
ಪಾಕಿಸ್ತಾನ ವಿರುದ್ಧದ ಏಷ್ಯನ್ ಗೇಮ್ಸ್ ಕ್ರಿಕೆಟ್ ಚಿನ್ನದ ಪದಕ ಪಂದ್ಯವನ್ನು ಟೀಂ ಇಂಡಿಯಾ ಗೆದ್ದುಕೊಂಡಿದೆ. ಟೀಂ ಇಂಡಿಯಾದ ಈ ಗೆಲುವಿನಲ್ಲಿ ತಂಡದ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ ಪ್ರಮುಖ ಪಾತ್ರವಹಿಸಿದರು. ಅಭಿಷೇಕ್ ಕೇವಲ 28 ಎಸೆತಗಳಲ್ಲಿ 61 ರನ್ ಬಾರಿಸಿದರು. ಅವರ ಇನ್ನಿಂಗ್ಸ್ನಲ್ಲಿ ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳು ಸೇರಿದ್ದವು(PC-PTI).
ಈ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಷೇಕ್ ಶರ್ಮಾ ಪಾಕಿಸ್ತಾನ ವಿರುದ್ಧ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ನಿರ್ಮಿಸಿದರು. ಈ ಪಂದ್ಯದಲ್ಲಿ ಕೇವಲ 20 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಅಭಿಷೇಕ್ ಪಾಕಿಸ್ತಾನ ವಿರುದ್ಧ ವೇಗದ ಅರ್ಧಶತಕ ಬಾರಿಸಿದ ಭಾರತೀಯ ಆಟಗಾರನೆನಿಸಿಕೊಂಡಿದ್ದಾರೆ. ಈ ಹಿಂದೆ ಈ ತಂಡದ ವಿರುದ್ಧ 24 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದ ಅಭಿಷೇಕ್ ತಮ್ಮದೇ ಆದ ದಾಖಲೆಯನ್ನು ಮುರಿದರು(PC-PTI).
ಸಿಂಗಲ್ ಮೂಲಕ ತಮ್ಮ ಖಾತೆಯನ್ನು ತೆರೆದ ಅಭಿಷೇಕ್ ಶರ್ಮಾ ಎರಡನೇ ಓವರ್‌ನ ಐದನೇ ಎಸೆತದಲ್ಲಿ ಇನ್ನಿಂಗ್ಸ್‌ನ ಮೊದಲ ಸಿಕ್ಸ್ ಬಾರಿಸಿದರು. ಸೈಮ್ ಅಯೂಬ್ ಎಸೆದ ಮೂರನೇ ಓವರ್‌ನಲ್ಲಿ ಒಂದು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ಬಾರಿಸಿದರು. ನಂತರ ಅಭಿಷೇಕ್ ಅಹ್ಮದ್ ಡೇನಿಯಲ್ ಓವರ್‌ನಲ್ಲಿ ಮತ್ತೊಂದು ಸಿಕ್ಸರ್ ಬಾರಿಸಿದರು. ಇದರ ಫಲವಾಗಿ ಪವರ್‌ಪ್ಲೇನಲ್ಲಿಯೇ ಅರ್ಧಶತಕ ತಲುಪಿದರು(PC-PTI).
ಪಾಕಿಸ್ತಾನಿ ಆಟಗಾರರು ಅಭಿಷೇಕ್ ಶರ್ಮಾಗೆ ಒಂದಲ್ಲ ಎರಡಲ್ಲ, ನಾಲ್ಕು ಜೀವದಾನಗಳನ್ನು ನೀಡಿದರು. ಅರಾಫತ್ ಮಿನ್ಹಾಸ್ ಬೌಲಿಂಗ್‌ನಲ್ಲಿ ಡೀಪ್ ಮಿಡ್‌ವಿಕೆಟ್‌ನಲ್ಲಿ ಸೈಮ್ ಅಯೂಬ್ ಕ್ಯಾಚ್ ಕೈಬಿಟ್ಟರೆ, ಆ ನಂತರ ಅಬ್ರಾರ್ ಅಹ್ಮದ್ ಮತ್ತೊಂದು ಕ್ಯಾಚ್ ಕೈಬಿಟ್ಟರು. ವಿಕೆಟ್ ಕೀಪರ್ ಉಸ್ಮಾನ್ ಖಾನ್ ಕೂಡ ಕ್ಯಾಚ್ ಕೈಬಿಟ್ಟರು. ಇತ್ತ ವೇಗದ ಬೌಲರ್ ಅಹ್ಮದ್ ಡೇನಿಯಲ್ ರನ್ ಔಟ್ ಮಾಡುವ ಅವಕಾಶವನ್ನು ಕಳೆದುಕೊಂಡರು(PC-PTI).
ಈ ಜೀವದಾನಗಳ ಲಾಭ ಪಡೆದುಕೊಂಡ ಅಭಿಷೇಕ್ ಪವರ್‌ಪ್ಲೇಯಲ್ಲಿ ತಂಡವವನ್ನು 81 ರನ್ಗಳಿಗೆ ಕೊಂಡೊಯ್ದರು. ಇದು ಪಾಕಿಸ್ತಾನ ವಿರುದ್ಧ ಭಾರತದ ಅತ್ಯಧಿಕ ಪವರ್‌ಪ್ಲೇ ಸ್ಕೋರ್ ಕೂಡ ಆಗಿದೆ. ಇನ್ನು ಇದೇ ಪಂದ್ಯದಲ್ಲಿ ಅಭಿಷೇಕ್ ಟಿ20 ಕ್ರಿಕೆಟ್ನಲ್ಲಿ 400 ಸಿಕ್ಸರ್‌ಗಳನ್ನು ಪೂರ್ಣಗೊಳಿಸಿದರು(PC-PTI).
ಇದರೊಂದಿಗೆ ಅಭಿಷೇಕ್ ಕ್ರಿಸ್ ಗೇಲ್ಗಿಂತ ಕಡಿಮೆ ಎಸೆತಗಳಲ್ಲಿ 400 ಸಿಕ್ಸ್‌ಗಳನ್ನು ಬಾರಿಸಿದ ಸಾಧನೆ ಮಾಡಿದರು. ಅಭಿಷೇಕ್ 3513 ಎಸೆತಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆಂಡ್ರೆ ರಸೆಲ್ 3027 ಎಸೆತಗಳಲ್ಲಿ 400 ಸಿಕ್ಸ್‌ಗಳನ್ನು ಬಾರಿಸಿದ್ದರು(PC-PTI).