Avesh Khan: ಅಂದು ನಡೆದ ಘಟನೆಗೆ ಇಂದು ಕ್ಷಮೆ ಕೇಳಿದ ಆವೇಶ್ ಖಾನ್

|

Updated on: Jun 19, 2023 | 9:17 AM

IPL 2023: ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು.

1 / 8
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮುಕ್ತಾಯಗೊಂಡು ಸುಮಾರು 20 ದಿನಗಳು ಕಳೆದಿವೆ. ಎಂಎಸ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈಗ ಎಲ್ಲ ಆಟಗಾರರು ತಮ್ಮ ತಮ್ಮ ರಾಷ್ಟ್ರೀಯ ತಂಡದ ಪರ ಆಡುತ್ತಿದ್ದಾರೆ.

2 / 8
ಈ ಬಾರಿಯ ಐಪಿಎಲ್ 2023 ರಲ್ಲಿ ಅನೇಕ ಅಚ್ಚರಿಯ ಘಟನೆಗಳು ನಡೆದಿವೆ. ವಿರಾಟ್ ಕೊಹ್ಲಿ-ಗೌತಮ್ ಗಂಭೀರ್ ಜಗಳದಿಂದ ಹಿಡಿದು ಆವೇಶ್ ಖಾನ್ ಕೋಪದಲ್ಲಿ ಹೆಲ್ಮೆಟ್ ಎಸೆದ ವರೆಗೆ ಸಾಕಷ್ಟು ರೋಚಕ ವಿಚಾರಗಳು ನಡೆದವು.

3 / 8
ಇದೀಗ ಹೆಲ್ಮೆಟ್ ಎಸೆದ ಘಟನೆಯ ಬಗ್ಗೆ ಮಾತನಾಡಿರುವ ಲಖನೌ ಸೂಪರ್ ಜೇಂಟ್ಸ್ ತಂಡದ ಬೌಲರ್ ಆವೇಶ್ ಖಾನ್ ಕ್ಷಮೆಯಾಚಿಸಿದ್ದಾರೆ. ಅಂದು ನಾನು ಆರೀತಿ ಮಾಡಬಾರದಿತ್ತು ಎಂದು ಹೇಳಿದ್ದಾರೆ.

4 / 8
ಅಂದು ಆ ಘಟನೆ ನಡೆದ ಬಳಿಕ ಜನರು ನನ್ನನ್ನು ಸಾಮಾಜಿಕ ಮಾಧ್ಯಮದಲ್ಲಿ ದೂಷಿಸುತ್ತಿದ್ದರು. ನಾನು ಆರೀತಿ ಮಾಡಬಾರದಿತ್ತು ಎಂದು ನಂತರ ಅರಿತುಕೊಂಡೆ. ಅದು ಕ್ಷಣಾರ್ಧದಲ್ಲಿ ಸಂಭವಿಸಿತು. ಇದರಿಂದ ನನಗೆ ಈಗ ಬೇಸರವಾಗಿದೆ ಎಂದು ಆವೇಶ್ ಖಾನ್ ಹೇಳಿದ್ದಾರೆ.

5 / 8
ಇದೇವೇಳೆ ಅವೇಶ್ ಖಾನ್ ಅವರ ಹಿಂದಿನ ಎರಡು ಸೀಸನ್‌ಗಳಿಗೆ ಹೋಲಿಸಿದರೆ, 2023 ರ ಐಪಿಎಲ್ ಸೀಸನ್ ನನಗೆ ಅಷ್ಟು ಯಶಸ್ವಿಯಾಗಿಲ್ಲ ಎಂದು ಹೇಳಿಕೊಂಡಿದ್ದಾರೆ. ಈ ಋತುವಿನಲ್ಲಿ ಆವೇಶ್ 9 ಪಂದ್ಯಗಳಿಂದ ಕೇವಲ 8 ವಿಕೆಟ್​ಗಳನ್ನಷ್ಟೆ ಪಡೆದುಕೊಂಡಿದ್ದರು.

6 / 8
ನನ್ನ ಹಿಂದಿನ ಎರಡು ಐಪಿಎಲ್ ಸೀಸನ್‌ಗಳನ್ನು ನೀವು ಹೋಲಿಕೆ ಮಾಡಿದರೆ, ಅದು ನಾನು ಬಯಸಿದ ರೀತಿಯಲ್ಲಿ ನಡೆಯಿತು. ಆದರೆ ಈ ಋತುವು ನಾನು ಅಂದುಕೊಂಡಂತೆ ನಡೆಯಲಿಲ್ಲ. ಹೀಗಿದ್ದರೂ 10 ಕ್ಕಿಂತ ಕಡಿಮೆ ರನ್​ರೇಟ್ ಬರುವ ರೀತಿ ಕಾಯ್ದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

7 / 8
ಏಪ್ರಿಲ್ 10 ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಖನೌ ಸೂಪರ್ ಜೇಂಟ್ಸ್ ನಡುವಣ ರೋಚಕತೆಯಿಂದ ಕೂಡಿತ್ತು. ಇದರಲ್ಲಿ ಎಲ್​ಎಸ್​ಜಿ 1 ವಿಕೆಟ್​ಗಳ ಜಯ ಸಾಧಿಸಿತ್ತು.

8 / 8
ಕೊನೆಯ ಎಸೆತದಲ್ಲಿ ಲಖನೌ ಗೆಲುವಿಗೆ ಒಂದು ರನ್ ಬೇಕಿತ್ತು. ಸ್ಟ್ರೈಕ್​ನಲ್ಲಿ ಆವೇಶ್ ಖಾನ್ ಇದ್ದರು. ಆದರೆ, ಚೆಂಡು ಆವೇಶ್ ಬ್ಯಾಟ್​ಗೆ ತಾಗದೆ ಕೀಪರ್ ಸೈರಿತು. ಬೈಸ್ ಮೂಲಕ ಓಡಿ ಆವೇಶ್ ಒಂದು ರನ್ ಕಲೆಹಾಕಿ ತಂದುಕೊಟ್ಟರು. ಈ ಸಂದರ್ಭ ಆವೇಶ್ ತಾವು ಹಾಕಿಕೊಂಡಿದ್ದ ಹೆಲ್ಮೆಟ್ ಅನ್ನು ಕೈಯಿಂದ ತೆಗೆದು ಮೈದಾನದ ಕೆಳಕ್ಕೆ ಜೋರಾಗಿ ಎಸೆದಿದ್ದರು. ಇದಕ್ಕಾಗಿ ದಂಡ ಕೂಡ ಪಾವತಿಸಿದ್ದರು.