Loan Rates: BoMನಲ್ಲಿ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.4; ಅತೀ ಕಡಿಮೆ ಬಡ್ಡಿಯಲ್ಲಿ ಸಾಲ ಕೊಡುವ ಬ್ಯಾಂಕುಗಳಿವು…

Updated on: Mar 14, 2023 | 10:36 AM

Banks With Lowest Home Loan Rates In India: ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಗೃಹ ಸಾಲಕ್ಕೆ ಬಡ್ಡಿ ದರವನ್ನು ಶೇ. 8.4ಕ್ಕೆ ಇಳಿಸಲಾಗಿದೆ. ಅತ್ಯಂತ ಕಡಿಮೆ ಬಡ್ಡಿ ದರ ಇರುವ ಬ್ಯಾಂಕುಗಳ ಪಟ್ಟಿಗೆ ಅದು ಸೇರಿದೆ. ವಿವಿಧ ಬ್ಯಾಂಕುಗಳಲ್ಲಿರುವ ಗೃಹ ಸಾಲ ದರಗಳ ವಿವರ ಇಲ್ಲಿದೆ...

1 / 10
ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನಲ್ಲಿನ ಗೃಹ ಸಾಲದ ದರಗಳನ್ನು ಇನ್ನಷ್ಟು ಇಳಿಸಿದೆ. ಈ ಬ್ಯಾಂಕಿಗಿಂತಲೂ ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ ಬ್ಯಾಂಕುಗಳುಂಟು. ಯಾವ್ಯಾವ ಬ್ಯಾಂಕಿನಲ್ಲಿ ಗೃಹ ಸಾಲಗಳ ದರ ಎಷ್ಟಿದೆ ಎನ್ನುವ ವಿವರ ಮುಂದಿನ ಸ್ಲೈಡ್​ಗಳಲ್ಲಿ ಇದೆ.

ಬ್ಯಾಂಕ್ ಆಫ್ ಮಹಾರಾಷ್ಟ್ರ ತನ್ನಲ್ಲಿನ ಗೃಹ ಸಾಲದ ದರಗಳನ್ನು ಇನ್ನಷ್ಟು ಇಳಿಸಿದೆ. ಈ ಬ್ಯಾಂಕಿಗಿಂತಲೂ ಕಡಿಮೆ ಬಡ್ಡಿಗೆ ಗೃಹ ಸಾಲ ನೀಡುವ ಬ್ಯಾಂಕುಗಳುಂಟು. ಯಾವ್ಯಾವ ಬ್ಯಾಂಕಿನಲ್ಲಿ ಗೃಹ ಸಾಲಗಳ ದರ ಎಷ್ಟಿದೆ ಎನ್ನುವ ವಿವರ ಮುಂದಿನ ಸ್ಲೈಡ್​ಗಳಲ್ಲಿ ಇದೆ.

2 / 10

ಜಿಐಸಿ ಹೌಸಿಂಗ್ ಫೈನಾನ್ಸ್: ಮಹಾರಾಷ್ಟ್ರ ಮೂಲದ ಈ ಬ್ಯಾಂಕಿನಲ್ಲಿ ಗೃಹ ಸಾಲಕ್ಕೆ ಬಡ್ಡಿ ದರ ಕೇವಲ ಶೇ. 8.10ರಷ್ಟು ಇದೆ. ಇದು ಈಗಿರುವ ಬ್ಯಾಂಕು, ಎನ್​ಬಿಎಫ್​ಸಿಗಳ ಪೈಕಿ ಅತ್ಯಂತ ಕಡಿಮೆ ಹೋಲ್ ಲೋನ್ ದರ ಹೊಂದಿದೆ. ಬೆಂಗಳೂರಿನಲ್ಲೂ ಈ ಬ್ಯಾಂಕಿನ ಶಾಖೆಗಳಿವೆ.

3 / 10

ರೆಪ್ಕೋ: ಬಡ್ಡಿ ದರ ಶೇ. 8.30. ಚೆನ್ನೈನಲ್ಲಿ ಮುಖ್ಯ ಕಚೇರಿ ಇರುವ ರೆಪ್ಕೋ ಹೋಮ್ ಫೈನಾನ್ಸ್ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ಇದರ ಶಾಖೆಗಳು ಕರ್ನಾಟಕದ ಕೆಲವೆಡೆ ಇವೆ.

4 / 10

ಬ್ಯಾಂಕ್ ಆಫ್ ಮಹಾರಾಷ್ಟ್ರ: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.40 ಇದೆ. ಇದರ ಶಾಖೆಗಳು ದೇಶಾದ್ಯಂತ ಇವೆ. ಬೆಂಗಳೂರಿನಲ್ಲೂ ಹಲವು ಕಡೆ ಇದರ ಬ್ರ್ಯಾಂಚುಗಳಿವೆ. ಪಬ್ಲಿಕ್ ಸೆಕ್ಟರ್ ಬ್ಯಾಂಕುಗಳ ಪೈಕಿ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಅತಿ ಕಡಿಮೆ ಗೃಹ ಸಾಲ ದರ ಇದೆ.

5 / 10

ಹೆಚ್​ಡಿಎಫ್​ಸಿ: ಇದು ಗೃಹ ಸಾಲಕ್ಕೆಂದೇ ಇರುವ ಹಣಕಾಸು ಸಂಸ್ಥೆ. ಇದರಲ್ಲಿ ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.45 ಇದೆ. ಹೆಚ್​ಡಿಎಫ್​ಸಿ ಬ್ಯಾಂಕ್​ನ ಅಂಗ ಸಂಸ್ಥೆಯೂ ಆಗಿರುವ ಎಚ್​ಡಿಎಫ್​ಸಿ ಭಾರತದ ಎಲ್ಲೆಡೆ ಶಾಖೆಗಳನ್ನು ಹೊಂದಿದೆ.

6 / 10

ಪಿಎನ್​ಬಿ ಹೌಸಿಂಗ್ ಫೈನಾನ್ಸ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.5 ಇದೆ. ಇದೂ ಕೂಡ ಬೆಂಗಳೂರು ಸೇರಿದಂತೆ ಹಲವೆಡೆ ಶಾಖೆಗಳನ್ನು ಹೊಂದಿದೆ.

7 / 10

ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.55. ಪಬ್ಲಿಕ್ ಸೆಕ್ಟರ್ ಬ್ಯಾಂಕ್ ಆಗಿರುವ ಸಿಬಿಐ ಕರ್ನಾಟಕದ ಹಲವು ಕಡೆ ಬ್ರ್ಯಾಂಚ್ ಹೊಂದಿದೆ.

8 / 10

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಒಬಿ, ಬಜಾಜ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.6 ಇದೆ. ಈ ಮೂರು ಸಂಸ್ಥೆಗಳಲ್ಲಿ ಬಡ್ಡಿ ದರ ಏಕ ರೀತಿಯಲ್ಲಿವೆ. ಯುಬಿಐ ಮತ್ತು ಐಒಬಿ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಾಗಿವೆ. ಎಲ್ಲವೂ ಕೂಡ ಕರ್ನಾಟಕದಲ್ಲಿ ಹಲವು ಶಾಖೆಗಳನ್ನು ಹೊಂದಿವೆ.

9 / 10

ಕೋಟಕ್ ಮಹೀಂದ್ರ ಬ್ಯಾಂಕ್: ಗೃಹ ಸಾಲಕ್ಕೆ ಬಡ್ಡಿ ದರ ಶೇ. 8.65 ಇದೆ. ಇದೂ ಕೂಡ ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. ಎಲ್​ಐಸಿ ಹೌಸಿಂಗ್ ಫೈನಾನ್ಸ್ ಸಂಸ್ಥೆ ಕೂಡ ಇದೇ ಬಡ್ಡಿ ದರ ಆಫರ್ ಮಾಡುತ್ತಿದೆ.

10 / 10

ಆ್ಯಕ್ಸಿಸ್ ಬ್ಯಾಂಕ್, ಆದಿತ್ಯ ಬಿರ್ಲಾ: ಬಡ್ಡಿ ದರ ಶೇ. 8.75 ಇದೆ. ಆದಿತ್ಯ ಬಿರ್ಲಾ ಹೌಸಿಂಗ್ ಫೈನಾನ್ಸ್ ಸಂಸ್ಥೆ ಮತ್ತು ಎಕ್ಸಿಸ್ ಬ್ಯಾಂಕು ಇವು ಕೂಡ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತವೆ.

Published On - 10:35 am, Tue, 14 March 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us