Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ

ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್​ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದ್ದಾರೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.

Green Sunglass: ಚಿಪ್ಸ್ ಪ್ಯಾಕೆಟ್‌ಗಳಿಂದ ತಯಾರಾಗುತ್ತಿವೆ ಸಖತ್ ಸನ್‌ಗ್ಲಾಸ್‌ಗಳು! ಇಲ್ಲಿದೆ ಒಂದು ಕಂಪನಿಯ ಅದ್ಬುತ ಕತೆ
ಆಶಯ ಸನ್​ಗ್ಲಾಸ್
Image Credit source: Twitter

Updated on: Feb 18, 2023 | 1:07 PM

ತ್ಯಾಜ್ಯ ವಿಲೇವಾರಿ ಸಮಸ್ಯೆ ವಿಶೇಷವಾಗಿ ಪ್ಲಾಸ್ಟಿಕ್ ತ್ಯಾಜ್ಯ, ಖಂಡಿತವಾಗಿಯೂ ಪ್ರತಿ ದೇಶಕ್ಕೂ ಕಾಡುತ್ತಿರುವ ಸಮಸ್ಯೆಗಳಲ್ಲಿ ಒಂದಾಗಿದೆ. ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನೊಂದಿಗೆ ಬರುವ ಉತ್ಪನ್ನಗಳ ಹೆಚ್ಚಿದ ಬಳಕೆಯೊಂದಿಗೆ, ತ್ಯಾಜ್ಯದ ಪ್ರಮಾಣವೂ ಮಿತಿಮೀರಿದೆ. ಆದರೆ, ಇದೀಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಈ ಪುಟ್ಟ ಕಂಪನಿ ಹಗಲಿರುಳು ಶ್ರಮಿಸುತ್ತಿದೆ. ಪುಣೆಯ ಈ ಪುಟ್ಟ ಕೆಮಿಕಲ್ ಲ್ಯಾಬ್ ಭರವಸೆಯ ಕಿರಣವನ್ನು ಹುಟ್ಟು ಹಾಕಿದೆ. ಆಶಯ ಎಂಬ ಕಂಪನಿಯು ಚಿಪ್ಸ್ ಪ್ಯಾಕೆಟ್​ಗಳಿಂದ ಎಲ್ಲರು ಪ್ರೀತಿಸುವ ಅದ್ಬುತ ಸನ್‌ಗ್ಲಾಸ್‌ಗಳನ್ನು ಉತ್ಪಾದಿಸಲು ಮುಂದಾಗಿದೆ. ಇದೊಂದು ಅದ್ಬುತ ಆವಿಷ್ಕಾರ ಮಾತ್ರವಲ್ಲದೆ, ಪ್ರಕೃತಿಯನ್ನು ಕಾಪಾಡಿಕೊಳ್ಳಲು ಇಟ್ಟ ಪುಟ್ಟ ಹೆಜ್ಜೆ.

ಕಂಪನಿಯ ಸಂಸ್ಥಾಪಕರಲ್ಲಿ ಒಬ್ಬರಾದ ಅನೀಶ್ ಮಲ್ಪಾನಿ ​​ಅವರು ಹಂಚಿಕೊಂಡ ಟ್ವಿಟರ್ ಪೋಸ್ಟ್ ಪ್ರಕಾರ, ಉತ್ಪನ್ನವನ್ನು ಜೈವಿಕ ವಿಘಟನೀಯವಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ರಚಿಸಲಾಗಿದೆ. ನಾವು ಬದುಕುವ ಪರಿಸರವನ್ನು ಉಳಿಸಲು ಇದೊಂದು ಸಣ್ಣ ಪ್ರಯತ್ನ ಎಂದು ತಿಳಿಸಿದ್ದಾರೆ. “ಕೊನೆಗೂ ಚಿಪ್‌ಗಳ ಪ್ಯಾಕೆಟ್‌ಗಳ ಮರುಬಳಕೆಯಿಂದ ತಯಾರಿಸಿದ ಪ್ರಪಂಚದ ಮೊದಲ ಸನ್‌ಗ್ಲಾಸ್‌ಗಳು ನಿಮ್ಮಮುಂದೆ, ಅದೂ ನಮ್ಮ ಭಾರತದಲ್ಲಿ!” ಎಂದು ಅನೀಶ್ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.

ಈ ಪೋಸ್ಟ್‌ ಅನ್ನು ನೋಡಿದ ನೆಟ್ಟಿಗರು ಬಹಳಷ್ಟು ಪ್ರೇರೇಪಿತರಾಗಿದ್ದಾರೆ. ಅಷ್ಟೇ ಅಲ್ಲದೆ ಇಂತಹ ಮಹತ್ವದ ಹೆಜ್ಜೆ ಇಡಲು ಮುಂದಾಗಿದ್ದಕ್ಕೆ ಅನೇಕರು ಕಂಪನಿಯನ್ನು ಅಭಿನಂದಿಸಿದ್ದಾರೆ.