
ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರು. ಇದರೊಂದಿಗೆ, ಅಭಿಷೇಕ್ ಶರ್ಮಾ ಐರ್ಲೆಂಡ್‌ನಲ್ಲಿ ಅತಿ ವೇಗದ ಟಿ20 ಅರ್ಧಶತಕ ಬಾರಿಸಿದ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಯನ್ನು ನಿರ್ಮಿಸಿದರು (PC-PTI).

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್, ಭಾರತದ ವಿರುದ್ಧ 183 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿತು. ಆದಾಗ್ಯೂ ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಅನುಭವಿ ಸಂಜು ಸ್ಯಾಮ್ಸನ್ ಕೇವಲ 5 ರನ್ಗಳಿಗೆ ಔಟಾದರು. ಆ ಬಳಿಕ ಬಂದವರು ಕೂಡ ಹೆಚ್ಚು ಹೊತ್ತು ಮೈದಾನದಲ್ಲಿ ನಿಲ್ಲಲಿಲ್ಲ (PC-PTI).

ಸಂಜು ಸ್ಯಾಮ್ಸನ್ ಬಳಿಕ ಬಂದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರಂತಹ ಬ್ಯಾಟ್ಸ್‌ಮನ್‌ಗಳು ಕೂಡ ಹೆಚ್ಚು ಹೊತ್ತು ಕ್ರಿಸ್ನಲ್ಲಿ ನಿಲ್ಲಲಿಲ್ಲ. ಆದರೆ ಸತತ ವಿಕೆಟ್ಗಳ ಪತನದ ನಡುವೆಯೂ ಎಂದಿನಂತೆ ತಮ್ಮ ಬ್ಯಾಟಿಂಗ್ ಮುಂದುವರೆಸಿದ ಅಭಿಷೇಕ್ ಶರ್ಮಾ ಭರ್ಜರಿ ಅರ್ಧಶತಕವನ್ನು ಬಾರಿಸಿದರು. ತಮ್ಮ ಇನ್ನಿಂಗ್ಸ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಏಳು ಬೌಂಡರಿಗಳನ್ನು ಬಾರಿಸಿದ ಅಭಿಷೇಕ್ಗೆ ಇದು 11 ನೇ ಅರ್ಧಶತಕವಾಗಿತ್ತು (PC-PTI).

ಅಭಿಷೇಕ್ ಶರ್ಮಾ ಮೊದಲ ಓವರ್‌ನಿಂದಲೇ ಐರಿಶ್ ಬೌಲರ್‌ಗಳ ಮೇಲೆ ಒತ್ತಡ ಹೇರಿದರು. ಎದುರಿಸಿದ ಎರಡನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದ ಅಭಿಷೇಕ್, ಅದರ ನಂತರದ ಎಸೆತದಲ್ಲಿ ಬೌಂಡರಿ ಬಾರಿಸಿದರು. ಎರಡನೇ ಓವರ್‌ನಲ್ಲಿ, ಜೈ ಮುಂಧ್ರಾ ಎಸೆತದಲ್ಲಿ ಶರ್ಮಾ ಅದ್ಭುತ ಸಿಕ್ಸರ್ ಬಾರಿಸಿದರು (PC-PTI).

ಲಿಯಾಮ್ ಮೆಕಾರ್ಥಿ ಎಸೆದ ಓವರ್‌ನಲ್ಲಿ, ಅಭಿಷೇಕ್ ಶರ್ಮಾ ಸ್ಫೋಟಕ ಬ್ಯಾಟಿಂಗ್ ಮಾಡಿ ಐದು ಎಸೆತಗಳಲ್ಲಿ ನಾಲ್ಕು ಬೌಂಡರಿಗಳನ್ನು ಬಾರಿಸಿದರು. ಆದಾಗ್ಯೂ, ಅರ್ಧಶತಕವನ್ನು ತಲುಪಿದ ಕೂಡಲೇ, ಅಭಿಷೇಕ್ ಶರ್ಮಾ 20 ಎಸೆತಗಳಲ್ಲಿ ಐವತ್ತು ರನ್ ಗಳಿಸಿ ವಿಕೆಟ್ ಕಳೆದುಕೊಂಡರು. ಅವರನ್ನು ಲಿಯಾಮ್ ಮೆಕಾರ್ಥಿ ಔಟ್ ಮಾಡಿದರು (PC-PTI).