Updated on: Jun 14, 2023 | 1:37 PM
ಇದೇ ತಿಂಗಳ 28 ರಂದು ದುಲೀಪ್ ಟ್ರೋಫಿಯ ಆರಂಭದೊಂದಿಗೆ ಭಾರತ ಕ್ರಿಕೆಟ್ನ ಹೊಸ ದೇಶಿ ಸೀಸನ್ ಕೂಡ ಆರಂಭವಾಗುತ್ತಿದೆ. ದುಲೀಪ್ ಟ್ರೋಫಿಯಲ್ಲಿ ಎಂದಿನಂತೆ ಆರು ವಲಯಗಳಾದ ಉತ್ತರ, ದಕ್ಷಿಣ, ಪಶ್ಚಿಮ, ಪೂರ್ವ, ಮಧ್ಯ ಮತ್ತು ಈಶಾನ್ಯ ತಂಡಗಳು ಸ್ಪರ್ಧಿಸುತ್ತಿವೆ.
ಹಿಂದಿನ ಆವೃತ್ತಿಯ ಫೈನಲಿಸ್ಟ್‌ಗಳಾದ ದಕ್ಷಿಣ ಮತ್ತು ಪಶ್ಚಿಮ ವಲಯ ತಂಡಗಳು ಸೆಮಿಫೈನಲ್‌ಗೆ ನೇರ ಪ್ರವೇಶ ಪಡೆದಿದ್ದು, ಲೀಗ್ ಹಂತದಲ್ಲಿ ಗೆದ್ದು ಬಂದ ತಂಡಗಳು ಈ ಎರಡೂ ತಂಡಗಳ ವಿರುದ್ಧ ಸೆಮಿಸ್ನಲ್ಲಿ ಸೆಣಸಲಿವೆ. ಇದೀಗ ಈ ಪಂದ್ಯಾವಳಿಗೆ ದಕ್ಷಿಣ ವಲಯ ತಂಡವನ್ನು ಪ್ರಕಟಿಸಲಾಗಿದ್ದು, ಟೀಂ ಇಂಡಿಯಾದಲ್ಲಿ ಆಡಿದ ಕೆಲವು ಆಟಗಾರರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇನ್ನು ದಕ್ಷಿಣ ವಲಯ ತಂಡದ ನಾಯಕತ್ವವನ್ನು ಹನುಮ ವಿಹಾರಿಗೆ ವಹಿಸಲಾಗಿದ್ದು, ಮಯಾಂಕ್ ಅಗರ್ವಾಲ್ ಉಪನಾಯಕನಾಗಿ ಆಡಲಿದ್ದಾರೆ. ಹಾಗೆಯೇ ಡಬ್ಲ್ಯುಟಿಸಿ ಫೈನಲ್ನಲ್ಲಿ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆದಿದ್ದ ಕೆಎಸ್ ಭರತ್ ಕೂಡ ಸ್ಥಾನ ಪಡೆದಿದ್ದಾರೆ.
ಇತರ ಆಟಗಾರರ ಪೈಕಿ, ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಪರ ಅದ್ಭುತ ಬ್ಯಾಟಿಂಗ್ ಮಾಡಿದ್ದ ತಿಲಕ್ ವರ್ಮಾ, ಗುಜರಾತ್ ಟೈಟಾನ್ಸ್ ಪರ ಫೈನಲ್ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡಿದ್ದ ಸಾಯಿ ಸುದರ್ಶನ್ ಮತ್ತು ಆರ್ಸಿಬಿ ಪರ ಮೊದಲ ಪಂದ್ಯದಲ್ಲೇ 3 ವಿಕೆಟ್ ಉರುಳಿಸಿದ್ದ ಕನ್ನಡಿಗ ವೈಶಾಕ್ ವಿಜಯ್‌ಕುಮಾರ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಹಾಗೆಯೇ ಸ್ಪಿನ್ ಆಲ್ರೌಂಡರ್ ಆಗಿ ವಾಷಿಂಗ್ಟನ್ ಸುಂದರ್ ದಕ್ಷಿಣ ವಲಯದ ಪರ ಆಡಲಿದ್ದಾರೆ. ಇವರನ್ನು ಹೊರತುಪಡಿಸಿ ವೈಶಾಕ್, ಮತ್ತೊಬ್ಬ ಕನ್ನಡಿಗ ವಿದ್ವತ್ ಕಾವೇರಪ್ಪ ಮತ್ತು ಆರ್. ಸಾಯಿ ಕಿಶೋರ್ ದಕ್ಷಿಣ ವಲಯದ ಬೌಲಿಂಗ್ ದಾಳಿಯನ್ನು ಮುನ್ನಡೆಸಲಿದ್ದಾರೆ.
ದುಲೀಪ್ ಟ್ರೋಫಿಗೆ ದಕ್ಷಿಣ ವಲಯ ತಂಡ: ಹನುಮ ವಿಹಾರಿ (ನಾಯಕ), ಮಯಾಂಕ್ ಅಗರ್ವಾಲ್ (ಉಪನಾಯಕ), ರಿಕಿ ಭುಯಿ (ವಿಕೆಟ್ ಕೀಪರ್), ಕೆಎಸ್ ಭರತ್ (ವಿಕೆಟ್ ಕೀಫರ್), ಆರ್. ಸಮರ್ಥ್, ವಾಷಿಂಗ್ಟನ್ ಸುಂದರ್, ಸಚಿನ್ ಬೇಬಿ, ಪ್ರದೋಶ್ ರಂಜನ್ ಪಾಲ್, ಸಾಯಿ ಕಿಶೋರ್, ವಿ. ಕಾವೇರಪ್ಪ, ವೈಶಾಕ್ ವಿಜಯ್‌ಕುಮಾರ್, ಕೆವಿ ಶಶಿಕಾಂತ್, ದರ್ಶನ್ ಮಿಸಾಲ್ ಮತ್ತು ತಿಲಕ್ ವರ್ಮ.
Published On - 1:37 pm, Wed, 14 June 23