T20 World Cup 2026: ಜಾಹೀರಾತಿನಿಂದಲೇ 1500 ಕೋಟಿ ರೂ. ಆದಾಯ..!

Updated on: Mar 13, 2026 | 7:06 PM

T20 World Cup 2026: 2026ರ ಟಿ20 ವಿಶ್ವಕಪ್‌ನಲ್ಲಿ ಭಾರತ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಟೂರ್ನಿಯಿಂದ ಐಸಿಸಿಗೆ ಜಾಹೀರಾತು ಪ್ರಸಾರದಿಂದಲೇ ಬರೋಬ್ಬರಿ 1500 ಕೋಟಿ ರೂ.ಗೂ ಅಧಿಕ ಆದಾಯ ಹರಿದುಬಂದಿದೆ. ಭಾರತ-ಪಾಕ್ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ಈ ಆದಾಯದ ಬಹುಪಾಲು ಗಳಿಕೆಗೆ ಪ್ರಮುಖ ಕಾರಣವಾಗಿವೆ. ಪ್ರಾಯೋಜಕರ ಭಾರಿ ಹೂಡಿಕೆ ಐಸಿಸಿಯ ಖಜಾನೆಯನ್ನು ತುಂಬಿಸಿದೆ.

1 / 5
2026 ರ ಟಿ20 ವಿಶ್ವಕಪ್​ಗೆ ಅದ್ಧೂರಿ ತೆರೆಬಿದ್ದಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರಹೊಮ್ಮಿತು. ಈ ಗೆಲುವಿಗಾಗಿ ಭಾರತ ತಂಡಕ್ಕೆ ಐಸಿಸಿ ಹಾಗೂ ಬಿಸಿಸಿಐ ಎರಡರಿಂದಲೂ ಭರ್ಜರಿ ಬಹುಮಾನ ಸಿಕ್ಕಿದೆ. ಇನ್ನು ಈ ಟೂರ್ನಿ ಆಯೋಜಿಸಿದ್ದ ಐಸಿಸಿಗೆ ಸಿಕ್ಕ ಹಣವೆಷ್ಟು ಎಂಬುದು ಇದುವರೆಗೂ ತಿಳಿದುಬಂದಿಲ್ಲ.

2 / 5
ಆದಾಗ್ಯೂ ಸದ್ಯ ಹೊರಬಿದ್ದಿರುವ ಮಾಹಿತಿ ಪ್ರಕಾರ, ಕೇವಲ ಜಾಹೀರಾತು ಪ್ರಸಾರದಿಂದಲೇ ಐಸಿಸಿ ಖಜಾನೆಗೆ 1500 ಕೋಟಿಗೂ ಅಧಿಕ ಆದಾಯ ಹರಿದುಬಂದಿದೆ ಎಂದು ವರದಿಯಾಗಿದೆ. ಅದರಲ್ಲೂ ಈ ಆದಾಯದ ಬಹುಪಾಲು ಕೇವಲ 3 ಪಂದ್ಯಗಳಿಂದಲೇ ಬಂದಿರುವುದು ಐಸಿಸಿಯ ಖಜಾನೆಯನ್ನು ತುಂಬಿ ತುಳುಕುವಂತೆ ಮಾಡಿದೆ.

3 / 5
ಎಕ್ಸ್‌ಚೇಂಜ್ ಫಾರ್ ಮೀಡಿಯಾದ ವರದಿಯ ಪ್ರಕಾರ, ಕೇವಲ ಜಾಹೀರಾತಿನಿಂದಲೇ 15 ಬಿಲಿಯನ್ ಅಂದರೆ ಸುಮಾರು 1500 ಕೋಟಿ ರೂಗಳ ಆದಾಯವನ್ನು ಐಸಿಸಿ ಗಳಿಸಿದೆ. ಮೇಲೆ ಹೇಳಿದಂತೆ ಇಷ್ಟು ಆದಾಯದ ಬಹುಪಾಲು ಮೂರೇ ಮೂರು ಪಂದ್ಯಗಳಿಂದ ಬಂದಿದೆ ಎಂದು ವರದಿಯಾಗಿದೆ.

4 / 5
ಆ ಮೂರು ಪಂದ್ಯಗಳು ಯಾವುವು ಎಂದರೆ.. ಭಾರತ ಮತ್ತು ಪಾಕಿಸ್ತಾನ ಪಂದ್ಯ, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳಾಗಿವೆ. ವರದಿಯ ಪ್ರಕಾರ, ನಿಯಮಿತ ಪಂದ್ಯಗಳಿಗೆ 10 ಸೆಕೆಂಡುಗಳ ಜಾಹೀರಾತಿನ ದರ ಸುಮಾರು 7.5 ಲಕ್ಷವಾಗಿದ್ದರೂ, ಪಂದ್ಯಾವಳಿ ಮುಂದುವರೆದಂತೆ ಈ ಬೆಲೆ 15 ರಿಂದ 16 ಲಕ್ಷಕ್ಕೆ ಏರಿತು ಎಂದು ಹೇಳಿದೆ. ಹಾಗೆಯೇ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸಮಯದಲ್ಲಿ 10 ಸೆಕೆಂಡುಗಳ ಜಾಹೀರಾತು ಸ್ಲಾಟ್ 20-25 ಲಕ್ಷಗಳಾಗಿತ್ತು ಎಂದು ವರದಿಯಾಗಿದೆ.

5 / 5
ಇನ್ನು ನಾಕೌಟ್ ಸುತ್ತಿನಲ್ಲಿ ಜಾಹೀರಾತು ದರ ಮತ್ತಷ್ಟು ದುಬಾರಿಯಾಗಿದ್ದು, ಸೆಮಿಫೈನಲ್ ಮತ್ತು ಫೈನಲ್‌ ಪಂದ್ಯಗಳ ಜಾಹೀರಾತು ಸ್ಲಾಟ್‌ಗಳ ಬೆಲೆ 150,000 ರಿಂದ 200,000 ಲಕ್ಷಕ್ಕೆ ತಲುಪಿತ್ತು. ಐಸಿಸಿಯ ಮೂರು ಪ್ರಮುಖ ಪ್ರಾಯೋಜಕರಾದ ಅರಾಮ್ಕೊ, ಡಿಪಿ ವರ್ಲ್ಡ್ ಮತ್ತು ಎಮಿರೇಟ್ಸ್ ಜಾಹೀರಾತಿಗಾಗಿ ತಲಾ 750 ಕೋಟಿ ರೂ. ಖರ್ಚು ಮಾಡಿದರೆ, ಇತರ ಪ್ರಾಯೋಜಕ ಕಂಪನಿಗಳು 150 ಕೋಟಿ ರೂ. ಖರ್ಚು ಮಾಡಿವೆ ಎಂದು ವರದಿ ಬಹಿರಂಗಪಡಿಸಿದೆ.

pruthvi Shankar

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.

Read More
Follow Us