
ಹೈಬ್ರಿಡ್ ಮಾದರಿಯಲ್ಲಿ ಶ್ರೀಲಂಕಾ ಮತ್ತು ಪಾಕಿಸ್ತಾನದಲ್ಲಿ ನಡೆಯುತ್ತಿರುವ ಏಷ್ಯಾಕಪ್ 2023 ಟೂರ್ನಿಗೆ ಮಳೆಯ ಕಾಟ ಎಲ್ಲಿಲ್ಲದ ಕಾಡುತ್ತಿದೆ. ಇಡೀ ವಿಶ್ವವೇ ಕಾದುಕುಳಿತಿದ್ದ, ಭಾರೀ ರೋಚಕತೆ ಸೃಷ್ಟಿಸಿದ್ದ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಕೂಡ ಮಳೆಯಿಂದಾಗಿ ಪೂರ್ಣಗೊಳ್ಳಲಿದೆ ರದ್ದುಗೊಂಡಿತು.

ಇದೀಗ ಶ್ರೀಲಂಕಾದಲ್ಲಿ ನಡೆಯಲಿರುವ ಮುಂಬರುವ ಪಂದ್ಯಗಳಿಗೂ ಮಳೆಯ ಕಾಟ ಇರಲಿದೆ ಎಂದು ಹೇಳಲಾಗಿದೆ. ಇಂದು ಭಾರತ ಹಾಗೂ ನೇಪಾಳ ತಂಡಗಳು ಏಷ್ಯಾಕಪ್ನ ಐದನೇ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಪಲ್ಲಕೆಲೆಯಲ್ಲಿ ನಡೆಯಲಿರುವ ಈ ಪಂದ್ಯಕ್ಕೂ ವರುಣ ಅಡ್ಡಿಪಡಿಸಲಿದ್ದಾನಂತೆ.

ಸಾಮಾನ್ಯವಾಗಿ ಆಗಸ್ಟ್-ಸೆಪ್ಟೆಂಬರ್ ಅವಧಿಯಲ್ಲಿ ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತದೆ. ಹೀಗಾಗಿ ಲಂಕಾ ಕ್ರಿಕೆಟ್ ಮಂಡಳಿ ಈ ತಿಂಗಳುಗಳಲ್ಲಿ ಯಾವುದೇ ಪಂದ್ಯವನ್ನು ನಿಗದಿಪಡಿಸುವುದಿಲ್ಲ. ಆದರೆ, ಪಾಕಿಸ್ತಾನಕ್ಕೆ ತೆರಳಲು ಭಾರತಕ್ಕೆ ಸರ್ಕಾರದ ಅನುಮತಿ ಇಲ್ಲದ ಕಾರಣ ಶ್ರೀಲಂಕಾಕ್ಕೆ ತನ್ನ ನಾಡಿನಲ್ಲಿ ಏಷ್ಯಾಕಪ್ ಆಯೋಜಿಸುವುದು ಅನಿವಾರ್ಯವಾಗಿದ್ದವು.

ಈ ಕಾರಣಕ್ಕಾಗಿ ಲಂಕಾದಲ್ಲೇ ಮಳೆಯ ನಡುವೆ ಪಂದ್ಯವನ್ನು ನಡೆಸಲಾಗುತ್ತಿದೆ. ಆದರೀಗ ಕೊಲಂಬೊದಲ್ಲಿ ಎಡೆಬಿಡದೆ ಧಾರಾಕಾರ ಮಳೆ ಸುರಿಯುತ್ತಿದೆ. ಇಲ್ಲಿ ಏಷ್ಯಾಕಪ್ 2023ರ ಸೂಪರ್-4 ಮತ್ತು ಫೈನಲ್ ಪಂದ್ಯವನ್ನು ಆಯೋಜಿಸಲಾಗಿದೆ. ಮಳೆ ಬಿಡುವ ಲಕ್ಷಣಗಳು ಗೋಚರಿಸದ ಕಾರಣ ಎಸಿಸಿ ಪಂದ್ಯವನ್ನು ಕೊಲಂಬೊದಿಂದ ಬೇರೆಡೆ ಶಿಫ್ಟ್ ಮಾಡಲು ಯೋಚಿಸುತ್ತಿದೆ.

ಮಾಹಿತಿಯ ಪ್ರಕಾರ, ಮಳೆಯ ಭೀತಿಯಿಂದಾಗಿ ಏಷ್ಯಾಕಪ್ 2023 ರ ಫೈನಲ್ ಮತ್ತು ಸೂಪರ್-4 ಪಂದ್ಯಗಳ ಸ್ಥಳವನ್ನು ಕೊಲಂಬೊದಿಂದ ಪಲ್ಲೆಕೆಲೆಗೆ ಸ್ಥಳಾಂತರಿಸುವ ಸಾಧ್ಯತೆಯಿದೆ. ಎಸಿಸಿ ಪ್ರಸ್ತುತ ಶ್ರೀಲಂಕಾ ಕ್ರಿಕೆಟ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೊಂದಿಗೆ ಸ್ಥಳ ಬದಲಾವಣೆಯ ಬಗ್ಗೆ ಚರ್ಚೆಯಲ್ಲಿ ತೊಡಗಿದೆ.

ಪಲ್ಲೆಕೆಲೆ, ದಂಬುಲ್ಲಾ ಮತ್ತು ಹಂಬಂಟೋಟಾ ಮೂರು ಸ್ಥಳಗಳನ್ನು ಪರಿಗಣಿಸಲಾಗುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್ ಹೇಳಿದೆ. ಭಾಗವಹಿಸುವ ಆರು ತಂಡಗಳಿಗೆ ಕೂಡ ಸ್ಥಳದ ಬದಲಾವಣೆಯ ಬಗ್ಗೆ ತಿಳಿಸಲಾಗಿದೆ. ಪಲ್ಲೆಕೆಲೆಯು ಪ್ರಸ್ತುತ ಏಷ್ಯಾಕಪ್ ಲೀಗ್ ಪಂದ್ಯಗಳನ್ನು ಆಯೋಜಿಸುತ್ತಿದೆ. ಡಂಬುಲ್ಲಾ ಸ್ಥಳ ಪಲ್ಲೆಕೆಲೆಯಿಂದ ಸುಮಾರು 70 ಕಿಲೋಮೀಟರ್ ದೂರದಲ್ಲಿದೆ.

ಆದಾಗ್ಯೂ, SLC ಅಧಿಕಾರಿಯೊಬ್ಬರು ದಂಬುಲಾದ ರಂಗಿರಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಇಷ್ಟು ಪಂದ್ಯಗಳನ್ನು ಅಲ್ಪಾವಧಿಯಲ್ಲಿ ಆಯೋಜಿಸಲು ಸಿದ್ಧವಾಗಿಲ್ಲ ಎಂದು ಹೇಳಿದ್ದಾರೆ. ಹಂಬಂಟೋಟಾದಲ್ಲಿ ಮಳೆಯ ಯಾವುದೇ ಲಕ್ಷಣವಿಲ್ಲವಂತೆ.

ಜೊತೆಗೆ ಮಹಿಂದಾ ರಾಜಪಕ್ಸೆ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಅನ್ನು ಕೂಡ ಎಸಿಸಿ ಮೌಲ್ಯಮಾಪನ ಮಾಡುತ್ತಿದೆ. ಪಂದ್ಯವನ್ನು ಸ್ಥಳಾಂತರಿಸುವ ಬಗ್ಗೆ ಎಸಿಸಿ ಎರಡು ದಿನಗಳ ಒಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.