WBBL 2024: ಬಿಗ್ ಬ್ಯಾಷ್​ ಲೀಗ್ ಡ್ರಾಫ್ಟ್​ ಪಟ್ಟಿಯಲ್ಲಿ 19 ಭಾರತೀಯರು

|

Updated on: Aug 27, 2024 | 10:04 AM

WBBL 2024: ವುಮೆನ್ಸ್ ಬಿಗ್ ಬ್ಯಾಷ್ ಲೀಗ್​ನ 10ನೇ ಆವೃತ್ತಿಗಾಗಿ ಪ್ರಕಟಿಸಲಾದ ಡ್ರಾಫ್ಟ್​ನಲ್ಲಿ ಭಾರತದ 19 ಆಟಗಾರ್ತಿಯರು ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಿಂದ ತಮಗೆ ಬೇಕಾದವರನ್ನು 8 ಫ್ರಾಂಚೈಸಿಗಳು ಆಯ್ಕೆ ಮಾಡಲಿದ್ದಾರೆ. ಅದರಂತೆ ಈ ಬಾರಿಯ ವುಮೆನ್ಸ್ ಬಿಗ್ ಬ್ಯಾಷ್​ ಲೀಗ್​ನಲ್ಲಿ ಕಾಣಿಸಿಕೊಳ್ಳಲಿರುವ ಭಾರತೀಯ ಆಟಗಾರ್ತಿಯರು ಯಾರೆಲ್ಲಾ ಎಂಬುದೇ ಈಗ ಕುತೂಹಲ.

1 / 5
ಆಸ್ಟ್ರೇಲಿಯಾ ಕ್ರಿಕೆಟ್ ಬೋರ್ಡ್ ಆಯೋಜಿಸುವವುಮೆನ್ಸ್ ಬಿಗ್ ಬ್ಯಾಷ್ ಲೀಗ್​ನ 10ನೇ ಸೀಸನ್​ಗಾಗಿ ಸಿದ್ಧತೆಗಳು ಶುರುವಾಗಿದೆ. ಇದರ ಮೊದಲ ಹೆಜ್ಜೆ ಎಂಬಂತೆ ಇದೀಗ ಎಲ್ಲಾ ಫ್ರಾಂಚೈಸಿಗಳು ಆಟಗಾರ್ತಿಯರ ಆಯ್ಕೆಗೆ ಮುಂದಾಗಿದೆ. ಅದರಂತೆ ಇದೀಗ ಟೀಮ್ ಇಂಡಿಯಾದ ಉಪನಾಯಕಿ ಸ್ಮೃತಿ ಮಂಧಾನ ಅಡಿಲೇಡ್ ಸ್ಟ್ರೈಕರ್ಸ್‌ ತಂಡವನ್ನು ಸೇರಿಕೊಂಡಿದ್ದಾರೆ.

2 / 5
ಈ ಹಿಂದೆ ಸ್ಮೃತಿ ಮಂಧಾನ ಬ್ರಿಸ್ಬೇನ್ ಹೀಟ್, ಹೋಬರ್ಟ್ ಹರಿಕೇನ್ಸ್ ಮತ್ತು ಸಿಡ್ನಿ ಥಂಡರ್ ತಂಡಗಳ ಪರ ಕಣಕ್ಕಿಳಿದಿದ್ದರು. ಈ ಬಾರಿ ಟೀಮ್ ಇಂಡಿಯಾ ಆಟಗಾರ್ತಿಯನ್ನು ಖರೀದಿಸುವಲ್ಲಿ ಅಡಿಲೇಡ್ ಸ್ಟ್ರೈಕರ್ಸ್‌ ತಂಡ ಯಶಸ್ವಿಯಾಗಿದೆ.

3 / 5
ಇನ್ನು ವುಮೆನ್ಸ್ ಬಿಗ್ ಬ್ಯಾಷ್​ ಲೀಗ್​ಗೆ ಪ್ರಕಟಿಸಲಾದ ಡ್ರಾಫ್ಟ್ ಪಟ್ಟಿಯಲ್ಲಿ ಭಾರತದ 19 ಆಟಗಾರ್ತಿಯರ ಹೆಸರು ಕಾಣಿಸಿಕೊಂಡಿದೆ. ಈ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಯಕಿ ಹರ್ಮನ್​ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್​​ನಂತಹ ಸ್ಟಾರ್ ಆಟಗಾರ್ತಿಯರು ಇರುವುದು ವಿಶೇಷ. ಅದರಂತೆ WBBL 2024 ಡ್ರಾಫ್ಟ್ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಆಟಗಾರ್ತಿಯರ ಹೆಸರು ಈ ಕೆಳಗಿನಂತಿದೆ...

4 / 5
ಹರ್ಮನ್‌ಪ್ರೀತ್ ಕೌರ್, ಜೆಮಿಮಾ ರೊಡ್ರಿಗಸ್, ದೀಪ್ತಿ ಶರ್ಮಾ, ಶ್ರೇಯಾಂಕಾ ಪಾಟೀಲ್, ಟಿಟಾಸ್ ಸಾಧು, ಆಶಾ ಸೋಭಾನ, ರಾಧಾ ಯಾದವ್, ಅಮನ್‌ಜೋತ್ ಕೌರ್, ಯಾಸ್ತಿಕಾ ಭಾಟಿಯಾ, ಶಿಖಾ ಪಾಂಡೆ, ಸ್ನೇಹ ರಾಣಾ, ಹೇಮಲತಾ ದಯಾಳನ್, ಸಜನಾ ಸಜೀವನ್, ಮನ್ನತ್ ಕಶ್ಯಪ್, ಮೇಘನಾ ಸಬ್ಬಿನೇನಿ, ವೇದಾ ಕೃಷ್ಣಮೂರ್ತಿ, ಮೋನಾ ಮೇಶ್ರಮ್, ಮೇಘನಾ ಸಿಂಗ್.

5 / 5
ವುಮೆನ್ಸ್ ಬಿಗ್ ಬ್ಯಾಷ್ ಲೀಗ್ ಟಿ20 ಟೂರ್ನಿಯು ಅಕ್ಟೋಬರ್ 27 ರಿಂದ ಶುರುವಾಗಲಿದೆ. ಈ ಟೂರ್ನಿಯಲ್ಲಿ ಒಟ್ಟು 8 ತಂಡಗಳು ಕಣಕ್ಕಿಳಿಯುತ್ತಿದ್ದು, ಅದರಂತೆ ಅಡಿಲೇಡ್ ಸ್ಟ್ರೈಕರ್ಸ್, ಬ್ರಿಸ್ಬೇನ್ ಹೀಟ್, ಹೊಬಾರ್ಟ್ ಹರಿಕೇನ್ಸ್, ಮೆಲ್ಬೋರ್ನ್ ರೆನೆಗೇಡ್ಸ್, ಮೆಲ್ಬೋರ್ನ್ ಸ್ಟಾರ್ಸ್, ಪರ್ತ್ ಸ್ಕಾರ್ಚರ್ಸ್, ಸಿಡ್ನಿ ಸಿಕ್ಸರ್ಸ್ ಮತ್ತು ಸಿಡ್ನಿ ಥಂಡರ್​ ತಂಡಗಳ ನಡುವೆ ಕದನ ನಡೆಯಲಿದೆ.