ಬಿಗ್ ಬಾಸ್​ನಲ್ಲಿ ಇನ್ನೂ ಶುರುವಾಗಿಲ್ಲ ಈ ಸ್ಪರ್ಧಿಗಳ ಆಟ; ಹೀಗೆ ಆದ್ರೆ ಕಷ್ಟ ಇದೆ

Updated on: Sep 18, 2026 | 11:58 AM

ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಿದ್ದರೂ ಕೆಲ ಸ್ಪರ್ಧಿಗಳು ಇನ್ನೂ ತಮ್ಮ ಆಟವನ್ನು ನಿರೀಕ್ಷಿತ ಮಟ್ಟದಲ್ಲಿ ಶುರು ಮಾಡಿಲ್ಲ. ಅವಿನಾಶ್, ಕಾವ್ಯಾ, ವೈಷ್ಣವಿ, ಯಶಸ್ ಹಾಗೂ ಜಗ್ಗು ಮಮ್ಮಿ ಸೇಫ್ ಗೇಮ್ ಆಡುತ್ತಿದ್ದು, ತಕ್ಷಣವೇ ಸಕ್ರಿಯರಾಗದಿದ್ದರೆ ಇವರ ಬಿಗ್ ಬಾಸ್ ಪಯಣ ಬೇಗನೇ ಅಂತ್ಯವಾಗುವ ಸಾಧ್ಯತೆ ದಟ್ಟವಾಗಿದೆ.

1 / 6
ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವು ಸ್ಪರ್ಧಿಗಳು ತಮ್ಮ ಆಟವನ್ನು ಸಾಬೀತು ಮಾಡುಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಅವರ ಆಟಕ್ಕೆ ತೊಂದರೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಬಿಗ್ ಬಾಸ್ ಆಟ ಶುರುವಾಗಿ ಎರಡು ವಾರ ಕಳೆಯುತ್ತಾ ಬಂದಿದೆ. ಆದಾಗ್ಯೂ ಕೆಲವು ಸ್ಪರ್ಧಿಗಳು ತಮ್ಮ ಆಟವನ್ನು ಸಾಬೀತು ಮಾಡುಕೊಂಡಿಲ್ಲ. ಹೀಗೆಯೇ ಮುಂದುವರಿದರೆ ಅವರ ಆಟಕ್ಕೆ ತೊಂದರೆ ಉಂಟಾಗುವ ಎಲ್ಲಾ ಸಾಧ್ಯತೆ ಇದೆ. ಆ ಬಗ್ಗೆ ಇಲ್ಲಿದೆ ವಿವರ.

2 / 6

ವೈಷ್ಣವಿ ಅವರು ಮನೆಯಲ್ಲಿದ್ದರೂ ಅವರ ಉಪಸ್ಥಿತಿ ಗಂಭೀರವಾಗಿ ಯಾರಿಗೂ ತಿಳಿಯುತ್ತಿಲ್ಲ. ಸ್ಪರ್ಧೆಯ ತೀವ್ರತೆಯನ್ನು ಅರ್ಥಮಾಡಿಕೊಂಡು ಪ್ರತಿಯೊಂದು ಸನ್ನಿವೇಶದಲ್ಲೂ ಮುಂಚೂಣಿಯಲ್ಲಿ ನಿಂತು ಆಡಿದರೆ ಮಾತ್ರ ಅವರು ಬಿಗ್ ಬಾಸ್ ಪಯಣದಲ್ಲಿ ಮುಂದೆ ಸಾಗಲು ಸಾಧ್ಯ.

3 / 6

ಕಾವ್ಯಾ ಅವರು ಮನೆಯಲ್ಲಿ ಸದಾ ಶಾಂತವಾಗಿದ್ದು, ಪ್ರಮುಖ ವಿಚಾರಗಳಲ್ಲಿ ಧ್ವನಿ ಎತ್ತುತ್ತಿಲ್ಲ. ಸೇಫ್ ಗೇಮ್ ಆಡಲು ಯತ್ನಿಸುತ್ತಿರುವ ಅವರು, ತಮ್ಮ ಸಾಮರ್ಥ್ಯವನ್ನು ಟಾಸ್ಕ್​ಗಳಲ್ಲಿ ಸಾಬೀತುಪಡಿಸಿ ಕ್ಯಾಮೆರಾ ಕಣ್ಣಿಗೆ ಬೀಳಬೇಕಾದ ಅಗತ್ಯತೆ ಹೆಚ್ಚಾಗಿದೆ.

4 / 6

ಯಶಸ್ ಅವರು ಶಾಂತ ಸ್ವಭಾವದವರಂತೆ ಕಾಣಿಸಿಕೊಳ್ಳುತ್ತಿದ್ದು, ತಮ್ಮ ನಿಜವಾದ ಆಟದ ಶಕ್ತಿಯನ್ನು ಪ್ರದರ್ಶಿಸಿಲ್ಲ. ಮನೆಮಂದಿಯ ಜೊತೆ ಕೇವಲ ಮಾತುಕತೆಗೆ ಸೀಮಿತವಾಗದೆ, ಟಾಸ್ಕ್‌ನಲ್ಲಿ ತಮ್ಮ ವಿನೂತನ ತಂತ್ರಗಳನ್ನು ಬಳಸಿ ಆಟವನ್ನು ಶುರು ಮಾಡಬೇಕಿದೆ.

5 / 6

ಬಿಗ್ ಬಾಸ್ ಮನೆಗೆ ಬಂದಿರುವ ಅವಿನಾಶ್, ಇನ್ನು ಸಂಪೂರ್ಣವಾಗಿ ತಮ್ಮ ಆಟವನ್ನು ಶುರು ಮಾಡಿಲ್ಲ. ಸದ್ಯಕ್ಕೆ ಅವರು ಎಲ್ಲರಿಗೂ ಬುದ್ಧಿವಾದ ಹೇಳುತ್ತಾ ಇದ್ದಾರೆ. ಇನ್ನಾದರೂ ಅವರು ಗೇಮ್‌ನಲ್ಲಿ ಸಕ್ರಿಯವಾಗಿ ತಮ್ಮ ಖದರ್ ತೋರಿಸಬೇಕಿದೆ.

6 / 6

ತಮ್ಮದೇ ಆದ ವಿಭಿನ್ನ ಶೈಲಿಯಿಂದ ಗಮನ ಸೆಳೆದಿದ್ದ ಜಗ್ಗು ಮಮ್ಮಿ, ಗೇಮ್ ವಿಚಾರಕ್ಕೆ ಬಂದರೆ ತೀರಾ ಹಿಂದುಳಿದಿದ್ದಾರೆ. ಮನರಂಜನೆಯೂ ಇಲ್ಲ, ಆಟವೂ ಇಲ್ಲ ಎಂಬಂತಾಗಿದೆ. ಅವರು ಆಟದ ಕಡೆಗೆ ಗಮನ ಹರಿಸದಿದ್ದರೆ ಮನೆಯಲ್ಲಿ ಉಳಿಯುವುದು ಅವರಿಗೆ ಕಷ್ಟವಾಗಬಹುದು.

Published On - 11:57 am, Fri, 18 September 26

ರಾಜೇಶ್ ಹೆಗಡೆ ದುಗ್ಗುಮನೆ

ರಾಜೇಶ್ ಹೆಗಡೆ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us