Joe Root: ಜೋ ರೂಟ್​ ಸಚಿನ್​ರ ಸರ್ವಶ್ರೇಷ್ಠ ದಾಖಲೆಯನ್ನು ಮುರಿಯುವುದು ಕಷ್ಟಸಾಧ್ಯ..!

|

Updated on: Sep 04, 2024 | 12:08 PM

Joe Root: ಶ್ರೀಲಂಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಜೋ ರೂಟ್ ಸತತ ಎರಡು ಶತಕಗಳನ್ನು ಬಾರಿಸಿದ್ದಾರೆ. ಈ ಶತಕಗಳೊಂದಿಗೆ ರೂಟ್ ಅವರ ಟೆಸ್ಟ್ ರನ್ 12377 ಕ್ಕೇರಿದೆ. ಅಲ್ಲದೆ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ ಇಂಗ್ಲೆಂಡ್ ದಾಂಡಿಗ ಇದೀಗ ಏಳನೇ ಸ್ಥಾನಕ್ಕೇರಿದ್ದಾರೆ. ಅಲ್ಲದೆ ಇದೀಗ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿಯಲು ರೂಟ್​ಗೆ ಬೇಕಿರುವುದು 3544 ರನ್​ಗಳು ಮಾತ್ರ.

1 / 7
ಇಂಗ್ಲೆಂಡ್ ತಂಡದ ಟೆಸ್ಟ್ ಸ್ಪೆಷಲಿಸ್ಟ್ ಜೋ ರೂಟ್ ಕ್ರಿಕೆಟ್ ಕಾಶಿ ಲಾರ್ಡ್ಸ್​ ಮೈದಾನದಲ್ಲಿ ಬ್ಯಾಕ್ ಟು ಬ್ಯಾಕ್ ಸೆಂಚುರಿ ಸಿಡಿಸಿ ಸಂಚಲನ ಸೃಷ್ಟಿಸಿದ್ದಾರೆ. ಈ ಶತಕಗಳೊಂದಿಗೆ ರೂಟ್ ಇಂಗ್ಲೆಂಡ್ ಪರ ಅತ್ಯಧಿಕ ಟೆಸ್ಟ್ ಸೆಂಚುರಿ ಸಿಡಿಸಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಇದೀಗ ಟೆಸ್ಟ್ ರನ್​ ಸರದಾರರ ಪಟ್ಟಿಯಲ್ಲೂ 7ನೇ ಸ್ಥಾನಕ್ಕೇರಿದ್ದಾರೆ.

2 / 7
ಇನ್ನು ಅಗ್ರಸ್ಥಾನಕ್ಕೇರಲು ಜೋ ರೂಟ್​ಗೆ ಬೇಕಿರುವುದು 3544 ರನ್​ಗಳು. ಸದ್ಯ 33 ವರ್ಷದ ರೂಟ್ ಇದೇ ಫಾರ್ಮ್ ಮುಂದುವರೆಸಿದರೆ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿರುವ 15921 ರನ್​ಗಳ ದಾಖಲೆಯನ್ನು ಮುರಿಯಲಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

3 / 7
ಆದರೆ ಇದು ಅಂದುಕೊಂಡಷ್ಟು ಸುಲಭವಲ್ಲ. ಏಕೆಂದರೆ ಜೋ ರೂಟ್ ಇನ್ನೂ ಮೂರು ವರ್ಷಗಳ ಕಾಲ ಆಡಿದರೂ, ಇದೇ ಫಾರ್ಮ್​ನಲ್ಲಿ ಬ್ಯಾಟಿಂಗ್ ಮಾಡಬೇಕಾಗುತ್ತದೆ. ಅಂದರೆ 50 ರ ಸರಾಸರಿಯಲ್ಲಿ ರನ್​ಗಳಿಸಲೇಬೇಕು. ಅಂತಹದೊಂದು ಫಾರ್ಮ್ ಪ್ರದರ್ಶಿಸಿದರೆ ಟೆಸ್ಟ್ ರನ್ ಸರದಾರರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಬಹುದು.

4 / 7
ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶ ಎಂದರೆ 265 ಇನಿಂಗ್ಸ್​ಗಳ ಬಳಿಕ ಸಚಿನ್ ಹಾಗೂ ಜೋ ರೂಟ್ ಕಲೆಹಾಕಿರುವ ಒಟ್ಟು ರನ್​ಗಳು. ಇದೀಗ 265 ಇನಿಂಗ್ಸ್​ಗಳನ್ನು ಆಡಿರುವ ಜೋ ರೂಟ್​ಗಿಂತ ಸಚಿನ್ ತೆಂಡೂಲ್ಕರ್ ರನ್​ಗಳಿಕೆಯಲ್ಲಿ ಮುಂದಿದ್ದರು ಎಂಬುದು ವಿಶೇಷ.

5 / 7
ಸಚಿನ್ ತೆಂಡೂಲ್ಕರ್ 265 ಇನಿಂಗ್ಸ್​ಗಳ ಮುಕ್ತಾಯದ ವೇಳೆಗೆ ಒಟ್ಟು 12970 ರನ್​ಗಳನ್ನು ಕಲೆಹಾಕಿದ್ದರು. ಅಂದರೆ 54.72ರ ಸರಾಸರಿಯಲ್ಲಿ ರನ್​ಗಳಿಸಿದ್ದರು. ಈ ವೇಳೆ 43 ಶತಕ ಹಾಗೂ 54 ಅರ್ಧಶತಕಗಳನ್ನು ಸಹ ಸಿಡಿಸಿದ್ದರು.

6 / 7
ಜೋ ರೂಟ್ 265 ಇನಿಂಗ್ಸ್​ಗಳಲ್ಲಿ ಕಲೆಹಾಕಿರುವುದು 12377 ರನ್​ಗಳು. ಅಂದರೆ ಈವರೆಗೆ 50.93ರ ಸರಾಸರಿಯಲ್ಲಷ್ಟೇ ರನ್​ಗಳಿಸಿದ್ದಾರೆ. ಇನ್ನು ಇದೇ ವೇಳೆ 34 ಶತಕಗಳನ್ನು ಮಾತ್ರ ಬಾರಿಸಿದ್ದಾರೆ. ಇದಾಗ್ಯೂ 64 ಅರ್ಧಶತಕಗಳನ್ನು ಸಿಡಿಸಿದ್ದಾರೆ. ಇಲ್ಲಿ ಸಚಿನ್​ಗಿಂತ ರೂಟ್ ಅರ್ಧಶತಕಗಳ ಸಂಖ್ಯೆಯಲ್ಲಿ ಮಾತ್ರ ಮುಂದಿದ್ದಾರೆ.

7 / 7
ಇನ್ನು 265 ಇನಿಂಗ್ಸ್​ಗಳ ಮುಕ್ತಾಯದ ಬಳಿಕ ಉಭಯರು ಕಲೆಹಾಕಿದ ರನ್​ಗಳಿಕೆಯಲ್ಲಿ ಜೋ ರೂಟ್​ಗಿಂತ (12377) ಸಚಿನ್ ತೆಂಡೂಲ್ಕರ್ (12970) 593 ರನ್​ಗಳಿಂದ ಮುಂದಿದ್ದರು. ಹೀಗಾಗಿಯೇ ಪ್ರಸ್ತುತ ಫಾರ್ಮ್ ಮುಂದುವರೆಸಿದರೆ ಜೋ ರೂಟ್​ಗೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆ ಮುರಿಯುವುದು ಕಷ್ಟಸಾಧ್ಯ ಎನ್ನಬಹುದು. ಇದಾಗ್ಯೂ 33 ವರ್ಷದ ರೂಟ್ ಮುಂದಿನ ನಾಲ್ಕೈದು ವರ್ಷ ಟೆಸ್ಟ್ ತಂಡದಲ್ಲಿ ಮುಂದುವರೆದರೆ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯನ್ನು ತಮ್ಮದಾಗಿಸಿಕೊಳ್ಳಬಹುದು.