Credit Card: ಕ್ರೆಡಿಟ್ ಕಾರ್ಡ್ ಬಿಲ್ ಇಎಂಐಗೆ ಪರಿವರ್ತಿಸುವುದು ಒಳ್ಳೆಯದೇ? ಇಲ್ಲಿವೆ ಸಾಧಕ ಬಾಧಕಗಳ ವಿವರ
ಕೆಲವೊಮ್ಮೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವ ಆಫರ್ ನೀಡಿ ಬ್ಯಾಂಕ್ಗಳು ನಿಮಗೆ ಕರೆ ಮಾಡಬಹುದು. ಅಥವಾ ಬಿಲ್ ಹೆಚ್ಚು ಬಂದ ಸಂದರ್ಭದಲ್ಲಿ ಇಎಂಐ ಆಗಿ ಪರಿವರ್ತಿಸುವ ಬಗ್ಗೆ ನೀವೇ ಯೋಚಿಸಬಹುದು. ಆದರೆ, ಬಡ್ಡಿ ದರ ಮತ್ತು ಇತರ ಸಾಧಕ ಬಾಧಕಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಇಎಂಐಗೆ ಪರಿವರ್ತಿಸಿದರೆ ನಷ್ಟ ಅನುಭವಿಸಬೇಕಾಗಬಹುದು. ಹಾಗಿದ್ದರೆ ಕ್ರೆಡಿಟ್ ಕಾರ್ಡ್ ಬಿಲ್ ಅನ್ನು ಇಎಂಐ ಆಗಿ ಪರಿವರ್ತಿಸುವುದರ ಒಳಿತು, ಕೆಡುಕುಗಳೇನು? ಇಲ್ಲಿದೆ ಮಾಹಿತಿ.