Asian Games 2023: ಏಷ್ಯನ್ ಗೇಮ್ಸ್​ಗೆ ಟೀಂ ಇಂಡಿಯಾವನ್ನು ಕಳುಹಿಸಲು ಗ್ರೀನ್ ಸಿಗ್ನಲ್ ನೀಡಿದ ಬಿಸಿಸಿಐ

Updated on: Jun 24, 2023 | 1:31 PM

Asian Games 2023: ಏಷ್ಯನ್ ಗೇಮ್ಸ್​ನಲ್ಲಿ ಕ್ರಿಕೆಟ್​ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದ್ದು, ಬಿಸಿಸಿಐ ಜೂನ್ 30ರ ಮೊದಲು ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಲಿದೆ.

1 / 7
ಈ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಿಸಿಸಿಐ ಇದೀಗ ವಿಶ್ವಕಪ್ ಸಮಯದಲ್ಲೇ ಆರಂಭವಾಗಲಿರುವ ಏಷ್ಯನ್​ ಗೇಮ್ಸ್​ಗೆ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ಒಪ್ಪಿಗೆ ನೀಡಿದೆ.

ಈ ವರ್ಷ ಭಾರತದಲ್ಲಿ ನಡೆಯಲ್ಲಿರುವ ಏಕದಿನ ವಿಶ್ವಕಪ್​ಗೆ ಟೀಂ ಇಂಡಿಯಾವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಬಿಸಿಸಿಐ ಇದೀಗ ವಿಶ್ವಕಪ್ ಸಮಯದಲ್ಲೇ ಆರಂಭವಾಗಲಿರುವ ಏಷ್ಯನ್​ ಗೇಮ್ಸ್​ಗೆ ಪುರುಷರ ಮತ್ತು ಮಹಿಳಾ ತಂಡಗಳನ್ನು ಕಳುಹಿಸಲು ಒಪ್ಪಿಗೆ ನೀಡಿದೆ.

2 / 7

ಸೆಪ್ಟೆಂಬರ್ 23 ರಂದು ಆರಂಭವಾಗಲಿರುವ ಏಷ್ಯನ್​ ಗೇಮ್ಸ್​ಗೆ ಪೂರ್ಣ ಪ್ರಮಾಣದ ಮಹಿಳಾ ತಂಡವನ್ನು ಕಳುಹಿಸಲು ಮುಂದಾಗಿರುವ ಬಿಸಿಸಿಐ, ಪುರುಷರ ತಂಡದಲ್ಲಿ ಕೊಂಚ ಬದಲಾವಣೆ ಮಾಡಿದೆ. ಆ ಬದಲಾವಣೆಯ ಪ್ರಕಾರ ಏಷ್ಯನ್ ಗೇಮ್ಸ್​ನಲ್ಲಿ ಪುರುಷರ ಬಿ ತಂಡ ಕಣಕ್ಕಿಳಿಯಲಿದೆ.

3 / 7

ಏಷ್ಯನ್ ಗೇಮ್ಸ್​ನಲ್ಲಿ ಕ್ರಿಕೆಟ್​ ಅನ್ನು ಟಿ20 ಮಾದರಿಯಲ್ಲಿ ಆಡಲಾಗುತ್ತಿದ್ದು, ಬಿಸಿಸಿಐ ಜೂನ್ 30ರ ಮೊದಲು ಆಟಗಾರರ ಪಟ್ಟಿಯನ್ನು ಭಾರತೀಯ ಒಲಿಂಪಿಕ್ ಸಂಸ್ಥೆಗೆ ಸಲ್ಲಿಸಲಿದೆ. ಈ ಮೊದಲು ವಿಶ್ವಕಪ್ ಆಯೋಜನೆಯಿಂದಾಗಿ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಒಪ್ಪಿರಲಿಲ್ಲ.

4 / 7

ಏಕೆಂದರೆ 2023 ರ ಏಷ್ಯನ್ ಗೇಮ್ಸ್ ಸೆಪ್ಟೆಂಬರ್ 23 ರಂದು ಆರಂಭವಾಗಿ ಅಕ್ಟೋಬರ್ 8 ರವರೆಗೆ ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯಲಿದೆ. ಆದರೆ ಏಕದಿನ ವಿಶ್ವಕಪ್ ಅಕ್ಟೋಬರ್ 5 ರಿಂದ ಆರಂಭವಾಗಲಿದೆ. ಹೀಗಾಗಿ ಭಾರತ ಪುರುಷರ ತಂಡ ಏಷ್ಯನ್ ಗೇಮ್ಸ್​ನಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿರಲಿಲ್ಲ.

5 / 7

ಈಗ ಇಂಡಿಯನ್ ಎಕ್ಸ್‌ಪ್ರೆಸ್‌ನ ವರದಿಯ ಪ್ರಕಾರ, ಆಡಳಿತ ಮಂಡಳಿಯು ಏಷ್ಯನ್ ಗೇಮ್ಸ್‌ಗೆ ಪುರುಷರ ಬಿ ತಂಡವನ್ನು ಕಳುಹಿಸಲಿದೆ. ಬಹುಪಾಲು ಹಿರಿಯ ಸ್ಟಾರ್ ಆಟಗಾರರು ಭಾರತದ ವಿಶ್ವಕಪ್ ತಂಡದ ಭಾಗವಾಗುತ್ತಾರೆ. ಆದರೆ ಭಾರತೀಯ ಕ್ರಿಕೆಟ್‌ನಲ್ಲಿ 2 ರಿಂದ 3 ತಂಡಗಳನ್ನು ಕಟ್ಟುವಷ್ಟು ಕ್ರಿಕೆಟ್ ಪ್ರತಿಭೆಗಳಿದ್ದು, ಇಂತಹ ಪ್ರತಿಭಾವಂತ ಆಟಗಾರರನ್ನು ಏಷ್ಯನ್ ಗೇಮ್ಸ್‌ಗೆ ಕಳುಹಿಸಲು ಬಿಸಿಸಿಐ ಚಿಂತಿಸಿದೆ ಎಂದು ವರದಿ ಮಾಡಿದೆ.

6 / 7

ಗಮನಾರ್ಹವೆಂದರೆ ಏಷ್ಯನ್ ಗೇಮ್ಸ್‌ನಲ್ಲಿ ಭಾರತ ಕ್ರಿಕೆಟ್ ತಂಡಗಳು ಭಾಗವಹಿಸುತ್ತಿರುವುದು ಇದೇ ಮೊದಲು. ಜುಲೈ ಮತ್ತು ಆಗಸ್ಟ್‌ನಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ನಡೆದ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳಾ ಕ್ರಿಕೆಟ್ ತಂಡವು ಕಾಣಿಸಿಕೊಂಡಿತ್ತು. ಆದರೆ ಫೈನಲ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋತು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತ್ತು.

7 / 7

ಕ್ರಿಕೆಟ್ ಆಟವನ್ನು ಮೊದಲ ಬಾರಿಗೆ 2010 ರ ಏಷ್ಯನ್ ಗೇಮ್ಸ್‌ನಲ್ಲಿ ಸೇರಿಸಲಾಯಿತು. ಬಳಿಕ 2014 ರ ಆವೃತ್ತಿಯವರೆಗು ಕ್ರಿಕೆಟ್​ ಏಷ್ಯನ್​ ಗೇಮ್ಸ್​ನ ಭಾಗವಾಗಿತ್ತು. ಆದಾಗ್ಯೂ, ಜಕಾರ್ತಾದಲ್ಲಿ ನಡೆದ 2018 ರ ಆವೃತ್ತಿಯಲ್ಲಿ ಕ್ರಿಕೆಟ್​ ಅನ್ನು ಕ್ರೀಡಾಕೂಟದಿಂದ ಕೈಬಿಡಲಾಗಿತ್ತು. ಆ ಬಳಿಕ 2022ರ ಕ್ರೀಡಾಕೂಟಕ್ಕೆ ಮತ್ತೆ ಕ್ರಿಕೆಟ್​ ಅನ್ನು ಸೇರಿಸಲಾಯಿತ್ತಾದರೂ, ಕೊರೊನಾದಿಂದಾಗಿ ಕ್ರೀಡಾಕೂಟವನ್ನು ಮುಂದೂಡಲಾಗಿತ್ತು.

Published On - 1:28 pm, Sat, 24 June 23

Loading...
Unable to load recommendations.
Follow Us