ರಷ್ಯಾದಿಂದ ತೈಲ ಖರೀದಿ ಬಗ್ಗೆ ಲಿಜ್​​ ಟ್ರಸ್​​ಗೆ ಖಡಕ್​​ ಉತ್ತರ ನೀಡಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್​​; ಹಳೇ ವಿಡಿಯೊ ಮತ್ತೆ ವೈರಲ್

| Updated By: ರಶ್ಮಿ ಕಲ್ಲಕಟ್ಟ

Updated on: Sep 07, 2022 | 3:16 PM

ರಿಯಾಯಿತಿ ದರದಲ್ಲಿ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಟ್ರಸ್, ನಿರ್ಬಂಧಗಳಿಗೆ ಯುಕೆಯ ವಿಧಾನವನ್ನು ನಾನು ವಿವರಿಸಿದ್ದೇನೆ. ಈ ವರ್ಷದ ಅಂತ್ಯದ ವೇಳೆಗೆ ನಾವು ರಷ್ಯಾದ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಕೊನೆಗೊಳಿಸುತ್ತಿದ್ದೇವೆ.

ರಷ್ಯಾದಿಂದ ತೈಲ ಖರೀದಿ ಬಗ್ಗೆ ಲಿಜ್​​ ಟ್ರಸ್​​ಗೆ ಖಡಕ್​​ ಉತ್ತರ ನೀಡಿದ್ದ ಭಾರತದ ವಿದೇಶಾಂಗ ಸಚಿವ ಜೈಶಂಕರ್​​; ಹಳೇ ವಿಡಿಯೊ ಮತ್ತೆ ವೈರಲ್
ಜೈಶಂಕರ್- ಲಿಜ್ ಟ್ರಸ್
Follow us on

ದೆಹಲಿ: ಕನ್ಸರ್ವೇಟಿವ್ ಪಕ್ಷದ ನಾಯಕಿ ಲಿಜ್ ಟ್ರಸ್  (Liz Truss) ಅವರನ್ನು ಯುನೈಟೆಡ್ ಕಿಂಗ್‌ಡಮ್​​ನ (United Kingdom) ನೂತನ ಪ್ರಧಾನಿಯಾಗಿ ರಾಣಿ ಎಲಿಜಬೆತ್ II ಅವರು ಮಂಗಳವಾರ ನೇಮಕ ಮಾಡಿದ್ದಾರೆ. ಈ  ಹೊತ್ತಲ್ಲೇ  ನೆಟಿಜನ್‌ಗಳು ಲಿಜ್ ಅವರು ಇತ್ತೀಚೆಗೆ ಭಾರತಕ್ಕೆ ಭೇಟಿ ನೀಡಿದಾಗ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ (S Jaishankar) ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆಯ ವಿಡಿಯೊವನ್ನು ಮತ್ತೆ ಚರ್ಚೆಗೆ ತಂದಿದ್ದಾರೆ. ಭೇಟಿಯ ಸಮಯದಲ್ಲಿ, ಉಕ್ರೇನ್ ಮೇಲಿನ ರಷ್ಯಾ ದಾಳಿ ನಡೆದಾಗ ನಿರ್ಬಂಧಗಳ ವಿಷಯದ ಬಗ್ಗೆ ಜೈಶಂಕರ್ ಮತ್ತು ಟ್ರಸ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಚುನಾವಣೆಯಲ್ಲಿ ಲಿಜ್ ಅವರು 81,326 ಮತಗಳನ್ನು ಪಡೆದಿದ್ದು ರಿಷಿ ಸುನಕ್ ಅವರು 60,399 ಮತಗಳನ್ನು ಪಡೆದಿದ್ದಾರೆ.  ಈ ವರ್ಷದ ಏಪ್ರಿಲ್ ಮೊದಲ ವಾರದಲ್ಲಿ ಆಗಿನ ಬ್ರಿಟನ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ್ದರು. ‘ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ ಮತ್ತು ಪಾಲಿಸಿ ಎಕ್ಸ್ಚೇಂಜ್’ ಆಯೋಜಿಸಿದ್ದ ‘ಇಂಡಿಯಾ-ಯುಕೆ ಸ್ಟ್ರಾಟೆಜಿಕ್ ಫ್ಯೂಚರ್ಸ್ ಫೋರಮ್’ನಲ್ಲಿ ಉಭಯ ನಾಯಕರು ಮಾತನಾಡುತ್ತಿದ್ದರು. ಈ ಸಮಾವೇಶದ ಬಳಿಕ ಉಭಯ ನಾಯಕರ ನಡುವೆ ದ್ವಿಪಕ್ಷೀಯ ಸಭೆಯೂ ನಡೆಯಿತು.

ರಿಯಾಯಿತಿ ದರದಲ್ಲಿ ಭಾರತವು ರಷ್ಯಾದಿಂದ ತೈಲವನ್ನು ಖರೀದಿಸುವ ಕುರಿತಾದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಟ್ರಸ್, ನಿರ್ಬಂಧಗಳಿಗೆ ಯುಕೆಯ ವಿಧಾನವನ್ನು ನಾನು ವಿವರಿಸಿದ್ದೇನೆ. ಈ ವರ್ಷದ ಅಂತ್ಯದ ವೇಳೆಗೆ ನಾವು ರಷ್ಯಾದ ತೈಲದ ಮೇಲಿನ ನಮ್ಮ ಅವಲಂಬನೆಯನ್ನು ಕೊನೆಗೊಳಿಸುತ್ತಿದ್ದೇವೆ ಎಂಬ ಅಂಶವನ್ನು ನಾನು ವಿವರಿಸಿದ್ದೇನೆ. ಇದು ಬಹಳ ಮುಖ್ಯ ಎಂದು ನಾನು ಭಾವಿಸುತ್ತೇನೆ. ಅವರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಇತರ ದೇಶಗಳ ನಿರ್ಧಾರಗಳನ್ನು ನಾವು ಗೌರವಿಸುತ್ತೇವೆ ಎಂದಿದ್ದರು.

ಭಾರತ ಸಾರ್ವಭೌಮ ರಾಷ್ಟ್ರ. ಭಾರತಕ್ಕೆ ಏನು ಮಾಡಬೇಕೆಂದು ನಾನು ಹೇಳುವುದಿಲ್ಲ. ಬುಡಾಪೆಸ್ಟ್ ಮೆಮೊರಾಂಡಮ್‌ಗೆ ಸಹಿ ಹಾಕಿರುವ ಯುಕೆ ಸರ್ಕಾರದ ಸದಸ್ಯನಾಗಿ ನಾನು ಹೇಳಿದ್ದೇನೆ. ಉಕ್ರೇನ್‌ನ ಜನರನ್ನು ಬೆಂಬಲಿಸಲು ನಾವು ಮಾಡಬಹುದಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಯುನೈಟೆಡ್ ಕಿಂಗ್‌ಡಮ್ ಪರವಾಗಿ ನಾನು ಹೆಚ್ಚಿನ ಜವಾಬ್ದಾರಿಯನ್ನು ಹೊಂದಿದ್ದೇನೆ. ಆದರೆ ಅದು ಇತರ ದೇಶಗಳಿಗೆ ಏನು ಮಾಡಬೇಕೆಂದು ಹೇಳುವಂತೆಯೇ ಅಲ್ಲ ಎಂದು ಟ್ರಸ್ ಹೇಳಿದ್ದಾರೆ.

ತೈಲ ಬೆಲೆಗಳು ಹೆಚ್ಚಾದಾಗ, ದೇಶಗಳು ಮಾರುಕಟ್ಟೆಗೆ ಹೋಗುವುದು ಮತ್ತು ಅವುಗಳಿಗೆ ಉತ್ತಮವಾದ ವ್ಯವಹಾರಗಳನ್ನು ಹುಡುಕುವುದು ಸಹಜ ಎಂದು ನಾನು ಭಾವಿಸುತ್ತೇನೆ. ಆದರೆ ನಾವು ಎರಡು ಅಥವಾ ಮೂರು ತಿಂಗಳು ಕಾಯುತ್ತಿದ್ದರೆ ಮತ್ತು ರಷ್ಯಾದ ಅನಿಲ ಮತ್ತು ತೈಲದ ದೊಡ್ಡ ಖರೀದಿದಾರರು ಯಾರು ಎಂದು ನೋಡಿದರೆ, ಪಟ್ಟಿಯು ಹಿಂದಿನದಕ್ಕಿಂತ ಭಿನ್ನವಾಗಿರುವುದಿಲ್ಲ ಎಂದು ನಾನು ಭಾವಿಸುತ್ತೇನೆ. ನಾವು ಆ ಪಟ್ಟಿಯ ಟಾಪ್ 10 ನಲ್ಲಿ ಇರುವುದಿಲ್ಲ ಎಂದು ನಾನು ಅನುಮಾನಿಸುತ್ತೇನೆ ಎಂದಿದ್ದರು ಟ್ರಸ್.

ರಷ್ಯಾದ ಆಕ್ರಮಣ ಬಗ್ಗೆ ಚೀನಾ ಹೇಗೆ ವರ್ತಿಸುತ್ತದೆ ಎಂಬುದರ ಕುರಿತು ಮಾತನಾಡಿದ ಟ್ರಸ್, ನಾನು ನನ್ನ ಚೀನಾದ ಕೌಂಟರ್ ವಾಂಗ್ ಯಿ ಅವರೊಂದಿಗೆ ಮಾತನಾಡಿದ್ದೇನೆ. ಚೀನಾವು ಉಕ್ರೇನ್‌ನ ಸಾರ್ವಭೌಮತ್ವವನ್ನು ಗೌರವಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಮತ್ತು P-5 ನ ಸದಸ್ಯ ಮತ್ತು ಜವಾಬ್ದಾರಿಯುತ ರಾಷ್ಟ್ರವಾಗಿ, ಚೀನಾ ಇದಕ್ಕೆ ಬದ್ಧವಾಗಿರಬೇಕು. ಆದ್ದರಿಂದ ಉಕ್ರೇನ್‌ನಲ್ಲಿ ರಷ್ಯಾದ ಕ್ರಮಗಳನ್ನು ಚೀನಾ ಬೆಂಬಲಿಸುವುದನ್ನು ನಾವು ನೋಡಬಾರದು ಎಂದಿದ್ದಾರೆ.

ಅಫ್ಘಾನಿಸ್ತಾನದಿಂದ ಅಮೆರಿಕ ತನ್ನ ಪಡೆಗಳನ್ನು ಹಿಂತೆಗೆದುಕೊಂಡಿದೆ ಎಂದು ಹೇಳಿದ ಜೈಶಂಕರ್  ಹಾಗೆ ಮಾಡುವಾಗ ಅದು ಭಾರತದ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂದು ಯೋಚಿಸಿದೆಯೇ? ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ಸ್ಥಾಪನೆಯಿಂದ ಭಾರತಕ್ಕೆ ಹಾನಿಯಾಗುವಷ್ಟು ಯುರೋಪ್ ಮೇಲೆ ಪರಿಣಾಮ ಬೀರುವುದಿಲ್ಲ ಎಂದು  ಹೇಳಿದ್ದಾರೆ.

ಅದರಲ್ಲಿ ಕೆಲವು ಸಾಮೀಪ್ಯವನ್ನು ಅವಲಂಬಿಸಿರುತ್ತದೆ ಎಂದು ನಾನು ಹೇಳುತ್ತೇನೆ. ಅದರಲ್ಲಿ ಕೆಲವು ನಿರ್ದಿಷ್ಟ ದೇಶ ಅಥವಾ ಸಮಾಜವು ಏನಾಗುತ್ತಿದೆ ಎಂಬುದರ ಮೇಲೆ ಎಷ್ಟು ಬಲವಾಗಿ ಸಂಬಂಧಿಸಿದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಉದಾಹರಣೆಗೆ ಅಫ್ಘಾನಿಸ್ತಾನ… ಕಳೆದ ಬೇಸಿಗೆಯಲ್ಲಿ ಅಫ್ಘಾನಿಸ್ತಾನದಲ್ಲಿ ನಾವು ಕಂಡದ್ದು ಇಲ್ಲಿ ಬಹಳ ಬಲವಾದ ಪರಿಣಾಮವನ್ನು ಬೀರಿದೆ ಎಂದು ನಾನು ಭಾವಿಸುತ್ತೇನೆ, ಭಾರತದಲ್ಲಿಯೂ ಪರಿಣಾಮ ಬೀರಿತ್ತು. ಬಹುಶಃ ಇದು ಯುರೋಪಿನಲ್ಲಿ ಅದೇ ಪರಿಣಾಮವನ್ನು ಬೀರಲಿಲ್ಲ ಎಂದು ನಾನು ಹೇಳುತ್ತೇನೆ.

ತಾಲಿಬಾನ್‌ಗಳು ಅಧಿಕಾರಕ್ಕೇರುವುದನ್ನು ಜನರು ಅದೇ ರೀತಿಯಲ್ಲಿ ನೋಡಲಿಲ್ಲ ಎಂದು ನಾನು ಭಾವಿಸುತ್ತೇನೆ. ಅವರು ಅದೇ ರೀತಿಯಲ್ಲಿ ಬಾಧಿತ ಜನರೊಂದಿಗೆ ಗುರುತಿಸಿಕೊಳ್ಳಲಿಲ್ಲ. ಸತ್ಯವೆಂದರೆ ನಮ್ಮಲ್ಲಿ ಅನೇಕರು ಒಂದೇ ರೀತಿಯ ಅಥವಾ ಹಂಚಿಕೊಂಡ ನಂಬಿಕೆಗಳು, ಮೌಲ್ಯಗಳನ್ನು ಹೊಂದಿದ್ದಾರೆ. ಆದರೆ ಸಂಬಂಧಿಸುವ ಸಾಮರ್ಥ್ಯವಿದೆ, ಗುರುತಿಸುವ ಸಾಮರ್ಥ್ಯವಿದೆ. ಪ್ರತಿಕ್ರಿಯೆಯ ತೀವ್ರತೆಯು ಪ್ರಪಂಚದಾದ್ಯಂತ ಒಂದೇ ಆಗಿರುವುದಿಲ್ಲ ಎಂದಿದ್ದಾರೆ ಜೈಶಂಕರ್.