Kane Williamson: 3ನೇ ಬಾರಿಗೆ ತಂದೆಯಾದ ಕಿವೀಸ್ ಸ್ಟಾರ್ ಕೇನ್ ವಿಲಿಯಮ್ಸನ್
Kane Williamson: ನ್ಯೂಜಿಲೆಂಡ್ ಕ್ರಿಕೆಟಿಗ ಕೇನ್ ವಿಲಿಯಮ್ಸನ್ ಮೂರನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಸಂಗಾತಿ ಸಾರಾ ರಹೀಮ್ ಮಗಳಿಗೆ ಜನ್ಮ ನೀಡಿದ್ದಾರೆ. ಸ್ವತಃ ಕೇನ್ ವಿಲಿಯಮ್ಸನ್ ಅವರೇ ಈ ಸಂತಸದ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
1 / 6
ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮತ್ತು ಏಸ್ ಬ್ಯಾಟ್ಸ್‌ಮನ್ ಕೇನ್ ವಿಲಿಯಮ್ಸನ್ ಮೂರನೇ ಬಾರಿಗೆ ತಂದೆಯಾಗಿದ್ದಾರೆ. ಅವರ ಮಡದಿ ಸಾರಾ ರಹೀಮ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.
2 / 6
ಸ್ವತಃ ಕೇನ್ ವಿಲಿಯಮ್ಸನ್ ಅವರೇ ತಮ್ಮ ಪತ್ನಿ ಮತ್ತು ನವಜಾತ ಮಗಳೊಂದಿಗಿನ ಫೋಟೋವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಾದ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಳ್ಳುವ ಮೂಲಕ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.
3 / 6
ದಂಪತಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ. ಹಿರಿಯ ಮಗಳಿಗೆ ಮೂರು ವರ್ಷ, ಅವರ ಹೆಸರು ಮ್ಯಾಗಿ, ಕಿರಿಯ ಮಗನಿಗೆ ಒಂದು ವರ್ಷ. ವಿಲಿಯಮ್ಸನ್ ಪಿತೃತ್ವ ರಜೆಯಲ್ಲಿರುವ ಕಾರಣ ನ್ಯೂಜಿಲೆಂಡ್‌ನ ಇತ್ತೀಚಿನ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ಆಡಲಿಲ್ಲ.
4 / 6
ಆದಾಗ್ಯೂ, ದಕ್ಷಿಣ ಆಫ್ರಿಕಾ ವಿರುದ್ಧ ಇತ್ತೀಚಿಗೆ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಅಬ್ಬರಿಸಿದ್ದ ಕೇನ್ ವಿಲಿಯಮ್ಸನ್ ಬ್ಯಾಕ್ ಟು ಬ್ಯಾಕ್ ಶತಕ ಸಿಡಿಸಿ ಕಿವೀಸ್ ಪಡೆ, ದಕ್ಷಿಣ ಆಫ್ರಿಕಾ ವಿರುದ್ಧ ತಮ್ಮ ಮೊದಲ ಟೆಸ್ಟ್ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
5 / 6
ಕೇನ್ ವಿಲಿಯಮ್ಸನ್ ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಟೆಸ್ಟ್‌ಗಳ ಸರಣಿಯ ನಾಲ್ಕು ಇನ್ನಿಂಗ್ಸ್‌ಗಳಲ್ಲಿ ತಲಾ ಮೂರು ಶತಕಗಳನ್ನು ಸಿಡಿಸಿದರು. ಅವರು ಮೌಂಟ್ ಮೌಂಗನುಯಿಯಲ್ಲಿ 118 ಮತ್ತು 109 ರನ್‌ಗಳ ಇನ್ನಿಂಗ್ಸ್ ಆಡಿದರೆ, ಹ್ಯಾಮಿಲ್ಟನ್‌ನಲ್ಲಿ ನಡೆದ ಎರಡನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್ನಲ್ಲಿಲ್ಲಿ 43 ರನ್ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಔಟಾಗದೆ 133 ರನ್ ಕಲೆಹಾಕಿದರು.
6 / 6
ಈ ಮೂಲಕ 32 ಟೆಸ್ಟ್ ಶತಕಗಳೊಂದಿಗೆ ಅತಿ ಹೆಚ್ಚು ಟೆಸ್ಟ್ ಶತಕ ಬಾರಿಸಿದ ಬ್ಯಾಟ್ಸ್ಮನ್ಗಳ ಪಟ್ಟಿಯಲ್ಲಿ ವಿರಾಟ್ ಕೊಹ್ಲಿಯಂತಹ ದಿಗ್ಗಜರನ್ನು ಹಿಂದಿಕ್ಕಿ 12ನೇ ಸ್ಥಾನಕ್ಕೇರಿದ್ದಾರೆ.