ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ವಿಶ್ವಕಪ್‌ನ ಅದ್ಧೂರಿ ಉದ್ಘಾಟನಾ ಸಮಾರಂಭ: ಯಾವಾಗ ನಡೆಯಲಿದೆ?

|

Updated on: Aug 28, 2023 | 7:36 AM

ICC ODI World Cup 2023 Opening Ceremony: ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಸಿಸಿ ಏಕದಿನ ವಿಶ್ವಕಪ್ ಪ್ರಾರಂಭವಾಗುವ ಒಂದು ದಿನದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಅದ್ಧೂರಿ ಓಪನಿಂಗ್ ಸೆರಮನಿ ನಡೆಯಲಿದೆ

1 / 8
12 ವರ್ಷಗಳ ಕಾಯುವಿಕೆಯ ನಂತರ ಐಸಿಸಿ ಏಕದಿನ ವಿಶ್ವಕಪ್‌ ಭಾರತಕ್ಕೆ ಮರಳಿದೆ. ಅಕ್ಟೋಬರ್-ನವೆಂಬರ್​ನಲ್ಲಿ ನಡೆಯಲಿರುವ ಟೂರ್ನಿಗೆ ಇದೇ ಮೊದಲ ಬಾರಿ ದೇಶವು ಸಂಪೂರ್ಣವಾಗಿ ಆತಿಥ್ಯ ವಹಿಸುತ್ತದೆ. 2011 ರಲ್ಲಿ ಭಾರತವು ಬಾಂಗ್ಲಾದೇಶ ಮತ್ತು ಶ್ರೀಲಂಕಾದೊಂದಿಗೆ ಆತಿಥ್ಯ ವಹಿಸಿತ್ತು. 1996 ಮತ್ತು 1987 ರಲ್ಲಿ ಕೂಡ ಭಾರತ ಮತ್ತೊಂದು ದೇಶದೊಂದಿಗೆ ಹೋಸ್ಟಿಂಗ್ ಹಕ್ಕನ್ನು ಹಂಚಿಕೊಂಡಿತ್ತು.

2 / 8
ಇದೀಗ ಏಕದಿನ ವಿಶ್ವಕಪ್‌ನ 11 ನೇ ಆವೃತ್ತಿಯು ಅಕ್ಟೋಬರ್ 5 ರಿಂದ ನವೆಂಬರ್ 19 ರವರೆಗೆ ದೇಶದ ವಿವಿಧ ಮೈದಾನದಲ್ಲಿ ನಡೆಯಲಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣ ಅಕ್ಟೋಬರ್ 14 ರಂದು ಭಾರತ ಮತ್ತು ಪಾಕಿಸ್ತಾನ ನಡುವಿನ ಆರಂಭಿಕ ಪಂದ್ಯ, ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ.

3 / 8
ಭಾರತದ ಹೆಮ್ಮೆಯ ಕ್ರೀಡಾಂಗಣ ಎಂದು ಹೆಸರು ಪಡೆದುಕೊಂಡಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಪ್ರಾರಂಭವಾಗುವ ಒಂದು ದಿನದ ಮೊದಲು ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ. ಅಕ್ಟೋಬರ್ 4 ರಂದು ಅದ್ಧೂರಿ ಓಪನಿಂಗ್ ಸೆರಮನಿ ನಡೆಯಲಿದೆ ಎಂದು Cricbuzz ವರದಿ ಮಾಡಿದೆ.

4 / 8
ಕಳೆದ ವರ್ಷ, ಆಸ್ಟ್ರೇಲಿಯಾದಲ್ಲಿ 2022 ರ ಟಿ 20 ವಿಶ್ವಕಪ್ ಪ್ರಾರಂಭವಾಗುವ ಮೊದಲು ಎಲ್ಲಾ ನಾಯಕರು ಜಂಟಿಯಾಗಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಐಸಿಸಿ ಈ ವರ್ಷವೂ ಇದೇ ರೀತಿಯ ಪ್ಲಾನ್ ಆಯೋಜಿಸಿದೆ. ಉದ್ಘಾಟನಾ ಸಮಾರಂಭಕ್ಕೆ ಎಲ್ಲ ತಂಡದ ನಾಯಕರು ಹಾಜರಿರುವ ಸಾಧ್ಯತೆ ಇದೆ.

5 / 8
ಭಾರತವು ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಆಡುವ ಮೂಲಕ ವಿಶ್ವಕಪ್ ಅಭಿಯಾನವನ್ನು ಪ್ರಾರಂಭಿಸಲಿದೆ. ಅಫ್ಘಾನಿಸ್ತಾನ (ಅಕ್ಟೋಬರ್ 11), ಪಾಕಿಸ್ತಾನ (ಅಕ್ಟೋಬರ್ 14), ಬಾಂಗ್ಲಾದೇಶ (ಅಕ್ಟೋಬರ್ 19), ನ್ಯೂಜಿಲೆಂಡ್ (ಅಕ್ಟೋಬರ್ 22), ಇಂಗ್ಲೆಂಡ್ (ಅಕ್ಟೋಬರ್ 29), ಶ್ರೀಲಂಕಾ (ಅ. ನವೆಂಬರ್ 2), ದಕ್ಷಿಣ ಆಫ್ರಿಕಾ (ನವೆಂಬರ್ 5) ಮತ್ತು ನೆದರ್ಲ್ಯಾಂಡ್ಸ್ (ನವೆಂಬರ್ 12) ವಿರುದ್ಧ ಮುಂದಿನ ಪಂದ್ಯಗಳನ್ನು ಆಡಲಿದೆ.

6 / 8
ನವೆಂಬರ್ 15 ರಂದು ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಸೆಮಿಫೈನಲ್ ನಡೆಯಲಿದೆ. ನವೆಂಬರ್ 16 ರಂದು ಈಡನ್ ಗಾರ್ಡನ್ಸ್ ಎರಡನೇ ಸೆಮಿಫೈನಲ್ ಅನ್ನು ಆಯೋಜಿಸಲಾಗಿದೆ. ಐಸಿಸಿ ಈವೆಂಟ್‌ನ ಮೆಗಾ-ಫೈನಲ್ ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ.

7 / 8
ವಿಶ್ವಕಪ್‌ಗೆ ತಮ್ಮ ತಂಡವನ್ನು ಪ್ರಕಟಿಸಲು ಎಲ್ಲಾ ತಂಡಗಳಿಗೆ ಸೆಪ್ಟೆಂಬರ್ 5 ರ ವರೆಗೆ ಅವಕಾಶವಿದೆ. ಬಳಿಕ ಸೆಪ್ಟೆಂಬರ್ 27 ಒಳಗೆ ತಮ್ಮ ತಂಡದಲ್ಲಿ ಬದಲಾವಣೆಗಳನ್ನು ಮಾಡಬಹುದು. ಭಾರತ ತಂಡ ಈಗಾಗಲೇ ಸಿದ್ದತೆ ನಡೆಸುತ್ತಿದೆ. ಸದ್ಯ ಏಷ್ಯಾಕಪ್​ಗೆ ಆಯ್ಕೆ ಆಗಿರುವ 18 ಆಟಗಾರರ ಪೈಕಿ 15 ಆಟಗಾರರನ್ನು ಅಂತಿಮವಾಗಿ ಆಯ್ಕೆ ಮಾಡುವ ನಿರೀಕ್ಷೆ ಇದೆ.

8 / 8
ಏಷ್ಯಾಕಪ್ 2023 ಟೂರ್ನಿ ಆಗಸ್ಟ್ 30 ರಿಂದ ಶುರುವಾಗಲಿದೆ. ಇದು ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಟೀಮ್ ಇಂಡಿಯಾ ಸೆಪ್ಟೆಂಬರ್ 2 ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. ಮೊದಲ ಪಂದ್ಯ ಪಾಕ್-ನೇಪಾಳ ನಡುವೆ ಆ. 30 ರಂದು ನಡೆಯಲಿದೆ.