IND vs SL: ಸೋನಲ್ ಶತಕಗಳ ನಡುವೆ ಕನ್ನಡಿಗ ಪಡಿಕ್ಕಲ್​ಗೆ ಒಲಿದ ಸರಣಿ ಶ್ರೇಷ್ಠ

Updated on: Aug 27, 2026 | 8:02 PM

Devdutt Padikkal Crowned Player of Series: ಭಾರತ-ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ 1-0 ಅಂತರದಲ್ಲಿ ಜಯಗಳಿಸಿತು. ಈ ಸರಣಿಯ ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ ತೀವ್ರ ಪೈಪೋಟಿ ಇದ್ದರೂ, ಅಂತಿಮವಾಗಿ ಕನ್ನಡಿಗ ದೇವದತ್ ಪಡಿಕ್ಕಲ್ ಪ್ರಶಸ್ತಿ ಗೆದ್ದರು. ಪಡಿಕ್ಕಲ್ ಭಾರತದ ಪರ ಗರಿಷ್ಠ ರನ್ ಗಳಿಸಿ, ಸೋನಾಲ್ ದಿನುಷಾ ಮತ್ತು ಮಾನವ್ ಸುತಾರ್‌ರಂತಹ ಪ್ರಬಲ ಸ್ಪರ್ಧಿಗಳನ್ನು ಹಿಂದಿಕ್ಕಿ ಸರಣಿಯ ಅತ್ಯುತ್ತಮ ಆಟಗಾರರಾಗಿ ಹೊರಹೊಮ್ಮಿದರು. ಅವರ ಪ್ರದರ್ಶನ ಭಾರತದ ಗೆಲುವಿಗೆ ನಿರ್ಣಾಯಕವಾಗಿತ್ತು.

1 / 5
ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿತು. ಕೊನೆಯ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾವೇ ಗೆಲುವಿನ ಪೇವರೇಟ್ ಎನಿಸಿಕೊಂಡಿತ್ತಾದರೂ ಕೊನೆಯ ದಿನ ಶ್ರೀಲಂಕಾ ತಂಡದ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಪ್ರವಾಸವೂ ಅಂತ್ಯಗೊಂಡಿತು. ಆದಾಗ್ಯೂ ಸರಣಿ ಶ್ರೇಷ್ಠ ಪ್ರಶಸ್ತಿ ಯಾರಿಗೆ ಲಭಿಸಿತು ಎಂಬುದು ಕುತೂಹಲಕಾರಿ ಸಂಗತಿಯಾಗಿದೆ(PC-PTI).

ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಯನ್ನು ಭಾರತ 1-0 ಅಂತರದಿಂದ ಗೆದ್ದುಕೊಂಡಿತು. ಕೊನೆಯ ಟೆಸ್ಟ್ ಪಂದ್ಯದಲ್ಲೂ ಟೀಂ ಇಂಡಿಯಾವೇ ಗೆಲುವಿನ ಪೇವರೇಟ್ ಎನಿಸಿಕೊಂಡಿತ್ತಾದರೂ ಕೊನೆಯ ದಿನ ಶ್ರೀಲಂಕಾ ತಂಡದ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಡ್ರಾದಲ್ಲಿ ಅಂತ್ಯಗೊಳಿಸಿತು. ಈ ಪಂದ್ಯದೊಂದಿಗೆ ಟೀಂ ಇಂಡಿಯಾದ ಪ್ರವಾಸವೂ ಅಂತ್ಯಗೊಂಡಿತು. ಆದಾಗ್ಯೂ ಸರಣಿ ಶ್ರೇಷ್ಠ ಪ್ರಶಸ್ತಿ ಯಾರಿಗೆ ಲಭಿಸಿತು ಎಂಬುದು ಕುತೂಹಲಕಾರಿ ಸಂಗತಿಯಾಗಿದೆ(PC-PTI).

2 / 5

ವಾಸ್ತವವಾಗಿ ಈ ಸರಣಿಯಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಮೂವರು ಆಟಗಾರರಿಂದ ಪ್ರಬಲ ಪೈಪೋಟಿ ಇತ್ತು. ಟೀಂ ಇಂಡಿಯಾದಿಂದ ಇಬ್ಬರು ಆಟಗಾರರು ಹಾಗೂ ಶ್ರೀಲಂಕಾದಿಂದ ಒಬ್ಬ ಆಟಗಾರ ಸರಣಿ ಶ್ರೇಷ್ಠ ಪ್ರಶಸ್ತಿ ರೇಸ್​ನಲ್ಲಿದ್ದರು. ಭಾರತದಿಂದ ದೇವದತ್ ಪಡಿಕ್ಕಲ್ ಹಾಗೂ ಮಾನವ್ ಸುತಾರ್ ಇದ್ದರೆ, ಶ್ರೀಲಂಕಾದಿಂದ ಸೋನಲ್ ದಿನುಷಾ ಇದ್ದರು. ಎಲ್ಲರೂ ದಿನುಷಾಗೆ ಈ ಪ್ರಶಸ್ತಿ ಲಭಿಸುವ ಬಹುದು ಎಂಬ ಅಭಿಪ್ರಾಯದಲ್ಲಿದ್ದರು(PC-PTI).

3 / 5

ಆದರೆ ಇಬ್ಬರನ್ನು ಹಿಂದಿಕ್ಕಿ ಸರಣಿ ಶ್ರೇಷ್ಠ ಗೆಲ್ಲುವಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಯಶಸ್ವಿಯಾಗಿದ್ದಾರೆ. ಟೆಸ್ಟ್ ಸರಣಿಯಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ದೇವದತ್ ಪಡಿಕ್ಕಲ್. ಇತ್ತ ಶ್ರೀಲಂಕಾ ಪರ ಸೋನಲ್ ದಿನುಷಾ ಕೂಡ 420 ರನ್‌ ಬಾರಿಸಿದ್ದರೆ, ಯುವ ಸ್ಪಿನ್ನರ್ ಮಾನವ್ ಸುತಾರ್ 16 ವಿಕೆಟ್‌ ಉರುಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಪ್ರಬಲ ಸ್ಪರ್ಧಿಗಳಾಗಿದ್ದರು. ಆದರೆ ಅಂತಿಮವಾಗಿ ದೇವದತ್ ಪಡಿಕ್ಕಲ್ ಸರಣಿಯ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ(PC-PTI).

4 / 5

ಸೋನಲ್ ದಿನುಷಾ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಅಸಾಧಾರಣ ಪ್ರದರ್ಶನ ನೀಡಿದರು. ಸೋನಲ್ ಎರಡು ಪಂದ್ಯಗಳಲ್ಲಿ 140 ಸರಾಸರಿಯಲ್ಲಿ 420 ರನ್ ಗಳಿಸಿದರು. ಗಾಲೆ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 100 ರನ್, ಎರಡನೇ ಇನ್ನಿಂಗ್ಸ್​ನಲ್ಲಿ 84 ರನ್ ಬಾರಿಸಿದ್ದರು. ಹಾಗೆಯೇ ಕೊಲಂಬೊ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ಸೋನಲ್ 103 ರನ್ ಮತ್ತು ಎರಡನೇ ಇನ್ನಿಂಗ್ಸ್​ನಲ್ಲಿ ಅಜೇಯ 133 ರನ್ ಬಾರಿಸಿದರು. ಇದು ಮಾತ್ರವಲ್ಲದೆ, ಸೋನಲ್ ಸರಣಿಯಲ್ಲಿ ಅತಿ ಹೆಚ್ಚು (8) ಸಿಕ್ಸರ್​ಗಳನ್ನು ಬಾರಿಸಿದ ದಾಖಲೆಯ ಜೊತೆಗೆ ಸರಣಿಯಲ್ಲಿ ಅತ್ಯುತ್ತಮ ಸರಾಸರಿಯನ್ನು ಹೊಂದಿದ್ದರು(PC-PTI).

5 / 5

ಮತ್ತೊಂದೆಡೆ, ದೇವದತ್ ಪಡಿಕ್ಕಲ್ ಎರಡು ಪಂದ್ಯಗಳಲ್ಲಿ 328 ರನ್ ಕಲೆಹಾಕಿದರು. ಹಾಗೆಯೇ ಗಾಲೆ ಮತ್ತು ಕೊಲಂಬೊದಲ್ಲಿ ಶತಕಗಳನ್ನು ಬಾರಿಸಿದರು. ಪಡಿಕ್ಕಲ್ ಕೇವಲ ಮೂರು ಇನ್ನಿಂಗ್ಸ್‌ಗಳನ್ನು ಆಡುವ ಅವಕಾಶ ಸಿಕ್ಕಿದ್ದರೂ, ಸೋನಲ್ ಅವರಿಗಿಂತ ಉತ್ತಮ ಪ್ರದರ್ಶನ ನೀಡಿದರು. ಮುಖ್ಯವಾದ ವಿಷಯವೆಂದರೆ ಸೋನಲ್ ಈ ರನ್‌ಗಳನ್ನು ಗಳಿಸಿದ್ದು ಅವರ ತಂಡವು ಈಗಾಗಲೇ ಒಂದು ಟೆಸ್ಟ್‌ನಲ್ಲಿ ಸೋತಿದ್ದಾಗ. ಎರಡನೇ ಟೆಸ್ಟ್‌ನಲ್ಲಿ, ತಂಡವು ಫಾಲೋ ಆನ್ ಆಡಬೇಕಾಯಿತು. ಆದ್ದರಿಂದ, ಸೋನಾಲ್​ಗಿಂತ ಪಡಿಕ್ಕಲ್ ಸರಣಿಯ ಆಟಗಾರ ಪ್ರಶಸ್ತಿಗೆ ಅರ್ಹರು(PC-PTI).

Loading...
Unable to load recommendations.
Follow Us