ಇಂಗ್ಲೆಂಡ್‌ ನಾಯಕ ಹ್ಯಾರಿ ಬ್ರೂಕ್​ಗೆ 36 ಲಕ್ಷ ರೂ. ದಂಡ

Updated on: Jan 08, 2026 | 4:21 PM

Harry Brook fine: ಆಸ್ಟ್ರೇಲಿಯಾ ವಿರುದ್ಧ ಆಶಸ್ ಸರಣಿ ಸೋತ ಬಳಿಕ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ಗೆ ಆಘಾತ ಎದುರಾಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಬಾರ್ ಬೌನ್ಸರ್ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಅವರಿಗೆ 36 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ಘಟನೆಗಾಗಿ ಬ್ರೂಕ್ ಕ್ಷಮೆಯಾಚಿಸಿದ್ದು, ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ. ಇದೇ ರೀತಿ ಇಂಗ್ಲೆಂಡ್‌ನ ಇತರೆ ಆಟಗಾರರ ವಿರುದ್ಧವೂ ಮದ್ಯಪಾನದ ಆರೋಪಗಳು ಕೇಳಿಬಂದಿವೆ.

1 / 6
ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವೆ ನಡೆದ ಪ್ರತಿಷ್ಠಿತ ಆಶಸ್ ಸರಣಿಗೆ ತೆರೆ ಬಿದ್ದಿದೆ. ಆತಿಥೇಯ ಆಸ್ಟ್ರೇಲಿಯಾ ತಂಡ ಈ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿದೆ. ಈ ಮೂಲಕ ಕಾಂಗರೂಗಳ ನಾಡಲ್ಲಿ ಆಶಸ್ ಸರಣಿ ಗೆಲ್ಲುವ ಇರಾದೆಯಲ್ಲಿದ್ದ ಇಂಗ್ಲೆಂಡ್‌ ಹೀನಾಯ ಸೋಲಿನೊಂದಿಗೆ ತವರಿಗೆ ಮರಳಲಿದೆ. ಇದೆಲ್ಲದರ ನಡುವೆ ಇಂಗ್ಲೆಂಡ್‌ ಏಕದಿನ ಹಾಗೂ ಟಿ20 ತಂಡದ ನಾಯಕ ಹ್ಯಾರಿ ಬ್ರೂಕ್​ಗೆ ದಂಡದ ರೂಪದಲ್ಲಿ ಆಘಾತವೊಂದು ಎದುರಾಗಿದೆ.

2 / 6
ಆಶಸ್ ಸರಣಿಯಲ್ಲಿ ಇಂಗ್ಲೆಂಡ್‌ ಪರ ಆಡಿದ್ದ ಸ್ಟಾರ್ ಆಟಗಾರ ಹ್ಯಾರಿ ಬ್ರೂಕ್, ಬಾರ್‌ನಲ್ಲಿ ಬೌನ್ಸರ್ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ತಪ್ಪಿತಸ್ಥರೆಂದು ಸಾಭೀತಾಗಿದ್ದು, ಅವರಿಗೆ ಬರೋಬ್ಬರಿ 36 ಲಕ್ಷ ರೂಗಳನ್ನು ದಂಡವಾಗಿ ವಿಧಿಸಲಾಗಿದೆ. ವಾಸ್ತವವಾಗಿ ಆಶಸ್‌ಗೂ ಮೊದಲು ನಡೆದಿದ್ದ ನ್ಯೂಜಿಲೆಂಡ್‌ ಪ್ರವಾಸದಲ್ಲಿ ಬ್ರೂಕ್, ಬಾರ್ ಬೌನ್ಸರ್ ಜೊತೆ ಜಗಳವಾಡಿದ್ದರು.

3 / 6
ದಿ ಟೆಲಿಗ್ರಾಫ್ ಪ್ರಕಾರ, ವೆಲ್ಲಿಂಗ್ಟನ್‌ನಲ್ಲಿ ನಡೆದ ಮೂರನೇ ಏಕದಿನ ಪಂದ್ಯಕ್ಕೂ ಮುನ್ನ ಈ ಘಟನೆ ನಡೆದಿತ್ತು. ವಾಸ್ತವವಾಗಿ ಅತಿಯಾಗಿ ಮದ್ಯಪಾನ್ ಮಾಡಿದ್ದ ಹ್ಯಾರಿ ಬ್ರೂಕ್‌ಗೆ ನೈಟ್‌ಕ್ಲಬ್‌ಗೆ ಪ್ರವೇಶ ನಿರಾಕರಿಸಲಾಯಿತು. ಇದರಿಂದ ತಾಳ್ಮೆ ಕಳೆದುಕೊಂಡ ಬ್ರೂಕ್, ಬೌನ್ಸರ್ ಜೊತೆ ಜಗಳಕ್ಕಿಳಿದಿದ್ದರು. ಅಚ್ಚರಿಯೆಂದರೆ ಜಗಳ ಮಾಡಿದ್ದ ಬ್ರೂಕ್ ಅವರೇ ಈ ಘಟನೆಯ ಬಗ್ಗೆ ಇಂಗ್ಲೆಂಡ್ ತಂಡಕ್ಕೆ ವರದಿ ಮಾಡಿದ್ದರು.

4 / 6
ಅದಾದ ಬಳಿಕ ಹ್ಯಾರಿ ಬ್ರೂಕ್ ವಿರುದ್ಧ ತನಿಖೆ ನಡೆಸಿದ್ದ ಇಂಗ್ಲೆಂಡ್ ಕ್ರಿಕೆಟ್ ಮಂಡಳಿಯು ತಪ್ಪಿತಸ್ಥರೆಂದು ಸಾಬೀತಾಗಿರುವ ಬ್ರೂಕ್‌ಗೆ 3.6 ಮಿಲಿಯನ್​ಗಿಂತ ಹೆಚ್ಚು ದಂಡವನ್ನು ವಿಧಿಸಿದೆ. ಆದರೂ ಅವರನ್ನು ಟಿ20 ಮತ್ತು ಏಕದಿನ ತಂಡಗಳ ನಾಯಕನಾಗಿ ಉಳಿಸಿಕೊಳ್ಳಲಾಗಿದೆ. ಬ್ರೂಕ್ ತಾನು ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ್ದಾರೆ.

5 / 6
‘ಇಂಗ್ಲೆಂಡ್ ಪರ ಆಡುವುದು ನನ್ನ ಅತ್ಯಂತ ದೊಡ್ಡ ಗೌರವ, ನಾನು ಅದನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಮತ್ತು ನನ್ನ ತಂಡದ ಸದಸ್ಯರು, ತರಬೇತುದಾರರು ಮತ್ತು ಬೆಂಬಲಿಗರನ್ನು ನಿರಾಶೆಗೊಳಿಸಿದ್ದಕ್ಕಾಗಿ ನಾನು ತೀವ್ರವಾಗಿ ವಿಷಾದಿಸುತ್ತೇನೆ. ನಾನು ಮಾಡಿದ ತಪ್ಪಿಗೆ ನಾನು ಕ್ಷಮೆಯಾಚಿಸುತ್ತೇನೆ. ನನ್ನ ನಡವಳಿಕೆ, ನನಗೆ ಮತ್ತು ಇಂಗ್ಲೆಂಡ್ ತಂಡಕ್ಕೆ ಮುಜುಗರವನ್ನುಂಟುಮಾಡಿದೆ ಎಂದು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಹೀಗಾಗಿ ನಾನು ಎಲ್ಲರನ್ನೂ ಕ್ಷಮೆಯಾಚಿಸುತ್ತೇನೆ ಮತ್ತು ಇದು ಮತ್ತೆ ಎಂದಿಗೂ ಸಂಭವಿಸದಂತೆ ನೋಡಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

6 / 6
ಬ್ರೂಕ್ ಮಾತ್ರವಲ್ಲ, ಇಂಗ್ಲೆಂಡ್‌ನ ಇತರ ಆಟಗಾರರು ಮೇಲೂ ಇದೇ ರೀತಿಯ ಆರೋಪಗಳು ಕೇಳಿಬಂದಿವೆ. ಆಶಸ್ ಸರಣಿಯ ಸಮಯದಲ್ಲಿ ಬೆನ್ ಡಕೆಟ್ ಮೇಲೆ ಅತಿಯಾದ ಮದ್ಯಪಾನ ಮಾಡಿದ ಆರೋಪ ಹೊರಿಸಲಾಗಿತ್ತು. ಪ್ರವಾಸದ ಉದ್ದಕ್ಕೂ ಹಲವಾರು ಆಟಗಾರರು ನಿರಂತರವಾಗಿ ಮದ್ಯಪಾನ ಮಾಡುತ್ತಿದ್ದರು ಎಂದು ಕೆಲವು ಮಾಧ್ಯಮಗಳು ವರದಿ ಕೂಡ ಮಾಡಿದ್ದವು. ಹೀಗಾಗಿ ಮುಂದಿನ ದಿನಗಳಲ್ಲಿ ಆಡಳಿತ ಮಂಡಳಿ ಆಟಗಾರರ ವಿರುದ್ಧ ಯಾವ ರೀತಿಯ ಕ್ರಮಕೈಗೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.