ICC Women’s T20 World Cup 2024: ಬಾಂಗ್ಲಾದೇಶದಲ್ಲಿ ಐಸಿಸಿ ಟೂರ್ನಿ ಆಡಲು ಆಸೀಸ್ ನಾಯಕಿ ಹಿಂದೇಟು

|

Updated on: Aug 19, 2024 | 6:15 PM

ICC Women's T20 World Cup 2024: ಬಾಂಗ್ಲಾದೇಶದಲ್ಲಿ ಮಹಿಳಾ ಟಿ20 ವಿಶ್ವಕಪ್ ಆಡುವುದು ಸರಿಯಲ್ಲ ಎಂದು ಅಲಿಸ್ಸಾ ಹೀಲಿ ಅಭಿಪ್ರಾಯಪಟ್ಟಿದ್ದಾರೆ. ನೂರಾರು ಜನರನ್ನು ಬಲಿತೆಗೆದುಕೊಂಡ ಸಾಮೂಹಿಕ ಹಿಂಸಾಚಾರ ಮತ್ತು ಪ್ರತಿಭಟನೆಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಬಾಂಗ್ಲಾದೇಶದ ಮೇಲೆ ಟಿ20 ವಿಶ್ವಕಪ್‌ನ ಆತಿಥ್ಯವು ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಎಂಬುದು ಅಲಿಸ್ಸಾ ಹೀಲಿ ಅಭಿಪ್ರಾಯವಾಗಿದೆ.

1 / 6
2024ರ ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ನಡೆಯಲಿದೆ. ಆದರೆ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧದ ಪ್ರತಿಭಟನೆಯಿಂದಾಗಿ, ದೇಶದಲ್ಲಿ ಹಿಂಸಾಚಾರ ಮಿತಿಮೀರಿದೆ. ಇದರಿಂದಾಗಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಹೀಗಾಗಿ ಮಹಿಳಾ ಟಿ20 ವಿಶ್ವಕಪ್​ನ ಆತಿಥ್ಯ ಬಾಂಗ್ಲಾದೇಶದ ಕೈಜಾರುವ ಸಾಧ್ಯತೆಗಳು ಹೆಚ್ಚಾಗಿವೆ.

2 / 6
ಆದಾಗ್ಯೂ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಪಂದ್ಯಾವಳಿಯನ್ನು ಸುಸೂತ್ರವಾಗಿ ನಡೆಸಿಕೊಡಲು ಬಾಂಗ್ಲಾದೇಶ ಸೇನೆಯ ನೆರವು ಕೇಳಿತ್ತು. ಆದರೆ ಈ ನಡುವೆ ಬಾಂಗ್ಲಾ ಕ್ರಿಕೆಟ್ ಮಂಡಳಿಯ ಕಾರ್ಯಾಚರಣೆಗಳ ಅಧ್ಯಕ್ಷ ಜಲಾಲ್ ಯೂನಸ್ ಕೂಡ ತಕ್ಷಣದಿಂದಲೇ ಜಾರಿಗೆ ಬರುವಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೆಲ್ಲದರ ನಡುವೆ ಆಸ್ಟ್ರೇಲಿಯಾದ ನಾಯಕಿ ಅಲಿಸಾ ಹೀಲಿ ಬಾಂಗ್ಲಾದೇಶದಲ್ಲಿ ಟಿ20 ವಿಶ್ವಕಪ್ ಆಡುವ ಬಗ್ಗೆದೊಡ್ಡ ಹೇಳಿಕೆ ನೀಡಿದ್ದಾರೆ.

3 / 6
ಬಾಂಗ್ಲಾದೇಶದಲ್ಲಿ ಮಹಿಳಾ ಟಿ20 ವಿಶ್ವಕಪ್ ಆಡುವುದು ಸರಿಯಲ್ಲ ಎಂದು ಅಲಿಸ್ಸಾ ಹೀಲಿ ಅಭಿಪ್ರಾಯಪಟ್ಟಿದ್ದಾರೆ. ನೂರಾರು ಜನರನ್ನು ಬಲಿತೆಗೆದುಕೊಂಡ ಸಾಮೂಹಿಕ ಹಿಂಸಾಚಾರ ಮತ್ತು ಪ್ರತಿಭಟನೆಗಳಿಂದ ಇನ್ನೂ ಚೇತರಿಸಿಕೊಳ್ಳುತ್ತಿರುವ ಬಾಂಗ್ಲಾದೇಶದ ಮೇಲೆ ಟಿ20 ವಿಶ್ವಕಪ್‌ನ ಆತಿಥ್ಯವು ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ ಎಂಬುದು ಅಲಿಸ್ಸಾ ಹೀಲಿ ಅಭಿಪ್ರಾಯವಾಗಿದೆ.

4 / 6
ಈ ಸಮಯದಲ್ಲಿ ಅಲ್ಲಿ ಆಡುವ ಬಗ್ಗೆ ಯೋಚಿಸುವುದು ನನಗೆ ಕಷ್ಟವಾಗುತ್ತಿದೆ, ಮನುಷ್ಯನಾಗಿ ಹಾಗೆ ಮಾಡುವುದು ತಪ್ಪು ಎಂದು ನಾನು ಭಾವಿಸುತ್ತೇನೆ. ಇದರಿಂದ ಸಾಕಷ್ಟು ಸಂಕಷ್ಟದಲ್ಲಿರುವ ದೇಶದಿಂದ ಸಂಪನ್ಮೂಲ ಕಿತ್ತುಕೊಂಡಂತಾಗುತ್ತದೆ. ಸಾಯುತ್ತಿರುವವರಿಗೆ ಸಹಾಯ ಮಾಡಲು ಎಲ್ಲರೂ ಇರಬೇಕಾದ ಅಗತ್ಯವಿದೆ. ಈ ವಾರ ನಿರ್ಧಾರವನ್ನು ತೆಗೆದುಕೊಳ್ಳುವ ನಿರೀಕ್ಷೆಯಿರುವ ಐಸಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಎಂದು ಅಲಿಸ್ಸಾ ಹೀಲಿ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ತಿಳಿಸಿದ್ದಾರೆ.

5 / 6
ಮಹಿಳಾ ಟಿ20 ವಿಶ್ವಕಪ್ ಬಾಂಗ್ಲಾದೇಶದಲ್ಲಿ ಅಕ್ಟೋಬರ್ 3 ರಿಂದ 19 ರವರೆಗೆ ನಡೆಯಲಿದ್ದು, ಇದರಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಸೇರಿದಂತೆ 10 ತಂಡಗಳು ಭಾಗವಹಿಸಲಿವೆ. ಇದರಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡವೂ ಸೇರಿದೆ.

6 / 6
ಇನ್ನೂ ಈ ಪಂದ್ಯಾವಳಿಯನ್ನು  ಆಯೋಜಿಸುವ ಬಗ್ಗೆ ಐಸಿಸಿ ಇದೇ ಮಂಗಳವಾರ (ಆಗಸ್ಟ್ 20)ದಂದು ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಆದಾಗ್ಯೂ, ಬಾಂಗ್ಲಾದೇಶ ಪಂದ್ಯಾವಳಿಯನ್ನು ಆಯೋಜಿಸಲು ಆಶಿಸುತ್ತಿದೆ. ಮತ್ತೊಂದೆಡೆ, ಭಾರತವು ಹೋಸ್ಟಿಂಗ್ ರೇಸ್‌ನಿಂದ ಹಿಂದೆ ಸರಿದಿರುವುದರಿಂದ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಸಾಧ್ಯತೆಗಳಿವೆ.