
ಬೇಸಿಗೆ ಶುರುವಾಗಿದ್ದು, ಈ ಸಮಯದಲ್ಲಿ ನೈಸರ್ಗಿಕ ಪಾನೀಯವೆಂದರೆ ಎಳನೀರು. ಇದು ಬಾಯಿಗೆ ರುಚಿಯನ್ನು ನೀಡುವುದರೊಂ ದಿಗೆ ದೇಹಕ್ಕೆ ಪೋಷಕಾಂಶಗಳು ಮತ್ತು ಖನಿಜಗಳನ್ನು ಒದಗಿಸುತ್ತದೆ. ದಣಿದ ದೇಹಕ್ಕೆ ಚೈತನ್ಯ ನೀಡುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣ: ಎಳೆನೀರಿನಲ್ಲಿ ಪೊಟ್ಯಾಶಿಯಂ ಇರುವುದರಿಂದ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ಮೂತ್ರಪಿಂಡದ ಕಲ್ಲು ನಿವಾರಣೆ: ಪೊಟ್ಯಾಶಿಯಂ, ಕ್ಲೋರೈಡ್ ಮತ್ತು ಸಿಟ್ರೇಟ್ನ್ನು ಅಂಶ ಹೊಂದಿರುವುದರಿಂದ ಮೂತ್ರಪಿಂಡದಲ್ಲಿನ ಕಲ್ಲು ತೆಗೆದುಹಾಕಲು ಎಳೆನೀರು ಸಹಾಯ ಮಾಡುತ್ತದೆ.

ಎಳೆನೀರು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಇದು ನಿಮ್ಮ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಊಟಕ್ಕೆ ಅರ್ಧ ಗಂಟೆ ಮೊದಲು ಎಳೆನೀರು ಕುಡಿಯುವುದರಿಂದ ತೂಕ ಕಡಿಮೆ ಮಾಡಿಕೊಳ್ಳಬಹುದಾಗಿದೆ.

ಈ ಸುಡುವ ಬಿಸಿಲಿನಿಂದ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಇದನ್ನು ತಪ್ಪಿಸಲು ಎಳೆನೀರು ಸಹಕಾರಿಯಾಗಿದೆ. ದೇಹದಲ್ಲಿ ರೋಗನಿರೋಧಕಗಳನ್ನು ಹೆಚ್ಚಿಸುತ್ತದೆ.
Published On - 9:53 pm, Sun, 26 February 23