133 ರನ್​ಗಳ ಸೋಲಿನೊಂದಿಗೆ ವಿದಾಯ ಹೇಳಿದ ಬಾಂಗ್ಲಾ ಆಟಗಾರ..!

|

Updated on: Oct 13, 2024 | 9:09 AM

India vs Bangladesh: ಬಾಂಗ್ಲಾದೇಶ್ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಟೀಮ್ ಇಂಡಿಯಾ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿದೆ. ಭಾರತ ತಂಡದ ಈ ಅಮೋಘ ಗೆಲುವಿನ ಬೆನ್ನಲ್ಲೇ ಅತ್ತ ಬಾಂಗ್ಲಾದೇಶ್ ತಂಡದ ಹಿರಿಯ ಆಟಗಾರ ಟಿ20 ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ.

1 / 5
ಹೈದರಾಬಾದ್​ನಲ್ಲಿ ನಡೆದ ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ್ ತಂಡವು 133 ರನ್​ಗಳ ಹೀನಾಯ ಸೋಲನುಭವಿಸಿದೆ. ಈ ಸೋಲಿನೊಂದಿಗೆ ಬಾಂಗ್ಲಾದೇಶ್ ತಂಡದ ಹಿರಿಯ ಆಟಗಾರ ಮಹಮ್ಮದುಲ್ಲಾ ರಿಯಾದ್ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

2 / 5
ಭಾರತದ ವಿರುದ್ಧದ ಟಿ20 ಸರಣಿ ನಡುವೆ ನಿವೃತ್ತಿ ಘೋಷಿಸಿದ್ದ ಮಹಮ್ಮದುಲ್ಲಾ ಕೊನೆಯ ಪಂದ್ಯದಲ್ಲಿ ಗೆಲ್ಲುವ ಮೂಲಕ ವಿಜಯದ ಬೀಳ್ಕೊಡುಗೆಯನ್ನು ನಿರೀಕ್ಷಿಸಿದ್ದರು. ಆದರೆ ಭಾರತೀಯ ಬ್ಯಾಟರ್​ಗಳ ಅಬ್ಬರಕ್ಕೆ ತತ್ತರಿಸಿದ ಬಾಂಗ್ಲಾದೇಶ್ ತಂಡವು ಅತ್ಯಂತ ಹೀನಾಯ ಸೋಲನುಭವಿಸಿದೆ.

3 / 5
ಈ ಸೋಲಿನೊಂದಿಗೆ ಮಹಮ್ಮದುಲ್ಲಾ ತಮ್ಮ 17 ವರ್ಷಗಳ ಟಿ20 ಅಂತಾರಾಷ್ಟ್ರೀಯ ಕೆರಿಯರ್​ ಅನ್ನು ಅಂತ್ಯಗೊಳಿಸಿದ್ದಾರೆ. 2007 ರಲ್ಲಿ ಕೀನ್ಯಾ ವಿರುದ್ಧ ಕಣಕ್ಕಿಳಿಯುವ ಮೂಲಕ ಟಿ20 ಕೆರಿಯರ್ ಆರಂಭಿಸಿದ್ದ ಮಹಮ್ಮದುಲ್ಲಾ ಬಾಂಗ್ಲಾ ಪರ ಒಟ್ಟು 141 ಪಂದ್ಯಗಳನ್ನಾಡಿದ್ದಾರೆ.

4 / 5
ಬಾಂಗ್ಲಾದೇಶ್ ಪರ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 130 ಇನಿಂಗ್ಸ್ ಆಡಿರುವ ಮಹಮ್ಮದುಲ್ಲಾ 8 ಅರ್ಧಶತಕಗಳೊಂದಿಗೆ ಒಟ್ಟು 2443 ರನ್ ಕಲೆಹಾಕಿದ್ದಾರೆ. ಹಾಗೆಯೇ 80 ಇನಿಂಗ್ಸ್​ಗಳಲ್ಲಿ ಬೌಲಿಂಗ್​ ಮಾಡಿರುವ ಅವರು ಒಟ್ಟು 41 ವಿಕೆಟ್​ಗಳನ್ನು ಕಬಳಿಸಿದ್ದಾರೆ.

5 / 5
ಇದೀಗ ತಮ್ಮ 38ನೇ ವಯಸ್ಸಿನಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಇದಾಗ್ಯೂ ಮಹಮ್ಮದುಲ್ಲಾ ಏಕದಿನ ಕ್ರಿಕೆಟ್​ನಲ್ಲಿ ಮುಂದುವರೆಲಿದ್ದಾರೆ. ಅದರಂತೆ ಮುಂಬರುವ ಚಾಂಪಿಯನ್ಸ್ ಟ್ರೋಫಿಯ ಮೂಲಕ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳುವ ಸಾಧ್ಯತೆಯಿದೆ.