ ಮರಳಿ ಸಿಕ್ಕಿರುವ ರೋಚಕ ಘಟನೆ ವಿಶಾಖಪಟ್ಟಣಂನ ಶ್ರೀನಗರದಲ್ಲಿ ನಡೆದಿದೆ. ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆಯ ಸಿಬ್ಬಂದಿಯ ಜಾಣ್ಮೆ ಹಾಗೂ ತ್ವರಿತ ಸ್ಪಂದನೆಯಿಂದಾಗಿ ಚರಂಡಿಯಲ್ಲಿ ಕೊಚ್ಚಿಹೋಗಿದ್ದ ಚಿನ್ನದ ಆಭರಣಗಳು ಪತ್ತೆಯಾಗಿದ್ದು, ಸಂತ್ರಸ್ತ ಕುಟುಂಬ ಪೋಲೀಸರಿಗೆ ಕೃತಜ್ಞತೆ ಸಲ್ಲಿಸಿದೆ. ಗಾಜುವಾಕ ಶ್ರೀನಗರದ ನಿವಾಸಿಗಳಾದ ಉಡುಮುಲ ರಮೇಶ್ ಹಾಗೂ ದಿವ್ಯಾ ದಂಪತಿ ಈ ತಿಂಗಳ 21 ರಂದು ಶುಕ್ರವಾರ ವರಮಹಾಲಕ್ಷ್ಮಿ ವ್ರತದ ಅಂಗವಾಗಿ ದೇವಿಗೆ ಸುಮಾರು 8 ತೊಲ ಚಿನ್ನದ ಆಭರಣಗಳಿಂದ ಅಲಂಕಾರ ಮಾಡಿದ್ದರು.

ಮೂರು ದಿನಗಳ ನಂತರ ರಮೇಶ್ ಅವರು ದೇವಿಯ ಮೇಲಿದ್ದ 3 ತೊಲದ ಹಾರ ಮತ್ತು ಕಾಸನ್ನು ಮಾತ್ರ ತೆಗೆದುಕೊಂಡಿದ್ದರು. ಆದರೆ ಹೂವುಗಳ ನಡುವೆ ಇದ್ದ 1 ಬ್ರೇಸ್‌ಲೆಟ್, 2 ಚೈನ್‌ಗಳು ಹಾಗೂ 3 ಉಂಗುರಗಳು ಸೇರಿದಂತೆ ಉಳಿದ 5 ತೊಲ ಚಿನ್ನದ ಆಭರಣಗಳನ್ನು ಗಮನಿಸದೇ ಮರೆತಿದ್ದರು. ಪೂಜೆಗೆ ಬಳಸಿದ್ದ ಹೂವುಗಳು ಮತ್ತು ಇತರ ಸಾಮಗ್ರಿಗಳ ಜೊತೆಗೆ ಚಿನ್ನದ ಆಭರಣಗಳಿದ್ದ ಕೆಂಪು ಬಟ್ಟೆಯನ್ನೂ ಸುತ್ತಿ, ದುರ್ಗಾನಗರದ ಬಳಿಯ ಸ್ಟೀಲ್ ಪ್ಲಾಂಟ್ ರೈಲ್ವೆ ಸೇತುವೆ ಕೆಳಗಿರುವ ಡ್ರೈನೇಜ್‌ಗೆ ಎಸೆದು ಮನೆಗೆ ಹಿಂತಿರುಗಿದ್ದರು.

ಮನೆಗೆ ಬಂದ ನಂತರ ದಿವ್ಯಾ ಅವರು ಚಿನ್ನದ ಆಭರಣಗಳು ಇಲ್ಲದಿರುವುದನ್ನು ಗಮನಿಸಿ ಭರ್ತಿಗೆ ತಿಳಿಸಿದ್ದಾರೆ. ತಕ್ಷಣವೇ ಇಬ್ಬರೂ ಕಾಲುವೆ ಬಳಿ ಹೋಗಿ ಹುಡುಕಿದರೂ ಚಿನ್ನ ಸಿಗಲಿಲ್ಲ. ತೀವ್ರ ಆತಂಕಗೊಂಡ ದಂಪತಿ ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಘಟನೆಯ ಗಂಭೀರತೆ ಅರಿತ ಸಿಐ ಕೇಶವರಾವ್ ಅವರು ತಕ್ಷಣವೇ ಒಬ್ಬ ಕಾನ್ಸ್ಟೇಬಲ್ ಮತ್ತು ಹೋಂ ಗಾರ್ಡ್‌ಗಳನ್ನು ಸ್ಥಳಕ್ಕೆ ಕಳುಹಿಸಿದರು. ಜೆಸಿಬಿ ಸಹಾಯದಿಂದ ಡ್ರೈನೇಜ್ ನೀರಿನ ಹರಿವನ್ನು ಬೇರೆಡೆಗೆ ತಿರುಗಿಸಿ, ನೀರಿನ ಮಟ್ಟ ಕಡಿಮೆಯಾದ ನಂತರ ಚರಂಡಿಯಲ್ಲಿ ತೀವ್ರ ಶೋಧ ನಡೆಸಿದರು.

ಇದನ್ನೂ ಓದಿ: ಒಳಗಡೆ ಏನಾಗಿದೆಯೋ ನನಗೆ ಗೊತ್ತಿಲ್ಲ: ಸಿದ್ದರಾಮಯ್ಯ ಹೇಳಿರುವುದು ಸತ್ಯ ಎಂದ ಡಾ. ಜಿ. ಪರಮೇಶ್ವರ್

ನೀರು ಕಡಿಮೆಯಾಗುತ್ತಿದ್ದಂತೆ ಸ್ವಲ್ಪ ದೂರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಚಿನ್ನದ ಆಭರಣಗಳು ಒಂದೊಂದಾಗಿ ಪತ್ತೆಯಾದವು. ಪೊಲೀಸರು ಎಲ್ಲಾ 5 ಗ್ರಾಂ ಆಭರಣಗಳನ್ನು ಸುರಕ್ಷಿತವಾಗಿ ಹೊರತೆಗೆದು ದಿವ್ಯಾ-ರಮೇಶ್ ದಂಪತಿಗೆ ಹಸ್ತಾಂತರಿಸಿದರು. “ಹಬ್ಬ ಹಾಗೂ ಪೂಜೆಗಳ ಸಂದರ್ಭದಲ್ಲಿ ಬೆಲೆಬಾಳುವ ಆಭರಣಗಳು ಮತ್ತು ವಸ್ತುಗಳ ವಿಷಯದಲ್ಲಿ ಸಾರ್ವಜನಿಕರು ತೀವ್ರ ಎಚ್ಚರಿಕೆಯಿಂದ ಇರಬೇಕು.” ಎಂದು ಸಿಐ, ಸ್ಟೀಲ್ ಪ್ಲಾಂಟ್ ಪೊಲೀಸ್ ಠಾಣೆ ಕೇಶವರಾವ್ ಹೇಳಿದ್ದಾರೆ.

ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Loading...
Unable to load recommendations.
Follow Us