Hardik Pandya: ಭಾರತಕ್ಕೆ ಬರುವ ಮುನ್ನ ನ್ಯೂಜಿಲೆಂಡ್ ಬಸ್ ಡ್ರೈವರ್​ಗೆ ಮರೆಯಲಾದ ಗಿಫ್ಟ್ ಕೊಟ್ಟ ಹಾರ್ದಿಕ್ ಪಾಂಡ್ಯ

| Updated By: Vinay Bhat

Updated on: Nov 27, 2022 | 10:37 AM

India vs New Zealand: ಹಾರ್ದಿಕ್ ಪಾಂಡ್ಯ ಅವರು ಟಿ20 ಸರಣಿ ಮುಗಿಸಿ ಭಾರತಕ್ಕೆ ಹಿಂತಿರುಗುವ ಮುನ್ನ ನ್ಯೂಜಿಲೆಂಡ್​ನಲ್ಲಿ ಭಾರತದ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ತಮ್ಮ ಟೀಮ್ ಇಂಡಿಯಾ ಜೆರ್ಸಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

1 / 7
ಟೀಮ್ ಇಂಡಿಯಾದ ಬ್ಯಾಕಪ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದರು. ಖಾಯಂ ನಾಯಕ ರೋಹಿತ್ ಶರ್ಮಾ ಹಾಗೂ ಉಪ ನಾಯಕ ಕೆಎಲ್ ರಾಹುಲ್ ಕಿವೀಸ್ ಪ್ರವಾಸದಿಂದ ಹೊರಗಿರುವ ಕಾರಣ ಪಾಂಡ್ಯಗೆ ಟಿ20 ನಾಯಕತ್ವ ನೀಡಲಾಯಿತು. ಹಾರ್ದಿಕ್​ ನೇತೃತ್ವದಲ್ಲಿ ಭಾರತ ಟಿ2 ಸರಣಿಯನ್ನು 1-0 ಅಂತರದಿಂದ ವಶಪಡಿಸಿಕೊಂಡಿತು.

2 / 7
ಹಾರ್ದಿಕ್​ಗೆ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಅವರು ಟಿ20 ಸರಣಿ ಮುಗಿದ ಬಳಿಕ ತವರಿಗೆ ಮರಳಿದ್ದಾರೆ. ಆದರೆ, ಭಾರತಕ್ಕೆ ಹಿಂತಿರುಗುವ ಮುನ್ನ ಹಾರ್ದಿಕ್ ಮಾಡಿದ ಒಂದು ಕೆಲಸ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ನ್ಯೂಜಿಲೆಂಡ್​ನಲ್ಲಿ ಇವರು ಮಾಡಿದ ಕೆಲಸ ಎಲ್ಲರ ಮನ ಗೆದ್ದಿದೆ.

3 / 7
ಹಾರ್ದಿಕ್ ಪಾಂಡ್ಯ ಅವರು ಟಿ20 ಸರಣಿ ಮುಗಿಸಿ ಭಾರತಕ್ಕೆ ಹಿಂತಿರುಗುವ ಮುನ್ನ ನ್ಯೂಜಿಲೆಂಡ್​ನಲ್ಲಿ ಭಾರತದ ಕ್ರಿಕೆಟ್ ತಂಡದ ಬಸ್ ಚಾಲಕನಿಗೆ ತಮ್ಮ ಟೀಮ್ ಇಂಡಿಯಾ ಜೆರ್ಸಿ ಅನ್ನು ಉಡುಗೊರೆಯಾಗಿ ನೀಡಿದ್ದಾರೆ. ಅಷ್ಟೇ ಅಲ್ಲದೆ ಈ ಜೆರ್ಸಿ ಮೇಲೆ ತಮ್ಮ ಆಟೊಗ್ರಾಫ್ ಬರೆದು ಮರೆಯಲಾದ ಉಡುಗೊರೆ ನೀಡಿದ್ದಾರೆ. ಈ ಸುದ್ದಿ ನ್ಯೂಜಿಲೆಂಡ್ ಮತ್ತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ನೀಡಿದೆ.

4 / 7
ಮೈಕರ್ ಜೋನ್ಸ್ ಎಂಬವರಿಗೆ ಹಾರ್ದಿಕ್ ಈ ಉಡುಗೊರೆ ನೀಡಿದ್ದಾರೆ. ಭಾರತದ ಪತ್ರಕರ್ತ ವಿಮಲ್ ಕುಮಾರ್ ಎಂಬವರರು ಜೋನ್ಸ್ ಅವರನ್ನು ಮಾತನಾಡಿಸಿದ್ದು ಆಗ ಈ ವಿಚಾರ ತಿಳಿದುಬಂದಿದೆ. ಇದರಿಂದ ನನಗೆ ತುಂಬಾ ಖುಷಿ ಆಗಿದೆ ಎಂದು ಜೋನ್ಸ್ ಹೇಳಿದ್ದಾರೆ.ಮೈಕರ್ ಜೋನ್ಸ್ ಎಂಬವರಿಗೆ ಹಾರ್ದಿಕ್ ಈ ಉಡುಗೊರೆ ನೀಡಿದ್ದಾರೆ. ಭಾರತದ ಪತ್ರಕರ್ತ ವಿಮಲ್ ಕುಮಾರ್ ಎಂಬವರರು ಜೋನ್ಸ್ ಅವರನ್ನು ಮಾತನಾಡಿಸಿದ್ದು ಆಗ ಈ ವಿಚಾರ ತಿಳಿದುಬಂದಿದೆ. ಇದರಿಂದ ನನಗೆ ತುಂಬಾ ಖುಷಿ ಆಗಿದೆ ಎಂದು ಜೋನ್ಸ್ ಹೇಳಿದ್ದಾರೆ.

5 / 7
ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತ ನ್ಯೂಜಿಲೆಂಡ್ ತಂಡದ ವಿರುದ್ಧ 1-0 ಅಂತರದಿಂದ ಟಿ20 ಸರಣಿ ವಶಪಡಿಸಿಕೊಂಡಿತು. ಮೊದಲ ಪಂದ್ಯ ಮಳೆಯಿಂದಾಗಿ ಸಂಪೂರ್ಣ ರದ್ದಾಯಿತು. ದ್ವಿತೀಯ ಪಂದ್ಯದಲ್ಲಿ ಭಾರತ 191 ರನ್ ಕಲೆಹಾಕಿದರೆ ನ್ಯೂಜಿಲೆಂಡ್ 126 ರನ್​ಗೆ ಆಲೌಟ್ ಆದ ಪರಿಣಾಮ ಸರಣಿಯಲ್ಲಿ ಮುನ್ನಡೆ ಸಾಧಿಸಿತು. ಕೊನೆಯ ಟಿ20 ಪ್ರಾರಂಭವಾಗಿ ಮಧ್ಯೆ ಮಳೆ ಬಂದ ಕಾರಣ ಪಂದ್ಯವನ್ನು ಟೈ ಎಂದು ಘೋಷಿಸಲಾಯಿತು.

6 / 7
ನ್ಯೂಜಿಲೆಂಡ್ ಪ್ರವಾಸ ಮುಗಿದ ಬಳಿಕ ಭಾರತ ಬಾಂಗ್ಲಾದೇಶಕ್ಕೆ ತೆರಳಲಿದೆ. ಇಲ್ಲಿ ಮೂರು ಪಂದ್ಯಗಳ ಏಕದಿನ ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಬಾಂಗ್ಲಾ ಪ್ರವಾಸಕ್ಕೆ ಕೂಡ ಹಾರ್ದಿಕ್ ಆಯ್ಕೆ ಆಗಿಲ್ಲ, ವಿಶ್ರಾಂತಿ ನೀಡಲಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ ಸರಣಿ ವೇಳೆ ಹಾರ್ದಿಕ್ ತಂಡ ಸೇರಿಕೊಳ್ಳಲಿದ್ದಾರೆ.

7 / 7
ಟಿ20 ಸರಣಿ ಬಳಿಕ ಭಾರತ ಇದೀಗ ಏಕದಿನ ಸರಣಿಯನ್ನು ಆಡುತ್ತಿದೆ. ಇಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆದರೆ, ಮೊದಲ ಏಕದಿನದದಲ್ಲಿ 300+ ರನ್​ಗಳ ಟಾರ್ಗೆಟ್ ನೀಡಿದ್ದರೂ ಕಳಪೆ ಬೌಲಿಂಗ್​ನಿಂದ ಭಾರತ ಸೊಲುಂಡಿತು. ಇದೀಗ ಹ್ಯಾಮಿಲ್ಟನ್​ನಲ್ಲಿ ಎರಡನೇ ಏಕದಿನ ಪಂದ್ಯ ಆಡುತ್ತಿದೆ.

Published On - 10:37 am, Sun, 27 November 22