Happy Birthday Axar Patel: ಇಂದು ಅಕ್ಷರ್ ಪಟೇಲ್ ಹುಟ್ಟುಹಬ್ಬ: ಸ್ಟಾರ್ ಆಲ್ರೌಂಡರ್ ಮದುವೆ ಆಗುತ್ತಿರುವ ಈ ಮುದ್ದು ಹುಡುಗಿ ಯಾರು ಗೊತ್ತೇ?

Edited By:

Updated on: Jan 20, 2023 | 11:06 AM

Axar Patel Marriage: ಭಾರತ ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1994 ಜನವರಿ 20ರಂದು ಗುಜರಾತ್​ನಲ್ಲಿ ಜನಿಸಿದ ಪಟೇಲ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

1 / 6
ಭಾರತ ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1994 ಜನವರಿ 20ರಂದು ಗುಜರಾತ್​ನಲ್ಲಿ ಜನಿಸಿದ ಪಟೇಲ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

ಭಾರತ ಕ್ರಿಕೆಟ್ ತಂಡದಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿರುವ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 1994 ಜನವರಿ 20ರಂದು ಗುಜರಾತ್​ನಲ್ಲಿ ಜನಿಸಿದ ಪಟೇಲ್ ಇಂದು 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

2 / 6

ಅಕ್ಷರ್ ಪಟೇಲ್ ಅವರು ಹುಟ್ಟುಹಬ್ಬದ ಸಂಭ್ರಮದ ಜೊತೆ ಮದುವೆಯ ಸಡಗರದಲ್ಲಿಯೂ ಇದ್ದಾರೆ. ಫೆಬ್ರವರಿ ಮೊದಲ ವಾರದಲ್ಲಿ ಅಕ್ಷರ್ ಪಟೇಲ್ ತನ್ನ ಪ್ರೇಯಸಿ ಮೇಹಾ ಪಟೇಲ್ ಅವರನ್ನು ವಿವಾಹವಾಗಲಿದ್ದಾರೆ ಎಂದು ವರದಿ ಆಗಿದೆ.

3 / 6

ಅಕ್ಷರ್ ಕಳೆದ ವರ್ಷ ಇದೇ ದಿನದಂದು ಅಂದರೆ ಹುಟ್ಟುಹಬ್ಬದ ದಿನದಂದೇ ಮೇಹಾ ಅವರಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ ತಿಂಗಳು ವಡೋದರದ ಜೇಡ್ ಗಾರ್ಡನ್ ನಲ್ಲಿ ವಿವಾಹ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಲಾಗುತ್ತಿದೆ.

4 / 6

ಮೇಹಾ ಅವರು ವೃತ್ತಿಯಲ್ಲಿ ಆಹಾರ ಮತ್ತು ಪೌಷ್ಟಿಕ ತಜ್ಞರಾಗಿದ್ದಾರೆ. ಅಕ್ಷರ್ ಅವರ ಡಯಟ್ ಮತ್ತು ಫಿಟ್ನೆಸ್ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತಾರೆ. ಅಕ್ಷರ್‌-ಮೇಹಾ ಅವರ ಮದುವೆ 4 ದಿನಗಳ ಕಾಲ ನಡೆಯಲಿದೆ. ಇದು ಸಂಗೀತ ಮತ್ತು ಹಳದಿ ಕಾರ್ಯಕ್ರಮಗಳನ್ನು ಸಹ ಒಳಗೊಂಡಿದೆ.

5 / 6

ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಇರುವ ಮೇಹಾ ಇನ್​ಸ್ಟಾಗ್ರಾಮ್​ನಲ್ಲಿ ಸದಾ ಫೋಟೋ, ವಿಡಿಯೋ ಹಂಚಿಕೊಳ್ಳುತ್ತಾ ಇರುತ್ತಾರೆ. ಇವರಿಗೆ 23000 ಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ.

6 / 6

2015ರಲ್ಲಿ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿರುವ ಅಕ್ಷರ್ 2021ರಲ್ಲಿ ಮೊದಲ ಟೆಸ್ಟ್​​ ಪಂದ್ಯವನ್ನಾಡಿದರು. ಈವರೆಗೆ 8 ಟೆಸ್ಟ್​​ ಪಂದ್ಯಗಳಿಂದ 47 ವಿಕೆಟ್​ ಪಡೆದುಕೊಂಡಿದ್ದಾರೆ. ಏಕದಿನದಲ್ಲಿ ಭಾರತದ ಪರ 49 ಪಂದ್ಯಗಳನ್ನಾಡಿ 56 ವಿಕೆಟ್ ಪಡೆದುಕೊಂಡಿದ್ದು, 40 ಟಿ20 ಪಂದ್ಯಗಳಿಂದ 37 ವಿಕೆಟ್ ಕಿತ್ತಿದ್ದಾರೆ.

Loading...
Unable to load recommendations.
Follow Us