Updated on: Mar 07, 2023 | 7:00 AM
ಕೆಟ್ಟ ಅಭ್ಯಾಸಗಳಿಗೆ ನಾವು ಬಲಿಯಾಗುವುದು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅದು ಸಾಕಷ್ಟು ನಿದ್ರೆ ಮಾಡುವುದಾಗಿರಬಹುದು ಅಥವಾ ವ್ಯಾಯಾಮ ಮಾಡದಿರಬರಬಹುದ. ನಮ್ಮ ಮಾನಸಿಕ ಆರೋಗ್ಯವನ್ನು ಹಾಳು ಮಾಡುವ ಕೆಲ ಕೆಟ್ಟ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳೋಣ.
ವ್ಯಾಯಾಮ ಮಾಡದಿರುವಿಕೆ: ವ್ಯಾಯಾಮವು ನಮ್ಮ ದೇಹವನ್ನು ಮಾತ್ರವಲ್ಲದೆ ನಮ್ಮ ಮನಸ್ಸನ್ನು ಸುಧಾರಿಸುತ್ತದೆ. ಇದು ಕಲಿಕೆಯ ಸಾಮರ್ಥ್ಯವನ್ನು ಸುಧಾರಿಸುತ್ತದೆ. ಇದು ಜ್ಞಾಪಕ ಶಕ್ತಿಯನ್ನೂ ಹೆಚ್ಚಿಸುತ್ತದೆ. ಅದಕ್ಕಾಗಿಯೇ ಪ್ರತಿದಿನ ಕೆಲವು ವ್ಯಾಯಾಮ ಮಾಡುವುದು ಒಳ್ಳೆಯದು.
ಅಶ್ಲೀಲ ವ್ಯಸನ: ಅಶ್ಲೀಲ ವೀಡಿಯೊಗಳನ್ನು ನೋಡುವುದು ಸಹ ನಮ್ಮ ಮೆದುಳಿನ ಮೇಲೆ ಪರಣಾಮ ಬೀರುತ್ತದೆ ಎಂದು ಅನೇಕ ಅಧ್ಯಯನಗಳಿಂದ ತಿಳಿದುಬಂದಿದೆ. ಈ ಕಾರಣದಿಂದಾಗಿ, ಮೆದುಳಿನ ರಾಸಾಯನಿಕ ಸಮತೋಲನವು ತೊಂದರೆಗೊಳಗಾಗುತ್ತದೆ. ಇದು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಮನೆಯೊಳಗೆ ಹೆಚ್ಚು ಸಮಯವಿರುವುದು: ಮನೆಯೊಳಗೆ ಹೆಚ್ಚು ಸಮಯ ಕಳೆಯುವ ಜನರು ಸೂರ್ಯನ ಬೆಳಕನ್ನು ಪಡೆದುಕೊಳ್ಳುವುದಿಲ್ಲ. ಹೀಗಾಗಿ ದೇಹ ಮತ್ತು ಮನಸ್ಸಿಗೆ ಸಿಗಬೇಕಾದ ತಾಜಾತನವೂ ಸಿಗುವುದಿಲ್ಲ. ಇಂತಹ ಸಮಯದಲ್ಲಿ ಖಿನ್ನತೆಯೂ ಉಂಟಾಗಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು.
ಕಡಿಮೆ ನಿದ್ರೆ: ಡಿಜಿಟಲ್ ಯುಗದಲ್ಲಿ, ಜನರು ತಮ್ಮ ಹೆಚ್ಚಿನ ಸಮಯವನ್ನು ಸ್ಮಾರ್ಟ್ ಫೋನ್ ಅಥವಾ ಇತರ ಗ್ಯಾಜೆಟ್‌ಗಳೊಂದಿಗೆ ಕಳೆಯುತ್ತಾರೆ. ಗಂಟೆಗಟ್ಟಲೆ ಫೋನ್‌ನಲ್ಲಿ ಬ್ಯುಸಿಯಾಗಿರುವುದರಿಂದ ನಿದ್ರೆ ಮಾಡುವುದಿಲ್ಲ. ಸರಿಯಾಗಿ ನಿದ್ದೆ ಮಾಡದಿರುವ ಅಭ್ಯಾಸವನ್ನು ರೂಢಿಸಿಕೊಂಡರೆ ಮನಸ್ಸಿನ ಮೇಲೆ ಭಾರ ಹೆಚ್ಚಾಗತೊಡಗುತ್ತದೆ.
ಬೇಡವಾಡ ಆಹಾರ ಸೇವನೆ : ಆಹಾರದ ವಿಷಯದಲ್ಲಿ ಜನರು ಹೆಚ್ಚು ಆರೋಗ್ಯ ಪ್ರಜ್ಞೆಯನ್ನು ಹೊಂದಿರುತ್ತಾರೆ. ಆಹಾರವು ನಮ್ಮ ಮನಸ್ಸು ಮತ್ತು ಮನಸ್ಥಿತಿ ಎರಡರ ಮೇಲೆ ಪರಿಣಾಮ ಬೀರುತ್ತದೆ. ಕರಿದ ಅಥವಾ ಸಂಸ್ಕರಿಸಿದ ಆಹಾರವನ್ನು ತಿನ್ನುವುದು ದೀರ್ಘಕಾಲದ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರಿಂದ ಹೊಟ್ಟೆಯಲ್ಲಿ ಉರಿಯೂತದಂತಹ ಸಮಸ್ಯೆ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.