ಚಿಕ್ಕಣ್ಣನ ಮದುವೆ, ಇಲ್ಲಿದೆ ನೋಡಿ ಆರತಕ್ಷತೆಯ ಸುಂದರ ಚಿತ್ರಗಳು

Updated on: Aug 29, 2026 | 10:54 PM

Chikkanna-Pawana marriage reception: ನಟ ಚಿಕ್ಕಣ್ಣ ಕನ್ನಡ ಚಿತ್ರರಂಗದ ಜನಪ್ರಿಯ ಹಾಸ್ಯ ನಟ, ಈಗ ನಾಯಕ ನಟನಾಗಿಯೂ ಬಡ್ತಿ ಪಡೆದುಕೊಂಡಿದ್ದಾರೆ. ಚಿಕ್ಕಣ್ಣ ಅವರು ಶ್ರೀರಂಗಪಟ್ಟಣದ ಮಹದೇವಪುರದ ಪಾವನಾ ಗೌಡ ಅವರನ್ನು ವಿವಾಹವಾಗುತ್ತಿದ್ದು, ಇಂದು (ಆಗಸ್ಟ್ 29) ಮೈಸೂರಿನಲ್ಲಿ ಅದ್ಧೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಚಾಲ್ತಿಯಲ್ಲಿದೆ.

1 / 9
ಕನ್ನಡದ ಜನಪ್ರಿಯ ಹಾಸ್ಯನಟ, ಇತ್ತೀಚೆಗೆ ನಾಯಕ ನಟನಾಗಿಯೂ ಬಡ್ತಿ ಪಡೆದಿರುವ ಚಿಕ್ಕಣ್ಣ ಇದೀಗ ವಿವಾಹ ಆಗುತ್ತಿದ್ದಾರೆ. ಅವರ ವಿವಾಹ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ನಡೆಯುತ್ತಿದೆ.

ಕನ್ನಡದ ಜನಪ್ರಿಯ ಹಾಸ್ಯನಟ, ಇತ್ತೀಚೆಗೆ ನಾಯಕ ನಟನಾಗಿಯೂ ಬಡ್ತಿ ಪಡೆದಿರುವ ಚಿಕ್ಕಣ್ಣ ಇದೀಗ ವಿವಾಹ ಆಗುತ್ತಿದ್ದಾರೆ. ಅವರ ವಿವಾಹ ಕಾರ್ಯಕ್ರಮಕ್ಕೆ ಮೈಸೂರಿನಲ್ಲಿ ನಡೆಯುತ್ತಿದೆ.

2 / 9

ಮೈಸೂರಿನ ಸ್ಪೆಕ್ಟ್ರಾ ಹಾಲ್​​ನಲ್ಲಿ ಚಿಕ್ಕಣ್ಣ ಅವರ ಮದುವೆ ಸಮಾರಂಭ ನಡೆಯಲಿದ್ದು, ಇಂದು (ಆಗಸ್ಟ್ 29) ಚಿಕ್ಕಣ್ಣ ಹಾಗೂ ವಧು ಪಾವನ ಅವರ ಮದುವೆ ಆರತಕ್ಷತೆ ಅಥವಾ ರಿಸೆಪ್ಷನ್ ಕಾರ್ಯಕ್ರಮ ಆಯೋಜಿತವಾಗಿದೆ.

3 / 9

ಚಿಕ್ಕಣ್ಣ ಸೂಟು ಧರಿಸಿ ಥೇಟ್ ಹೀರೋ ರೀತಿಯಲ್ಲಿ ರೆಡಿ ಆಗಿದ್ದಾರೆ. ಸೂಟಿನಲ್ಲಿ ಚಿಕ್ಕಣ್ಣ ಹಾಸ್ಯ ನಟ ಅಲ್ಲ ಬದಲಿಗೆ ಪ್ಯಾನ್ ಇಂಡಿಯಾ ಹೀರೋ ರೀತಿ ಕಾಣುತ್ತಿದ್ದಾರೆ.

4 / 9

ಚಿಕ್ಕಣ್ಣ ಅವರ ಮದುವೆ ಆಗುತ್ತಿರುವ ವಧು ಪಾವನಾ ಅವರದ್ದು ಮಹದೇವಪುರ. ಹಿರಿಯರು ನೋಡಿ ಒಪ್ಪಿ ನಿಶ್ಚಯಿಸಿರುವ ಮದುವೆ ಇದಾಗಿದೆ. ಪ್ರೇಮ ವಿವಾಹ ಅಲ್ಲ ಬದಲಿಗೆ ಇದೊಂದು ಅರೇಂಜ್ಡ್ ಮ್ಯಾರೇಜ್.

5 / 9

ನಟ ಚಿಕ್ಕಣ್ಣ ಅವರು ಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಹಲವಾರು ರಾಜಕಾರಣಿಗಳು, ಚಿತ್ರರಂಗದ ಸಿನಿಮಾ ನಟ-ನಟಿಯರುಗಳಿಗೆ ವಿವಾಹ ಆಮಂತ್ರಣ ನೀಡಿದ್ದು, ಹಲವರನ್ನು ಮದುವೆಗೆ ಆಹ್ವಾನಿಸಿದ್ದಾರೆ.

6 / 9

ಚಿಕ್ಕಣ್ಣ ಹಾಗೂ ಪಾವನಾ ಅವರ ಮದುವೆ ನಾಳೆ ಅಂದರೆ ಆಗಸ್ಟ್ 20ರಂದು ಮೈಸೂರಿನ ಸ್ಪೆಕ್ಟ್ರಾ ಕನ್​​ವೆನ್ಷನ್ ಸೆಂಟರ್​​ನಲ್ಲಿ ಅದ್ಧೂರಿಯಾಗಿ ನಡೆಯಲಿದೆ. ಈಗಾಗಲೇ ಹಲವು ಚಿತ್ರರಂಗದ ಗಣ್ಯರು ಮದುವೆಯಲ್ಲಿ ಭಾಗಿ ಆಗಿದ್ದಾರೆ.

7 / 9

ಇಂದು ನಡೆಯುತ್ತಿರುವ ಆರತಕ್ಷತೆಯಲ್ಲಿ ಈಗಾಗಲೇ ಹಲವಾರು ಸಿನಿಮಾ ಸೆಲೆಬ್ರಿಟಿಗಳು, ಕೆಲ ರಾಜಕಾರಣಿಗಳು ಸಹ ಹಾಜರಿ ಹಾಕಿದ್ದಾರೆ.

8 / 9

ಚಿಕ್ಕಣ್ಣ ಬಹಳ ಕಷ್ಟಪಟ್ಟು ಈ ಹಂತಕ್ಕೆ ಬೆಳೆದವರು. ಗಾರೆ ಕೆಲಸ ಮಾಡುತ್ತಿದ್ದ ಚಿಕ್ಕಣ್ಣ, ಟಿವಿ ಶೋಗಳಲ್ಲಿ ಭಾಗವಹಿಸಿದರು. ಬಳಿಕ ಸಿನಿಮಾಗಳಿಗೆ ಎಂಟ್ರಿ ಕೊಟ್ಟು ಈ ಹಂತಕ್ಕೆ ಏರಿದ್ದಾರೆ.

9 / 9

ಮದುವೆ ಬಗ್ಗೆ ಚಿಕ್ಕಣ್ಣ ಅವರಿಗೆ ಆಗಾಗ್ಗೆ ಪ್ರಶ್ನೆಗಳು ಎದುರಾಗುತ್ತಲೇ ಇದ್ದವು. ಈಗ-ಆಗ ಎನ್ನುತ್ತಿದ್ದ ಚಿಕ್ಕಣ್ಣ, ಕುಟುಂಬದವರು ನೋಡಿದವರೊಟ್ಟಿಗೆ ಮದುವೆ ಆಗುವುದಾಗಿ ಮೊದಲೇ ಹೇಳಿದ್ದರು.

Published On - 10:51 pm, Sat, 29 August 26

Loading...
Unable to load recommendations.
Follow Us