ICC ODI World Cup: ಭಾರತ-ಇಂಗ್ಲೆಂಡ್ ಅಭ್ಯಾಸ ಪಂದ್ಯಕ್ಕೆ ವರುಣನ ಕಾಟ: ಎಷ್ಟು ಗಂಟೆಗೆ ಮಳೆ ಆಗಲಿದೆ?
Guwahati Weather Report, IND vs ENG Warm-up Match: ಭಾರತ ಹಾಗೂ ಇಂಗ್ಲೆಂಡ್ ತಂಡದ ಐಸಿಸಿ ಏಕದಿನ ವಿಶ್ವಕಪ್ ಅಭ್ಯಾಸ ಪಂದ್ಯವನ್ನು ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ನಿನ್ನೆ ಕೂಡ ಮಳೆಯಿಂದಾಗಿ ಆಫ್ರಿಕಾ-ಅಫ್ಘಾನ್ ನಡುವಣ ಅಭ್ಯಾಸ ಪಂದ್ಯ ರದ್ದು ಮಾಡಲಾಗಿತ್ತು.
1 / 7
ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ದಿನಗಣನೆ ಶುರುವಾಗಿದೆ. ಅಕ್ಟೋಬರ್ 5 ರಂದು ಭಾರತದಲ್ಲಿ ಆರಂಭವಾಗಲಿರುವ ಈ ರಣರೋಚಕ ಟೂರ್ನಿಗೆ ಐದು ದಿನವಷ್ಟೇ ಬಾಕಿಯಿದೆ. ಇದಕ್ಕೂ ಮುನ್ನ ಅಭ್ಯಾಸ ಪಂದ್ಯಗಳು ನಡೆಯುತ್ತಿದೆ. ಇಂದು ಭಾರತ-ಇಂಗ್ಲೆಂಡ್ ತಂಡಗಳು ವಾರ್ಮ್ ಅಪ್ ಮ್ಯಾಚ್ನಲ್ಲಿ ಮುಖಾಮುಖಿ ಆಗಲಿದೆ.
2 / 7
ಭಾರತ ಹಾಗೂ ಇಂಗ್ಲೆಂಡ್ ತಂಡದ ಅಭ್ಯಾಸ ಪಂದ್ಯವನ್ನು ಗುವಾಹಟಿಯ ಬರ್ಸಾಪರ ಕ್ರಿಕೆಟ್ ಸ್ಟೇಡಿಯಂನಲ್ಲಿ ಏರ್ಪಡಿಸಲಾಗಿದೆ. ಆದರೆ, ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದ್ದು, ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ. ನಿನ್ನೆ ಕೂಡ ಮಳೆಯಿಂದಾಗಿ ಆಫ್ರಿಕಾ-ಅಫ್ಘಾನ್ ನಡುವಣ ಅಭ್ಯಾಸ ಪಂದ್ಯ ರದ್ದು ಮಾಡಲಾಗಿತ್ತು.
3 / 7
ಇಂದು ಇಂಡೋ-ಇಂಗ್ಲೆಂಡ್ ಕದನಕ್ಕೆ ಗುವಾಹಟಿಯಲ್ಲಿ ಹೆಚ್ಚಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಂಜೆ 70 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಆದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಭ್ಯಾಸ ಪಂದ್ಯಕ್ಕೆ ಮಳೆ ಅಡಚಣೆ ಪಡಿಸುವುದು ಖಚಿಯ. ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್‌ನಿಂದ 34 ಡಿಗ್ರಿ ಸೆಲ್ಸಿಯಸ್ ಇರಬಹುದು.
4 / 7
MET ಇಲಾಖೆಯ ಪ್ರಕಾರ, ಗುವಾಹಟಿಯಲ್ಲಿ ಶನಿವಾರ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಸಂಜೆ 4 ಗಂಟೆಯ ನಂತರ ಮಳೆ ಬರುವ ಸಾಧ್ಯತೆ ಇದ್ದು, ವಾತಾವರಣ 35 ಡಿಗ್ರಿ ಸೆಲ್ಸಿಯಸ್ ಇರಲಿದೆ. 30% ಮಳೆಯಾಗುವ ನಿರೀಕ್ಷೆಯಿದೆ ಮತ್ತು ತೇವಾಂಶವು 75% ಕೂಡಿರುತ್ತದೆ ಎಂಧು ವರದಿ ಆಗಿದೆ.
5 / 7
ಪಿಚ್ ಬಗ್ಗೆ ನೋಡುವುದಾದರೆ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂ ಪಿಚ್ ಬ್ಯಾಟರ್‌ಗಳಿಗೆ ಹೆಚ್ಚು ಸಹಕಾರಿ ಆಗಿದೆ. ವೇಗದ ಬೌಲರ್ಗಳಿಗೆ ಹೆಚ್ಚು ಬೌನ್ಸ್ ನೀಡುತ್ತದೆ. ಬೌಲರ್‌ಗಳು ಈ ಪಿಚ್‌ನಲ್ಲಿ ಸರಿಯಾದ ಗುರಿ ಇಟ್ಟು ಬೌಲಿಂಗ್ ಮಾಡಿದರೆ ಮಾತ್ರ ಯಶಸ್ಸು ಸಾಧ್ಯ.
6 / 7
ಈ ಪಿಚ್‌ನಲ್ಲಿ ಆಟವು ಮುಂದುವರೆದಂತೆ, ವಿಶೇಷವಾಗಿ ಮಧ್ಯಮ ಹಂತಗಳಲ್ಲಿ ಪಿಚ್ ಸ್ಪಿನ್ನರ್ಗಳಿಗೆ ಸಹಾಯ ಮಾಡಲಿದೆ. ಟಾಸ್ ಗೆದ್ದ ತಂಡವು ಮೊದಲು ಬ್ಯಾಟಿಂಗ್ ಆಯ್ಕೆ ಮಾಡುವುದು ಉತ್ತಮ ಆಯ್ಕೆ. ದ್ವಿತೀಯ ಇನ್ನಿಂಗ್ಸ್ನಲ್ಲಿ ಬೌಲರ್‌ಗಳು ಮಾರಕ ಆಗುವ ಲಕ್ಷಣಗಳಿವೆ.
7 / 7
ಇದು ವಾರ್ಮ್-ಅಪ್ ಮ್ಯಾಚ್ ಆಗಿರುವುದರಿಂದ ಪ್ಲೇಯಿಂಗ್ ಇಲೆವೆನ್ ಎಂಬ ನಿಯಮವಿಲ್ಲ. ತಂಡದಲ್ಲಿರುವ ಯಾವ ಆಟಗಾರ ಕೂಡ ಕಣಕ್ಕಿಳಿಯಬಹುದು. ಬ್ಯಾಟಿಂಗ್ ಇನ್ನಿಂಗ್ಸ್ನಲ್ಲಿ ಆಡಿದ ಆಟಗಾರರೇ ಬೌಲಿಂಗ್ ಮಾಡುವಾಗ ಕೂಡ ಇರಬೇಕೆಂದಿಲ್ಲ. ಹೀಗಾಗಿ ಟೀಮ್ ಇಂಡಿಯಾ ಎಲ್ಲ ಆಟಗಾರರನ್ನು ಅಭ್ಯಾಸ ಪಂದ್ಯದಲ್ಲಿ ಆಡಿಸಬಹುದು.
Published On - 7:18 am, Sat, 30 September 23