ಹೈದರಾಬಾದ್: ನಗರದ ಅಬ್ದುಲ್ಲಾಪುರದಲ್ಲಿ ನಡೆದ ದಾರುಣ ಘಟನೆಯಲ್ಲಿ ತಹಶೀಲ್ದಾರ್ ವಿಜಯಾ ಎಂಬುವವರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆ ಮಾಡಲಾಗಿದೆ.
ತಹಶೀಲ್ದಾರ್ ರಕ್ಷಣೆಗೆ ಯತ್ನಿಸಿದ ಹಲವರಿಗೆ ಗಂಭೀರ ಗಾಯಗಳಾಗಿವೆ. ಘಟನೆ ಬಳಿಕ ಹಯಾತ್ನಗರ ಪೊಲೀಸ್ ಠಾಣೆಯಲ್ಲಿ ಆರೋಪಿ ಶರಣಾಗಿದ್ದಾನೆ. ಭ್ರಷ್ಟಾಚಾರದಿಂದ ಹತಾಶನಾದ ವ್ಯಕ್ತಿ ಇಂತಹ ಕುಕೃತ್ಯವೆಸಗಿದ್ದಾನೆ.
ತಹಶೀಲ್ದಾರ್ ವಿಜಯಾರ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ದುರ್ಘಟನೆ ಮಧ್ಯಾಹ್ನ 1.30ಗಂಟೆಗೆ ನಡೆದಿದೆ. ಹಿರಿಯ ಅಧಿಕಾರಿಯನ್ನ ಭೇಟಿಯಾಗಬೇಕೆಂದು ತಹಶೀಲ್ದಾರ್ ಕಚೇರಿಗೆ ಆರೋಪಿ ಬಂದಿದ್ದ ಎನ್ನಲಾಗಿದೆ. ಅರ್ಧ ಘಂಟೆ ಕಾಲ ತಹಶೀಲ್ದಾರ್ ಕಚೇರಿಯಲ್ಲಿ ಆತ ಅಲೆದಾಡಿದ್ದಾನೆ ಎಂದು ತಿಳಿದುಬಂದಿದೆ.
Published On - 3:30 pm, Mon, 4 November 19