
ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಪಾಕಿಸ್ತಾನ ನಾಯಕ ಬಾಬರ್ ಆಝಂ ಕೊನೆಗೂ ಎರಡಂಕಿ ಮೊತ್ತ ದಾಖಲಿಸುವಲ್ಲಿ ಯಶಸ್ವಿಯಾದರು. ಅಲ್ಲದೆ ಬರೋಬ್ಬರಿ ಮೂರು ವರ್ಷಗಳ ಬಳಿಕ ಟೆಸ್ಟ್ ಶತಕಬಾರಿಸುವ ಸಮೀಪಕ್ಕೂ ಬಂದರು. ಆದರೆ ಮತ್ತದೇ ಕಳಪೆ ಶಾಟ್ ಆಡುವ ಮೂಲಕ ಶತಕ ವಂಚಿತರಾದರು(PC-PTI).
ಇಂಗ್ಲೆಂಡ್ ಪ್ರವಾಸದಲ್ಲಿ ಪಾಕಿಸ್ತಾನ ತಂಡದ ನಾಯಕತ್ವ ಹೊತ್ತಿರುವ ಬಾಬರ್ ಆಝಂ ಇದುವರೆಗೆ ಆಡಿರುವ 4 ಇನ್ನಿಂಗ್ಸ್ಗಳಲ್ಲಿ ಇದೇ ಮೊದಲ ಬಾರಿಗೆ ಎರಡಂಕಿ ಮೊತ್ತ ದಾಖಲಿಸಿದ್ದಾರೆ. ಉಳಿದ ಮೂರು ಇನ್ನಿಂಗ್ಸ್ಗಳಲ್ಲಿ ಬಾಬರ್ಗೆ 10 ರನ್ಗಳ ಗಡಿ ದಾಟಲು ಸಾಧ್ಯವಾಗಿರಲಿಲ್ಲ. ಇದರ ಫಲವಾಗಿ ತಂಡ ಕೂಡ ಹೀನಾಯವಾಗಿ ಸೋತಿತ್ತು(PC-PTI).
ಇದೀಗ ಸರಣಿಯ ಕೊನೆಯ ಪಂದ್ಯದಲ್ಲೂ ಪಾಕ್ ತಂಡ ಸೋಲಿನ ಆತಂಕದಲ್ಲಿದೆ. ಆದರೆ ಇದೇ ಮೊದಲ ಬಾರಿಗೆ ಇಂಗ್ಲೆಂಡ್ ಪ್ರವಾಸದಲ್ಲಿ ಪಾಕ್ ಬ್ಯಾಟರ್ಗಳು ಇಂಗ್ಲೆಂಡ್ ವೇಗಿಗಳನ್ನು ಸಮರ್ಥವಾಗಿ ಎದುರಿಸುವ ಕೆಲಸ ಮಾಡಿದ್ದಾರೆ. ಈ ಸರಣಿಯಲ್ಲಿ ಪಾಕ್ ತಂಡ ಒಂದೇ ಒಂದು ಇನ್ನಿಂಗ್ಸ್ನಲ್ಲೂ 200 ರನ್ಗಳ ಗಡಿ ದಾಟಿರಲಿಲ್ಲ(PC-PTI).
ಆದರೆ ಸರಣಿಯ ಕೊನೆಯ ಪಂದ್ಯದ ಎರಡನೇ ಇನ್ನಿಂಗ್ಸ್ನಲ್ಲಿ ಪಾಕ್ ತಂಡ 300ರನ್ಗಳ ಗಡಿ ದಾಟಿದೆ. ತಂಡ ಇಷ್ಟು ಮೊತ್ತ ಕಲೆಹಾಕುವಲ್ಲಿ ನಾಯಕ ಬಾಬರ್ ಜೊತೆಗೆ ಶಾನ್ ಮಸೂದ್ ಅವರ ಕೊಡುಗೆಯೂ ಅಪಾರವಾಗಿತ್ತು. ಶಾನ್ ಮಸೂದ್ 95 ರನ್ಗಳಿಗೆ ತಮ್ಮ ವಿಕೆಟ್ ಒಪ್ಪಿಸುವ ಮೂಲಕ ಶತಕ ವಂಚಿತರಾದರೆ, ಇತ್ತ ಬಾಬರ್ ಅವರ ಇನ್ನಿಂಗ್ಸ್ ಕೂಡ 76 ರನ್ಗಳಿಗೆ ಅಂತ್ಯವಾಯಿತು(PC-PTI).
ಇಡೀ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದ ಬಾಬರ್ ಈ ಇನ್ನಿಂಗ್ಸ್ನಲ್ಲಾದರೂ ಶತಕ ಬಾರಿಸುವ ಭರವಸೆ ಮೂಡಿಸಿದ್ದರು. ಅಲ್ಲದೆ ಅಭಿಮಾನಿಗಳು ಕೂಡ ಬಾಬರ್ ಅವರ 10ನೇ ಟೆಸ್ಟ್ ಶತಕವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಬಾಬರ್ ಕೊನೆಯದಾಗಿ 2022 ರ ಡಿಸೆಂಬರ್ನಲ್ಲಿ ಕರಾಚಿಯಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕೊನೆಯ ಟೆಸ್ಟ್ ಶತಕ ಬಾರಿಸಿದ್ದರು. ಅಂದಿನಿಂದ ಬಾಬರ್ ಶತಕಗಳ ಬರ ಎದುರಿಸುತ್ತಿದ್ದಾರೆ(PC-PTI).