ICC Test Rankings: ಅಶ್ವಿನ್ ಈಗ ನಂ.1 ಟೆಸ್ಟ್ ಬೌಲರ್..! ಆಲ್​ರೌಂಡರ್ ಪಟ್ಟಿಯಲ್ಲೂ ಕಮಾಲ್

Updated on: Mar 01, 2023 | 3:02 PM

ICC Test Rankings: ಬುಧವಾರ ಬಿಡುಗಡೆಯಾದ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

1 / 5
ಬುಧವಾರ ಬಿಡುಗಡೆಯಾದ ಐಸಿಸಿ ನೂತನ ಟೆಸ್ಟ್ ಶ್ರೇಯಾಂಕದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ಆರ್. ಅಶ್ವಿನ್ ಟೆಸ್ಟ್ ಬೌಲರ್ ಶ್ರೇಯಾಂಕದಲ್ಲಿ ನಂಬರ್ 1 ಸ್ಥಾನಕ್ಕೇರಿದ್ದಾರೆ.

2 / 5
ಈ ಹಿಂದೆ ನಂ.1 ಸ್ಥಾನದಲ್ಲಿದ್ದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಅವರನ್ನು ಹಿಂದಿಕ್ಕುವಲ್ಲಿ ಅಶ್ವಿನ್ ಯಶಸ್ವಿಯಾಗಿದ್ದಾರೆ. ಆಂಡರ್ಸನ್ ಕಳೆದ ವಾರವಷ್ಟೇ ನಂಬರ್ 1 ಪಟ್ಟಕ್ಕೇರಿದ್ದರು. ಆದರೆ ಇದೀಗ ಅಶ್ವಿನ್ ಈ ಸ್ಥಾನವನ್ನು ಅಲಂಕರಿಸಿದ್ದಾರೆ.

3 / 5
864 ರೇಟಿಂಗ್ ಅಂಕಗಳೊಂದಿಗೆ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದರೆ, ಜೇಮ್ಸ್ ಆಂಡರ್ಸನ್ 859 ರೇಟಿಂಗ್ ಅಂಕಗಳನ್ನು ಹೊಂದಿದ್ದು 2ನೇ ಸ್ಥಾನಕ್ಕೆ ಕುಸಿದಿದ್ದಾರೆ. 2015 ರಲ್ಲಿ ಮೊದಲ ಬಾರಿಗೆ ನಂಬರ್ 1 ಟೆಸ್ಟ್ ಬೌಲರ್ ಎನಿಸಿಕೊಂಡಿದ್ದ ಅಶ್ವಿನ್, 2016 ರಲ್ಲೂ ಈ ಸ್ಥಾನಕ್ಕೇರಿದ್ದರು.

4 / 5
ಅಶ್ವಿನ್ ಹೊರತುಪಡಿಸಿ ಭಾರತದ ಇಬ್ಬರು ಬೌಲರ್‌ಗಳು ಐಸಿಸಿ ರ್ಯಾಂಕಿಂಗ್‌ನಲ್ಲಿ ಛಾಪು ಮೂಡಿಸಿದ್ದು, ಬಹುದಿನಗಳಿಂದ ಟೀಂ ಇಂಡಿಯಾದಿಂದ ದೂರವಿರುವ ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನಕ್ಕೇರಿದ್ದರೆ, ರವೀಂದ್ರ ಜಡೇಜಾ 8ನೇ ಸ್ಥಾನಕ್ಕೆ ತಲುಪಿದ್ದಾರೆ.

5 / 5
ಬೌಲಿಂಗ್ ವಿಭಾಗವನ್ನು ಹೊರತುಪಡಿಸಿ, ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿಯೂ ಮುಂಚೂಣಿಯಲ್ಲಿರುವ ಅಶ್ವಿನ್, ರ್ಯಾಂಕಿಂಗ್​ನಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ಮತ್ತೊಬ್ಬ ಆಲ್​ರೌಂಡರ್ ರವೀಂದ್ರ ಜಡೇಜಾ ಈ ವಿಭಾಗದಲ್ಲಿ ನಂ.1 ಸ್ಥಾನವನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ.