ಸನಾತನ ಧರ್ಮದ ವಿರುದ್ಧವಾಗಿ ನೀಡಿದ್ದ ಹೇಳಿಕೆಯನ್ನು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್(Udhayanidhi Stalin) ಸಮರ್ಥಿಸಿಕೊಂಡಿದ್ದಾರೆ. ನಾನು ಈ ಮೊದಲು ನೀಡಿದ್ದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ, ನಾನು ನನ್ನ ಸಿದ್ಧಾಂತದ ಬಗ್ಗೆ ಮಾತ್ರ ಮಾತನಾಡಿದ್ದೇನೆ, ನನ್ನ ನಿಲುವು ಬದಲಾಗದು, ಸಮಸ್ಯೆಯನ್ನು ಕಾನೂನಾತ್ಮಕವಾಗಿ ಎದುರಿಸುತ್ತಾರೆ ಎಂದರು.
ಉದಯನಿಧಿ ಸ್ಟಾಲಿನ್ ಕಾರ್ಯಕ್ರಮವೊಂದರಲ್ಲಿ ಸನಾತನ ಧರ್ಮವನ್ನು ಕೊರೊನಾ, ಡೆಂಗ್ಯೂ, ಮಲೇರಿಯಾಗೆ ಹೋಲಿಸಿದ್ದರು.
ಹೇಗೆ ಈ ರೋಗಗಳ ವಿರುದ್ಧ ಹೋರಾಡಿದರೆ ಪ್ರಯೋಜನವಿಲ್ಲವೋ, ಅದನ್ನು ಬುಡ ಸಮೇತ ನಿರ್ಮೂಲನೆ ಮಾಡುವ ಅಗತ್ಯವಿದೆಯೋ ಹಾಗೆಯೇ ಸನಾತನ ಧರ್ಮದ ವಿರುದ್ಧ ಹೋರಾಡಿದರೆ ಪ್ರಯೋಜನವಿಲ್ಲ ಅದನ್ನು ನಿರ್ಮೂಲನೆ ಮಾಡುವ ಅಗತ್ಯವಿದೆ ಎಂದು ಉದಯನಿಧಿ ಹೇಳಿದ್ದರು.
ಸನಾತನ ಧರ್ಮ ವಿರೋಧಿ ಹೇಳಿಕೆಗಳ ಕುರಿತು ತಮ್ಮ ವಿರುದ್ಧ ದೂರು ದಾಖಲಿಸಿರುವ ಅರ್ಜಿದಾರರು ಅದಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ನೀಡಬೇಕು ಎಂದರು.
ಮತ್ತಷ್ಟು ಓದಿ: ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ ಎಂದು ಕರೆದ ಸ್ಟಾಲಿನ್ ಪುತ್ರ ಉದಯನಿಧಿ
ಅರ್ಜಿ ಸಲ್ಲಿಸಿದ ನಂತರ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವುದು ಅರ್ಜಿದಾರರ ಕರ್ತವ್ಯವಾಗಿದೆ ಮತ್ತು ಹಾಗೆ ಮಾಡಲು ವಿಫಲವಾದರೆ ಅರ್ಜಿಯನ್ನು ವಜಾಗೊಳಿಸಬೇಕಾಗುತ್ತದೆ ಎಂದು ಹೇಳಿದರು. ಯಾಲಯವು ಪ್ರತಿವಾದಿಯ ಸಾಂವಿಧಾನಿಕ ಹಕ್ಕಿನ ವಿರುದ್ಧ ಏನನ್ನೂ ಮಾಡಲು ಒತ್ತಾಯಿಸಲು ಸಾಧ್ಯವಿಲ್ಲ ಎಂದರು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ