
ಇಂಗ್ಲೆಂಡ್ ಕ್ರಿಕೆಟ್ ತಂಡ ಟೆಸ್ಟ್ ಮಾದರಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿದೆ. ಕ್ಯಾಪ್ಟನ್ ಬದಲಾಗಿದ್ದಾರೆ. ಹೊಸ ಕೋಚ್ ಬಂದಿದ್ದಾರೆ. ತಂಡದ ಕೆಲ ಆಟಗಾರರೂ ಬದಲಾಗಿದ್ದಾರೆ. ಇಷ್ಟೆಲ್ಲಾ ಆದರೂ, ಬದಲಾಗದ ಒಂದು ವಿಷಯವೆಂದರೆ ರೂಟ್ ಆಟ. ಇಂಗ್ಲೆಂಡ್ ಮಾಜಿ ನಾಯಕ ಕಳೆದ ಒಂದೂವರೆ ಎರಡು ವರ್ಷಗಳಿಂದ ಅತ್ಯುತ್ತಮ ಫಾರ್ಮ್ ಕಾಯ್ದುಕೊಂಡು ರನ್ ಮಳೆ ಸುರಿಸುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಲಾರ್ಡ್ಸ್ ಟೆಸ್ಟ್‌ನಲ್ಲಿ, ಅವರು ತಮ್ಮ ಪೀಳಿಗೆಯ ಇತರ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಮಾಡಲು ಸಾಧ್ಯವಾಗದ ಕೆಲಸವನ್ನು ಮಾಡಿದ್ದಾರೆ.

ವಿಶ್ವ ಕ್ರಿಕೆಟ್‌ನ ದೊಡ್ಡ ತಂಡಗಳ ವಿರುದ್ಧ ಬಿರುಸಿನ ಸ್ಕೋರ್ ಗಳಿಸಿದ ಜೋ ರೂಟ್, ನ್ಯೂಜಿಲೆಂಡ್ ವಿರುದ್ಧ ವಿಶೇಷ ಸ್ಥಾನವನ್ನು ಸಾಧಿಸಿದರು. ಲಾರ್ಡ್ಸ್ ಟೆಸ್ಟ್‌ನಲ್ಲಿ ರೂಟ್ ಶತಕ ಗಳಿಸಿ 10,000 ರನ್ ಪೂರೈಸಿದ್ದಲ್ಲದೆ, ನ್ಯೂಜಿಲೆಂಡ್ ವಿರುದ್ಧ 1000 ರನ್ ಪೂರೈಸಿದರು. ಇದರೊಂದಿಗೆ ರೂಟ್ ಟೆಸ್ಟ್ ಕ್ರಿಕೆಟ್‌ನಲ್ಲಿ 7 ತಂಡಗಳ ವಿರುದ್ಧ ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.



Published On - 6:36 pm, Sun, 5 June 22