ಕೊಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಇಂದು ಮೊದಲ ಹಂತದ ಮತದಾನ ಆರಂಭವಾಗಿದೆ. ಈ ಬೆನ್ನಲ್ಲೇ ಕೊಲ್ಕತ್ತಾ ಪೊಲೀಸರು 22 ಕಚ್ಚಾ ಬಾಂಬ್ಗಳನ್ನು ವಶಪಸಿಕೊಂಡಿದ್ದಾರೆ. ಚುನಾವಣೆಯ ಮೊದಲ ಹಂತದ ಬೆಳ್ಳಂಬೆಳಗ್ಗೆ ಅಪಾರ ಪ್ರಮಾಣದ ಕಚ್ಚಾ ಬಾಂಬ್ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಪಶ್ಚಿಮಬಂಗಾಳದ 30 ವಿಧಾನಸಭಾ ಕ್ಷೇತ್ರಗಳ 191 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಇಂದು ಬರೆಯಲಿದ್ದಾರೆ. ಬಂಕುರಾ, ಪುರುಲಿಯಾ, ಜಾರ್ಗ್ರಾಮ್, ಪೂರ್ವ ಮಿಡ್ನಾಪುರ ಮತ್ತು ಪಶ್ಚಿಮ ಮೆಡ್ನಾಪುರ ಕ್ಷೇತ್ರಗಳು ಇಂದು ಮತದಾನ ನಡೆಯುವ ಮಹತ್ವದ ಕ್ಷೇತ್ರಗಳಾಗಿವೆ. ಇಂದು ನಡೆಯಲಿರುವ ಕ್ಷೇತ್ರಗಳಲ್ಲಿ 2016 ರಲ್ಲಿ ಟಿಎಂಸಿ 30 ಸ್ಥಾನಗಳಲ್ಲಿ 27 ಸ್ಥಾನಗಳನ್ನು ಗೆದ್ದಿತ್ತು ಕಾಂಗ್ರೆಸ್ ಕೇವಲ ಎರಡು ಸ್ಥಾನಗಳಲ್ಲಿ ಗೆದ್ದಿತ್ತು. ಇಂದು ಚುನಾವಣೆ ನಡೆಯುವ 30 ಕ್ಷೇತ್ರಗಳಲ್ಲಿ ಬಿಜೆಪಿ 29 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಬಿಜೆಪಿ ಮಿತ್ರಪಕ್ಷ ಎಜೆಎಸ್‌ಯು ಒಂದು ಕ್ಷೇತ್ರದಲ್ಲಿ ಸ್ಪರ್ಧೆ ನಡೆಸಿದೆ. ಟಿಎಂಸಿ ಕೂಡ 29 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿದೆ. ಒಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಟಿಎಂಸಿ ಬೆಂಬಲ ಘೋಷಿಸಿದೆ. ಬೆಳಗ್ಗೆ 8ರಿಂದಲೇ ಮತದಾನ ಆರಂಭವಾಗಿದ್ದು ಸಂಜೆ 6ಕ್ಕೆ ಮುಕ್ತಾಯವಾಗಲಿದೆ. ( West Bengal phase 1 elections started early morning 22 crude bombs recovered from Kolkata)
#WestBengalElections2021: Voting underway at booth number 67A in Patashpur assembly constituency, East Midnapore pic.twitter.com/pENvB8fq43
— ANI (@ANI) March 27, 2021
#WestBengalElections2021: Voting underway at booth number 67A in Patashpur assembly constituency, East Midnapore pic.twitter.com/pENvB8fq43
— ANI (@ANI) March 27, 2021
ಪಶ್ಚಿಮ ಬಂಗಾಳದಲ್ಲಿ ಬಂಗಾಳದ ಕುವರಿ ಮಮತಾ ಬ್ಯಾನರ್ಜಿ ಅವರಿಗೆ ಖಂಡಿತವಾಗಿಯೂ ಜಯ ದೊರಕಲಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಡೆರೆಕ್ ಓ‘ಬ್ರೆಯಾನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ಮೊದಲ ಹಂತದ ಮತದಾನ ಆರಂಭಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
TMC will win Bengal. Bengal’s daughter will defeat Bengal’s traitor in his own backyard at Nandigram, members of tourist gang will continue to do what they do best – try & destroy institutions in India. Women in Bengal will continue to wear sarees any way they want: Derek O’Brien pic.twitter.com/8aAokkSznI
— ANI (@ANI) March 27, 2021