IPL 2024: ಐಪಿಎಲ್ನಲ್ಲಿ ಈ ಐದು ದಾಖಲೆಗಳನ್ನು ಮುರಿಯುವುದು ಕಷ್ಟಸಾಧ್ಯ..!
IPL 2024: ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 16 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 17ನೇ ಆವೃತ್ತಿಗೆ ಕಾಲಿಟ್ಟಿದೆ. ಲೀಗ್ನಲ್ಲಿ ಇದುವರೆಗೆ ನಡೆದಿರುವ 16 ಆವೃತ್ತಿಗಳಲ್ಲೂ ಒಂದಿಲ್ಲೊಂದು ಮುರಿಯಲಾಗದಂತಹ ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಪ್ರಮುಖವಾಗಿ ಈ ಐದು ದಾಖಲೆಗಳನ್ನು ಮುರಿಯುವುದು ಅಸಾಧ್ಯವೆಂದೇ ಹೇಳಲಾಗುತ್ತದೆ.
1 / 6
ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್ 16 ಆವೃತ್ತಿಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ 17ನೇ ಆವೃತ್ತಿಗೆ ಕಾಲಿಟ್ಟಿದೆ. ಲೀಗ್ನಲ್ಲಿ ಇದುವರೆಗೆ ನಡೆದಿರುವ 16 ಆವೃತ್ತಿಗಳಲ್ಲೂ ಒಂದಿಲ್ಲೊಂದು ಮುರಿಯಲಾಗದಂತಹ ಅಪರೂಪದ ದಾಖಲೆಗಳು ನಿರ್ಮಾಣವಾಗಿವೆ. ಅದರಲ್ಲಿ ಪ್ರಮುಖವಾಗಿ ಈ ಐದು ದಾಖಲೆಗಳನ್ನು ಮುರಿಯುವುದು ಅಸಾಧ್ಯವೆಂದೇ ಹೇಳಲಾಗುತ್ತದೆ.
2 / 6
ಕ್ರಿಸ್ ಗೇಲ್ ಅಜೇಯ 175 ರನ್: 2013 ರ ಐಪಿಎಲ್ನಲ್ಲಿ ಆರ್ಸಿಬಿಯ ಅಂದಿನ ಆರಂಭಿಕ ಆಟಗಾರನಾಗಿದ್ದ ಗೇಲ್, ಪುಣೆ ವಾರಿಯರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 66 ಎಸೆತಗಳಲ್ಲಿ 175 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದ್ದರು. ಇದು ಐಪಿಎಲ್ ಇತಿಹಾಸದಲ್ಲಿ ಬ್ಯಾಟರ್ ಒಬ್ಬ ಕಲೆಹಾಕಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿ ಉಳಿದಿದೆ. ಗೇಲ್ ಈ ಸಿಡಿಲಬ್ಬರದ ಇನ್ನಿಂಗ್ಸ್ನಲ್ಲಿ 13 ಬೌಂಡರಿ ಮತ್ತು 17 ಸಿಕ್ಸರ್ಗಳನ್ನು ಬಾರಿಸಿದ್ದರು.
3 / 6
ಅತಿ ಹೆಚ್ಚು ಪ್ಲೇಆಫ್: ಎಂಎಸ್ ಧೋನಿ ನಾಯಕತ್ವದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಐಪಿಎಲ್ ಇತಿಹಾಸದಲ್ಲಿ ಆಡಿರುವ 14 ಆವೃತ್ತಿಗಳಲ್ಲಿ ಬರೋಬ್ಬರಿ 12 ಬಾರಿ ಪ್ಲೇಆಫ್ ಆಡಿದೆ. ಇದರಲ್ಲಿ ದಾಖಲೆಯ 10 ಬಾರಿ ಫೈನಲ್ ಪ್ರವೇಶಿಸಿದೆ. 16 ಐಪಿಎಲ್ ಸೀಸನ್ಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಐದು ಬಾರಿ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ.
4 / 6
ಒಂದೇ ಸೀಸನ್ನಲ್ಲಿ ಅತಿ ಹೆಚ್ಚು ರನ್: ಆರ್ಸಿಬಿ ಲೆಜೆಂಡ್ ವಿರಾಟ್ ಕೊಹ್ಲಿ 2016 ರ ಐಪಿಎಲ್ನಲ್ಲಿ ಆಡಿದ 16 ಪಂದ್ಯಗಳಲ್ಲಿ 973 ರನ್ ಕಲೆಹಾಕಿದ್ದರು. ಇದರಲ್ಲಿ 4 ಶತಕ ಮತ್ತು 7 ಅರ್ಧ ಶತಕಗಳು ಸೇರಿದ್ದವು. ಕೊಹ್ಲಿ ಕಲೆಹಾಕಿರುವ 973 ರನ್ ಇದುವರೆಗೆ ಐಪಿಎಲ್ ಸೀಸನ್ವೊಂದರಲ್ಲಿ ಆಟಗಾರನೊಬ್ಬ ಕಲೆಹಾಕಿರುವ ಅತ್ಯಧಿಕ ಸ್ಕೋರ್ ಆಗಿದೆ.
5 / 6
ನಾಯಕನಾಗಿ ಹೆಚ್ಚು ಪಂದ್ಯಗಳು: ಸಿಎಸ್ಕೆ ತಂಡದ ನಾಯಕ ಎಂಎಸ್ ಧೋನಿ ಹೆಸರಿನಲ್ಲಿ ಅತಿ ಹೆಚ್ಚು ಐಪಿಎಲ್ ಪಂದ್ಯಗಳನ್ನು ಆಡಿದ ನಾಯಕನೆಂಬ ದಾಖಲೆ ಸೃಷ್ಟಿಯಾಗಿದೆ. ಧೋನಿ ನಾಯಕನಾಗಿ ಇದುವರೆಗೆ 226 ಪಂದ್ಯಗಳನ್ನು ಆಡಿದ್ದಾರೆ. 2008 ರಲ್ಲಿ ಲೀಗ್ ಪ್ರಾರಂಭವಾದಾಗಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ 16 ವರ್ಷಗಳಿಂದ ತಂಡವನ್ನು ಮುನ್ನಡೆಸಿದ್ದಾರೆ.
6 / 6
ಯಾವುದೇ ವಿಕೆಟ್ಗೆ ಅತ್ಯಧಿಕ ಜೊತೆಯಾಟ: 2016 ರಲ್ಲಿ ಆರ್ಸಿಬಿ ಸೂಪರ್ ಸ್ಟಾರ್ಗಳಾದ ವಿರಾಟ್ ಕೊಹ್ಲಿ ಮತ್ತು ಎಬಿ ಡಿವಿಲಿಯರ್ಸ್ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಎರಡನೇ ವಿಕೆಟ್ಗೆ ದಾಖಲೆಯ 229 ರನ್ಗಳ ಜೊತೆಯಾಟವನ್ನಾಡಿದ್ದರು. ಇಲ್ಲಿಯವರೆಗೆ ಈ ಜೊತೆಯಾಟವನ್ನು ಬೇರೆ ಯಾವ ಜೋಡಿಗೂ ಮುರಿಯಲು ಸಾಧ್ಯವಾಗಿಲ್ಲ.