ENG vs NZ: ಅಬ್ಬಾ… 100.88 ಸರಾಸರಿ, 6 ಟೆಸ್ಟ್‌ಗಳಲ್ಲಿ 807 ರನ್! ವಿಶ್ವ ದಾಖಲೆ ಮುರಿದ ಹ್ಯಾರಿ ಬ್ರೂಕ್

|

Updated on: Feb 24, 2023 | 2:09 PM

ENG vs NZ: ತಮ್ಮ ವೃತ್ತಿಜೀವನದ ಆರನೇ ಟೆಸ್ಟ್ ಆಡುತ್ತಿರುವ ಹ್ಯಾರಿ ಬ್ರೂಕ್, ತಮ್ಮ ದಾಖಲೆಯ ಆಟದ ಮೂಲಕ ಸುನಿಲ್ ಗವಾಸ್ಕರ್ (912) ಮತ್ತು ಡಾನ್ ಬ್ರಾಡ್ಮನ್ (862) ಅವರ ದಾಖಲೆ ಕೂಡ ಮುರಿದಿದ್ದಾರೆ.

1 / 6
ಹ್ಯಾರಿ ಬ್ರೂಕ್ ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕಾಲಿಟ್ಟಾಗಿನಿಂದ ತಂಡದ ಆಟದ ಶೈಲಿಯ ಬೇರೆ ರೂಪ ಬಡೆದುಕೊಂಡಿದೆ. ಇಂಗ್ಲೆಂಡ್‌ನ ಹೊಸ ರನ್ ಮಷಿನ್ ಎನಿಸಿಕೊಂಡಿರುವ ಹ್ಯಾರಿ ಬ್ರೂಕ್ ಪ್ರತಿ ಪಂದ್ಯದಲ್ಲೂ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲೂ ಹ್ಯಾರಿ ಬ್ರೂಕ್ ಬಿರುಸಿನ ಶತಕ ಬಾರಿಸುವುದರೊಂದಿಗೆ ಹಲವು ದಾಖಲೆಗಳನ್ನು ಮುರಿದಿದ್ದಾರೆ.

2 / 6
ವೆಲ್ಲಿಂಗ್ಟನ್ ಟೆಸ್ಟ್‌ನ ಮೊದಲ ದಿನದಲ್ಲಿ ಅಜೇಯ 184 ರನ್ ಗಳಿಸಿದ್ದ ಹ್ಯಾರಿ ಬ್ರೂಕ್, ಟೆಸ್ಟ್ ಕ್ರಿಕೆಟ್‌ನ ದೊಡ್ಡ ದಾಖಲೆಯೊಂದನ್ನು ಮುರಿದ್ದಾರೆ. ತಮ್ಮ ಟೆಸ್ಟ್ ವೃತ್ತಿಜೀವನದ 9ನೇ ಟೆಸ್ಟ್ ಇನ್ನಿಂಗ್ಸ್‌ ಆಡುತ್ತಿರುವ ಬ್ರೂಕ್, 800 ರನ್‌ಗಳ ಗಡಿ ದಾಟಿದ ದಾಖಲೆ ಬರೆದಿದ್ದಾರೆ.

3 / 6
ಇದರೊಂದಿಗೆ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಎಂಬ ಖ್ಯಾತಿಗೂ ಭಾಜನರಾಗಿದ್ದಾರೆ. ಈ ಮೊದಲು 9 ಟೆಸ್ಟ್ ಇನ್ನಿಂಗ್ಸ್‌ಗಳಲ್ಲಿ 798 ರನ್ ಗಳಿಸಿದ್ದ ವಿನೋದ್ ಕಾಂಬ್ಳಿ ಹೆಸರಿನಲ್ಲಿ ಈ ದಾಖಲೆ ಇತ್ತು.

4 / 6
ತಮ್ಮ ವೃತ್ತಿಜೀವನದ ಆರನೇ ಟೆಸ್ಟ್ ಆಡುತ್ತಿರುವ ಹ್ಯಾರಿ ಬ್ರೂಕ್, ತಮ್ಮ ದಾಖಲೆಯ ಆಟದ ಮೂಲಕ ಸುನಿಲ್ ಗವಾಸ್ಕರ್ (912) ಮತ್ತು ಡಾನ್ ಬ್ರಾಡ್ಮನ್ (862) ಅವರ ದಾಖಲೆ ಕೂಡ ಮುರಿದಿದ್ದಾರೆ.

5 / 6
ಇದುವರೆಗೆ 6 ಟೆಸ್ಟ್‌ಗಳನ್ನಾಡಿರುವ ಹ್ಯಾರಿ ಬ್ರೂಕ್, 100.88 ಸರಾಸರಿಯಲ್ಲಿ 807 ರನ್ ಗಳಿಸಿದ್ದು, 99.38ರ ಸ್ಟ್ರೈಕ್ ರೇಟ್​ನಲ್ಲಿ ಬ್ಯಾಟ್ ಬೀಸಿದ್ದಾರೆ.

6 / 6
ಇಂಗ್ಲೆಂಡ್‌ನ ಅಂಡರ್-19 ನಾಯಕರಾಗಿದ್ದ ಹ್ಯಾರಿ ಬ್ರೂಕ್ ಅವರನ್ನು ನ್ಯೂಜಿಲೆಂಡ್‌ನಲ್ಲಿ ನಡೆದ 2017 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ತಂಡದಿಂದ ಅಮಾನತುಗೊಳಿಸಲಾಗಿತ್ತು. ವಾಸ್ತವವಾಗಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯಕ್ಕೂ ಮುನ್ನ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಅಶಿಸ್ತಿನ ದೂರಿನ ಮೇರೆಗೆ ಬ್ರೂಕ್ ಅವರನ್ನು ಹೊರಗಿಡಲಾಗಿತ್ತು. ಆದಾಗ್ಯೂ, ಆ ನಂತರ ತನ್ನ ತಪ್ಪುಗಳಿಂದ ಪಾಠ ಕಲಿತ ಹ್ಯಾರಿ ಬ್ರೂಕ್ ಇಂದು ತಮ್ಮ ಬ್ಯಾಟಿಂಗ್​ನಿಂದ ವಿಶ್ವದ ಗಮನ ಸೆಳೆಯುತ್ತಿದ್ದಾರೆ.

Published On - 2:09 pm, Fri, 24 February 23