SL vs WI: ಸೋಲಿನೊಂದಿಗೆ ಏಕದಿನ ವಿಶ್ವಕಪ್​ಗೆ ವಿದಾಯ ಹೇಳಿದ ಕೆರಿಬಿಯನ್ ದೈತ್ಯರು..!

|

Updated on: Jul 08, 2023 | 8:38 AM

ICC World Cup Qualifier: ಸ್ಕಾಟ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ತಂಡ ಅಧಿಕೃತವಾಗಿ ವಿಶ್ವಕಪ್​ನಿಂದ ಹೊರಬಿದ್ದಿತ್ತು.

1 / 7
ಐಸಿಸಿ ಕ್ವಾಲಿಫೈಯರ್ ಸೂಪರ್ ಸಿಕ್ಸ್​ನ 9ನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಶ್ರೀಲಂಕಾ 8 ವಿಕೆಟ್​ಗಳ ಜಯ ಸಾಧಿಸುವುದರೊಂದಿಗೆ ತನ್ನ ಅಜೇಯ ಓಟವನ್ನು ಮುಂದುವರೆಸಿದೆ. ಇತ್ತ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯವನ್ನು ಸೋಲುವುದರೊಂದಿಗೆ ಕೆರಿಬಿಯನ್ ದೈತ್ಯರು ತಮ್ಮ ವಿಶ್ವಕಪ್ ಪ್ರಯಾಣವನ್ನು ಅಂತ್ಯಗೊಳಿಸಿದ್ದಾರೆ.

2 / 7
ಸ್ಕಾಟ್ಲೆಂಡ್ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ 7 ವಿಕೆಟ್​ಗಳ ಹೀನಾಯ ಸೋಲು ಕಂಡಿದ್ದ ವೆಸ್ಟ್ ಇಂಡೀಸ್ ತಂಡ ಅಧಿಕೃತವಾಗಿ ವಿಶ್ವಕಪ್​ನಿಂದ ಹೊರಬಿದ್ದಿತ್ತು. ಆ ಬಳಿಕ ಔಪಚಾರಿಕವಾಗಿ ಉಳಿದಿದ್ದ ಎರಡು ಪಂದ್ಯಗಳನ್ನಾಡಿದ್ದ ವಿಂಡೀಸ್ ಪಡೆ ಒಂದರಲ್ಲಿ ಗೆದ್ದು, ಇನ್ನೊಂದರಲ್ಲಿ ಸೋಲುವುದರೊಂದಿಗೆ ತಮ್ಮ ವಿಶ್ವಕಪ್ ಪ್ರಯಾಣ ಮುಗಿಸಿದೆ.

3 / 7
ಶ್ರೀಲಂಕಾ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಕೊನೆಯ ಪಂದ್ಯವನ್ನಾಡಿದ ವಿಂಡೀಸ್ ಮೊದಲು ಬ್ಯಾಟಿಂಗ್ ಮಾಡಿ 243 ರನ್ ಕಲೆಹಾಕಿತು. ಮತ್ತೊಮ್ಮೆ ತಂಡದ ಬ್ಯಾಟಿಂಗ್ ವಿಭಾಗ ಕೈಕೊಟ್ಟಿತ್ತು. ತಂಡದ ಪರ ಕೀಸಿ ಕಾರ್ಟಿ 87 ರನ್​ಗಳ ಇನ್ನಿಂಗ್ಸ್ ಆಡಿದರು.

4 / 7
ಇನ್ನು 243 ರನ್​ಗಳ ಗುರಿ ಬೆನ್ನಟ್ಟಿದ ಲಂಕಾ 44.2 ಓವರ್‌ಗಳಲ್ಲಿ ಎರಡು ವಿಕೆಟ್‌ಗಳ ನಷ್ಟಕ್ಕೆ 244 ರನ್ ಕಲೆ ಹಾಕಿ ಪಂದ್ಯ ಗೆದ್ದಿತು. ತಂಡದ ಪರ ಆರಂಭಿಕ ಪಾತುಮ್ ನಿಸಂಕ ಶತಕ ಸಿಡಿಸಿ ಮಿಂಚಿದರೆ, ಮತ್ತೊಬ್ಬ ಆರಂಭಿಕ ದಿಮುತ್ ಕರುಣಾರತ್ನೆ 83 ರನ್​ಗಳ ಗೆಲುವಿನ ಇನ್ನಿಂಗ್ಸ್ ಆಡಿದರು.

5 / 7
ಇನ್ನು ಶ್ರೀಲಂಕಾ ಪರ 10 ಓವರ್​ಗಳಲ್ಲಿ 34 ರನ್ ನೀಡಿ 4 ವಿಕೆಟ್ ಪಡೆದ ಮಹಿಷ್ ತಿಕ್ಷಣ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

6 / 7
ವೆಸ್ಟ್ ಇಂಡೀಸ್ ತಂಡ: ಬ್ರ್ಯಾಂಡನ್ ಕಿಂಗ್, ಜಾನ್ಸನ್ ಚಾರ್ಲ್ಸ್, ಬ್ರೂಕ್ಸ್, ಶಾಯ್ ಹೋಪ್, ನಿಕೋಲಸ್ ಪೂರನ್, ಕೇಸಿ ಕಾರ್ಟಿ, ಕೈಲ್ ಮೇಯರ್ಸ್, ರೋಸ್ಟನ್ ಚೇಸ್, ರೊಮಾರಿಯೋ ಶೆಫರ್ಡ್, ಕೆವಿನ್ ಸಿಂಕ್ಲೇರ್, ಅಕಿಲ್ ಹೊಸೈನ್

7 / 7
ಶ್ರೀಲಂಕಾ ತಂಡ: ಪಾತುಮ್ ನಿಸಂಕ, ದಿಮುತ್ ಕರುಣಾರತ್ನೆ, ಕುಸಾಲ್ ಮೆಂಡಿಸ್, ಸದಿರ ಸಮರವಿಕ್ರಮ, ಚರಿತ್ ಅಸಲಂಕಾ, ಸಹನ್ ಅರಚಿಗೆ, ದಸುನ್ ಶನಕ, ದುಶನ್ ಹೇಮಂತ, ಮಹಿಷ್ ತಿಕ್ಷಣ, ಮತಿಶ ಪತಿರಾನ, ದಿಶಾನ್ ಮಧುಶಂಕ