ಪ್ರಕೃತಿ ಸೌಂದರ್ಯ ದುಪ್ಪಟ್ಟು ಮಾಡಿದ ಮುತ್ತುಗದ ಮರದ ಹೂವು; ಇಲ್ಲಿದೆ ಝಲಕ್
ಸುರೇಶ ನಾಯಕ | Updated By: ಕಿರಣ್ ಹನುಮಂತ್ ಮಾದಾರ್
Updated on:
Feb 24, 2024 | 7:10 PM
ಮುತ್ತುಗದ ಮರದ ಹೂವು, ಬಹುತೇಕ ಸುಗ್ಗಿ ಕಾಲದಲ್ಲಿ ಅರಳುತ್ತದೆ. ಈ ಮರದ ತುಂಬ ಹೂ ತುಂಬಿದಾಗ ಇದನ್ನು ಫಾರೆಸ್ಟ್ ಫೈರ್ ಎಂದೂ ಕರೆಯುತ್ತಾರೆ. ಆರ್ಯುವೇದ ಗ್ರಂಥದಲ್ಲಿ ಮುತ್ತುಗದ ಮರದ ಉಪಯೋಗಗಳನ್ನು ಆನೇಕ ವಿಧದಲ್ಲಿ ಉಲ್ಲೇಖಿಸಲಾಗಿದೆ. ಇದು ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿದೆ. ಮುರಿದಿರುವ ಮೂಳೆ ಕೂಡಿಸಲು ಇದು ಹೆಸರುವಾಸಿಯಾಗಿದೆ.
1 / 6
ಬೀದರ್ ಜಿಲ್ಲೆಯ ವಿವಿಧ ಭಾಗದಲ್ಲಿ ಅರಣ್ಯ ಪ್ರದೇಶದಲ್ಲಿ ಮುತ್ತುಗದ ಮರ ಹೂವು ಬಿಟ್ಟು ನಳ ನಳಿಸುತ್ತಿದೆ. ಕಳೆದ ಒಂದೆರಡು ವರ್ಷಕ್ಕೆ ಹೋಲಿಸಿದರೆ ಅಷ್ಟೇನು ಪ್ರಮಾಣದಲ್ಲಿ ಮುತ್ತುಗದ ಮರ ಹೂವು ಬಿಟ್ಟಿರಲಿಲ್ಲ. ಆದರೆ, ಈ ವರ್ಷವಂತೂ ಮುತ್ತುಗದ ಮರಗಳು ಹೂವಿನಿಂದ ತುಂಬಿ ತುಳುಕುತ್ತಿದ್ದು, ಪ್ರಕೃತಿಯ ಸೌಂದರ್ಯವನ್ನು ದುಪ್ಪಟ್ಟು ಮಾಡಿದೆ.
2 / 6
ಮುತ್ತುಗದ ಮರ ಶಿವರಾತ್ರಿ ಹಬ್ಬದ ಸಮಯದಲ್ಲಿ ಹೂ ಬಿಡುತ್ತದೆ. ಇದರ ಸೌಂದರ್ಯಕ್ಕೆ ಮಾರು ಹೋಗಿರುವ ಆಸ್ತಿಕರು, ಶಿವರಾತ್ರಿ ಹಬ್ಬದಂದು ತಮ್ಮ ನೆಚ್ಚಿನ ದೈವ ಶಿವನಿಗೆ ಮುತ್ತುಗದ ಹೂವನ್ನು ಸಮರ್ಪಿಸಿ ಪೂಜೆ ಸಲ್ಲಿಸೋದು ಸಾಮಾನ್ಯ.
3 / 6
ಈ ಮರದ ಚಕ್ಕೆಯನ್ನು ಹೋಮಗಳಲ್ಲೂ ಕೂಡ ಬಳಸುತ್ತಾರೆ. ಹೀಗಾಗಿ ಮುತ್ತುಗದ ಹೂವು ಪ್ರಕೃತಿಯ ಚೆಲುವನ್ನು ಹೆಚ್ಚಿಸಿರುವುದರ ಜೊತೆಗೆ ಧಾರ್ಮಿಕವಾಗಿಯೂ ಮಹತ್ವ ಪಡೆದುಕೊಂಡಿದೆ.
4 / 6
ಈ ಎಲ್ಲ ಕಾರಣಗಳಿಗಾಗಿಯೇ ಶಿವರಾತ್ರಿ ಹಬ್ಬದ ದಿನವಾದ ಇಂದು ಶಿವನ ಪೂಜೆಗೆ ಮುತ್ತುಗದ ಹೂವು ವಿಶೇಷವಾಗಿ ಸಮರ್ಪಣೆಯಾಗುತ್ತಿದೆ. ಜೊತೆಗೆ ಇಂದಿಗೂ ಕೂಡ ಈ ಮುತ್ತುಗ ಹೂವಿನಿಂದ ಬಣ್ಣವನ್ನ ತಯ್ಯಾರಿಸಿ ಮಕ್ಕಳು ಹೂಳಿಯ ಸಮಯದಲ್ಲಿ ಬಣ್ಣವನ್ನ ಎರಚಿಕೊಂಡು ಖುಷಿ ಪಡುತ್ತಾರೆ.
5 / 6
ಈಗ ಮುತ್ತಗ ಹೂವಿನ ಬಣ್ಣವನ್ನ ಮಕ್ಕಳು ಬಳಸುವುದನ್ನ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದ್ದು, ಕೆಮಿಕಲ್ ಮಿಶ್ರೀತ ಬಣ್ಣವನ್ನ ಬಳಕೆ ಮಾಡುತ್ತಿದ್ದಾರೆ. ಇನ್ನು ಈ ಹೂವು ಬಯಲು ಪ್ರದೇಶದಲ್ಲಿ ಬೆಳೆಯುವ ಮರವಾಗಿದ್ದು ಬೀದರ್ ಜಿಲ್ಲೆಯಲ್ಲಿ ಹೆಚ್ಚು ಮತ್ತಗ ಮರಗಳು ಕಂಡು ಬರುತ್ತವೆ.
6 / 6
ಆರ್ಯುವೇದ ಗ್ರಂಥದಲ್ಲಿ ಮುತ್ತುಗದ ಮರದ ಉಪಯೋಗಗಳನ್ನು ಆನೇಕ ವಿಧದಲ್ಲಿ ಉಲ್ಲೇಖಿಸಲಾಗಿದೆ. ಇದು ಒಗರು, ಖಾರ, ಕಹಿ ಮೂರು ರಸಗಳಿಂದ ಕೂಡಿದ್ದು ಕ್ರಿಮಿನಾಶಕವಾಗಿದೆ. ಮುರಿದಿರುವ ಮೂಳೆ ಕೂಡಿಸಲು ಇದು ಹೆಸರುವಾಸಿಯಾಗಿದೆ.