Updated on: Jun 10, 2023 | 7:01 PM
ಸದ್ಯ ಟೀಂ ಇಂಡಿಯಾದಿಂದ ಹೊರಗಿರುವ ಯುವ ವೇಗಿ ಅರ್ಷ್ದೀಪ್ ಸಿಂಗ್ ಐಪಿಎಲ್ ನಂತರ ಇದೀಗ ಹೊಸ ತಂಡದೊಂದಿಗೆ ಕಣಕ್ಕಿಳಿಯಲು ತಯಾರಿ ನಡೆಸಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಕೌಂಟಿ ಚಾಂಪಿಯನ್ಶಿಪ್ನಲ್ಲಿ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಕಣಕ್ಕಿಳಿಯುತ್ತಿದ್ದಾರೆ.
ಈ ಸೀಸನ್ನ ಐದು ಪಂದ್ಯಗಳಲ್ಲಿ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಆಡಲ್ಲಿರುವ ಕೆಂಟ್ ಕೌಂಟಿ ಕ್ರಿಕೆಟ್ ಕ್ಲಬ್ ಪರ ಭಾನುವಾರದಿಂದ ಪ್ರಾರಂಭವಾಗುವ ಸರ್ರೆ ತಂಡದ ವಿರುದ್ಧದ ಪಂದ್ಯದಲ್ಲಿ ಆಡಲಿದ್ದಾರೆ. 2022 ರಲ್ಲಿ ನಡೆದ ಟಿ20 ವಿಶ್ವಕಪ್ನಲ್ಲಿ ಅರ್ಷ್ದೀಪ್ ಅದ್ಭುತ ಪ್ರದರ್ಶನ ನೀಡಿದ ಕಾರಣ ಕೆಂಟ್ ಈ ವರ್ಷದ ಮಾರ್ಚ್ ತಿಂಗಳಲ್ಲಿ ಅರ್ಷ್ದೀಪ್ ಜೊತೆಗೆ ಒಪ್ಪಂದ ಮಾಡಿಕೊಂಡಿತ್ತು.
2021 ರಲ್ಲಿ ತಮ್ಮ ಚೊಚ್ಚಲ ಟಿ20 ಪಂದ್ಯವನ್ನಾಡಿದ ಅರ್ಷ್ದೀಪ್, ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತದ ಬೌಲಿಂಗ್ ದಾಳಿಯನ್ನು ಮುನ್ನಡೆಸಿದ್ದರು. ಇಡೀ ಪಂದ್ಯಾವಳಿಯಲ್ಲಿ ಆಡಿದ ಆರು ಪಂದ್ಯಗಳಲ್ಲಿ 15.60 ರ ಸರಾಸರಿಯಲ್ಲಿ 10 ವಿಕೆಟ್ ಉರುಳಿಸಿದ್ದರು.
ಒಟ್ಟಾರೆಯಾಗಿ, ಅರ್ಷ್ದೀಪ್ 26 ಟಿ20 ಪಂದ್ಯಗಳಲ್ಲಿ 17.78 ಸರಾಸರಿಯಲ್ಲಿ 41 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು ಏಕದಿನ ಕ್ರಿಕೆಟ್ನಲ್ಲಿ 3 ಪಂದ್ಯಗಳನ್ನಾಡಿರುವ ಅರ್ಷ್ದೀಪ್ ಈ ಸ್ವರೂಪದಲ್ಲಿ ಇನ್ನೂ ವಿಕೆಟ್ ಪಡೆದಿಲ್ಲ. ಐಪಿಎಲ್ನಲ್ಲಿ 51 ಪಂದ್ಯಗಳನ್ನಾಡಿರುವ ಅರ್ಷ್ದೀಪ್ 57 ವಿಕೆಟ್ ಪಡೆದಿದ್ದಾರೆ.
ಇನ್ನು ಕೆಂಟ್ ಪರ ಕಣಕ್ಕಿಳಿಯುತ್ತಿರುವ ಬಗ್ಗೆ ಹರ್ಷವ್ಯಕ್ತಪಡಿಸಿದ ಅರ್ಷ್ದೀಪ್, ನಾನು ಇಂಗ್ಲೆಂಡ್‌ನಲ್ಲಿ ರೆಡ್-ಬಾಲ್ ಕ್ರಿಕೆಟ್ ಆಡಲು ಉತ್ಸುಕನಾಗಿದ್ದೇನೆ. ಪ್ರಥಮ ದರ್ಜೆ ಪಂದ್ಯದಲ್ಲಿ ನನ್ನ ಕೌಶಲ್ಯವನ್ನು ಸುಧಾರಿಸಲು ಉತ್ಸುಕನಾಗಿದ್ದೇನೆ. ಕೆಂಟ್ ಸದಸ್ಯರು ಮತ್ತು ಬೆಂಬಲಿಗರ ಮುಂದೆ ಪ್ರದರ್ಶನ ನೀಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.