ಟಿ20 ವಿಶ್ವಕಪ್​​ಗೂ ಮುನ್ನ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಪಾಕ್ ಮಾಜಿ ಕ್ಯಾಪ್ಟನ್ ವಿದಾಯ..!

|

Updated on: Apr 25, 2024 | 5:52 PM

Bismah Maroof: ಟಿ20 ವಿಶ್ವಕಪ್‌ ಆರಂಭವಾಗುವುದಕ್ಕೂ ಮುನ್ನ ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರ ದಿಡೀರ್ ನಿವೃತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಅಲ್ಲದೆ ಹಿರಿಯ ಆಟಗಾರ್ತಿಯ ದಿಢೀರ್‌ ನಿವೃತ್ತಿಯಾಗಲು ಕಾರಣವೇನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

1 / 8
2024ರ ಟಿ20 ವಿಶ್ವಕಪ್ ಸನಿಹದಲ್ಲಿರುವಾಗಲೇ ಪಾಕಿಸ್ತಾನ ಮಹಿಳಾ ಕ್ರಿಕೆಟ್ ತಂಡ ಆಘಾತ ಎದುರಿಸಿದೆ. ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಇದ್ದಕ್ಕಿದ್ದಂತೆ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಇದು ಪಾಕ್ ಮಹಿಳಾ ತಂಡದ ಅಭಿಮಾನಿಗಳಿಗೆ ಶಾಕ್ ನೀಡಿದೆ.

2 / 8
ಇದೀಗ ಟಿ20 ವಿಶ್ವಕಪ್‌ ಆರಂಭವಾಗುವುದಕ್ಕೂ ಮುನ್ನ ಮಾಜಿ ನಾಯಕಿ ಬಿಸ್ಮಾ ಮರೂಫ್ ಅವರ ದಿಡೀರ್ ನಿವೃತ್ತಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಸಮಸ್ಯೆಗಳನ್ನು ಹೆಚ್ಚಿಸಿದೆ. ಅಲ್ಲದೆ ಹಿರಿಯ ಆಟಗಾರ್ತಿಯ ದಿಢೀರ್‌ ನಿವೃತ್ತಿಯಾಗಲು ಕಾರಣವೇನು ಎಂಬುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

3 / 8
ವಾಸ್ತವವಾಗಿ ಇದೇ ವರ್ಷ ಪುರುಷರ ಹಾಗೂ ಮಹಿಳೆಯರ ಟಿ20 ವಿಶ್ವಕಪ್ ನಡೆಯಲ್ಲಿದೆ. ಪುರುಷರ ವಿಶ್ಷಕಪ್ ಜೂನ್ 6 ರಿಂದ ಆರಂಭವಾಗಿ, ಜೂನ್ ಅಂತ್ಯಕ್ಕೆ ಅಂತ್ಯಗೊಳ್ಳಲಿದೆ. ಆ ನಂತರ ಮಹಿಳೆಯರ ಟಿ20 ವಿಶ್ವಕಪ್ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಡೆಯಲ್ಲಿದೆ.

4 / 8
ಬಾಂಗ್ಲಾದೇಶದಲ್ಲಿ ಈ ಟಿ20 ವಿಶ್ವಕಪ್ ಆಯೋಜನೆಯಾಗಲಿದ್ದು, ಒಟ್ಟು 10 ತಂಡಗಳು ಭಾಗವಹಿಸಲಿವೆ. ಎಲ್ಲಾ ತಂಡಗಳು ಈಗಾಗಲೇ ಈ ಬಗ್ಗೆ ತಯಾರಿಯಲ್ಲಿ ನಿರತವಾಗಿದ್ದವು, ಆದರೆ ಪಾಕಿಸ್ತಾನದ ಮಹಿಳಾ ಕ್ರಿಕೆಟ್ ತಂಡದ ಮಾಜಿ ನಾಯಕಿ ಬಿಸ್ಮಾ ಮರೂಫ್ ಇದ್ದಕ್ಕಿದ್ದಂತೆ ನಿವೃತ್ತಿ ಘೋಷಿಸಿದ್ದು, ತಮ್ಮ ನಿರ್ಧಾರದಿಂದ ಮಂಡಳಿ ಹಾಗೂ ಅಭಿಮಾನಿಗಳನ್ನು ಅಚ್ಚರಿಗೊಳಿಸಿದ್ದಾರೆ.

5 / 8
ಬಿಸ್ಮಾ ಮರೂಫ್ ತಮ್ಮ ಟ್ವಿಟರ್‌ನಲ್ಲಿ ಪೋಸ್ಟ್ ಹಾಕುವ ಮೂಲಕ ನಿವೃತ್ತಿಯ ಬಗ್ಗೆ ಮಾಹಿತಿ ನೀಡಿದ್ದಾರೆ. ನನ್ನ ನೆಚ್ಚಿನ ಆಟದಿಂದ ನಿವೃತ್ತಿ ಹೊಂದಲು ನಿರ್ಧರಿಸಿದ್ದೇನೆ. ಇದು ನಂಬಲಸಾಧ್ಯವಾದದ್ದು, ಸವಾಲು, ಉತ್ಸಾಹ, ಸಂತೋಷದಿಂದ ತುಂಬಿದೆ.

6 / 8
ಈ ಪ್ರಯಾಣಕ್ಕಾಗಿ, ಈ ಪ್ರಯಾಣದಲ್ಲಿ ನನಗೆ ಬೆಂಬಲ ನೀಡಿದ ನನ್ನ ಕುಟುಂಬಕ್ಕೆ ನಾನು ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಇದರೊಂದಿಗೆ ನಾನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೂ ಧನ್ಯವಾದ ಹೇಳುತ್ತೇನೆ ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.

7 / 8
ಮರೂಫ್ ಅವರ ವೃತ್ತಿಜೀವನದ ಬಗ್ಗೆ ಹೇಳುವುದಾದರೆ.. 2006 ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿದ ಅವರು 276 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ್ದಾರೆ. ಇದರಲ್ಲಿ ಒಟ್ಟು 6262 ಕಲೆಹಾಕಿದ್ದು, ಇದರಲ್ಲಿ 33 ಅರ್ಧಶತಕಗಳು ಸೇರಿವೆ.

8 / 8
ಬ್ಯಾಟಿಂಗ್ ಜೊತೆಗೆ ಬೌಲಿಂಗ್​ನಲ್ಲೂ ತಂಡಕ್ಕೆ ಕೊಡುಗೆ ನೀಡಿರುವ ಮರೂಫ್ ಒಟ್ಟು 80 ವಿಕೆಟ್‌ ಪಡೆದಿದ್ದಾರೆ. ನಾಯಕಿಯಾಗಿ, ಮರೂಫ್ 2020 ಮತ್ತು 2023 ರಲ್ಲಿ ಐಸಿಸಿ ಮಹಿಳಾ ಟಿ20 ವಿಶ್ವಕಪ್ ಮತ್ತು 2022 ರಲ್ಲಿ ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಸೇರಿದಂತೆ 96 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಮುನ್ನಡೆಸಿದ್ದಾರೆ. ಆದರೆ, ಪಾಕಿಸ್ತಾನ ತಂಡ ಈ ಪ್ರಶಸ್ತಿಗಳಲ್ಲಿ ಒಂದನ್ನು ಗೆಲ್ಲಲು ಸಾಧ್ಯವಾಗಲಿಲ್ಲ.