ODI World Cup 2023: ಭಾರತ ವಿಶ್ವಕಪ್ ಗೆದ್ದರೆ ಅಪರೂಪದ ದಾಖಲೆ ಬರೆಯಲ್ಲಿದ್ದಾರೆ ಕೊಹ್ಲಿ, ಅಶ್ವಿನ್..!

|

Updated on: Sep 29, 2023 | 4:53 PM

ODI World Cup 2023: ಕೊನೆಯ ಹಂತದಲ್ಲಿ ತಂಡವನ್ನು ಸೇರಿಕೊಂಡಿರುವ ಆರ್ ಅಶ್ವಿನ್ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದರೆ, ಆರ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅಪರೂಪದ ದಾಖಲೆಯೊಂದು ದಾಖಲಾಗಲಿದೆ.

1 / 6
ಕಳೆದ ಹತ್ತು ವರ್ಷಗಳಿಂದ ಐಸಿಸಿ ಟ್ರೋಫಿಗಳ ಬರ ಎದುರಿಸುತ್ತಿರುವ ಟೀಂ ಇಂಡಿಯಾ ಇದೀಗ ವಿಶ್ವಕಪ್ ಗೆಲ್ಲುವ ಮೂಲಕ ಆ ಬರವನ್ನು ನೀಗಿಸುವ ಇರಾದೆಯೊಂದಿಗೆ ವಿಶ್ವ ಸಮರಕ್ಕೆ ಕಾಲಿಡುತ್ತಿದೆ. 2013ರಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ, ಅದಕ್ಕೂ ಹಿಂದೆ ಅಂದರೆ, 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಅದನ್ನು ಬಿಟ್ಟರೆ ಭಾರತದ ಖಾತೆಯಲ್ಲಿ ಒಂದೇ ಒಂದು ಐಸಿಸಿ ಟ್ರೋಫಿಗಳಿಲ್ಲ.

2 / 6
ಇನ್ನು ಈ ವಿಶ್ವಕಪ್​ಗೆ ಟೀಂ ಇಂಡಿಯಾ ಬಲಿಷ್ಠ ಪಡೆಯನ್ನೇ ಕಣಕ್ಕಿಳಿಸುತ್ತಿದೆ. ಅದರಲ್ಲೂ ಕೊನೆಯ ಹಂತದಲ್ಲಿ ತಂಡವನ್ನು ಸೇರಿಕೊಂಡಿರುವ ಆರ್ ಅಶ್ವಿನ್ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಟೀಂ ಇಂಡಿಯಾ ವಿಶ್ವಕಪ್ ಗೆಲ್ಲುವಲ್ಲಿ ಯಶಸ್ವಿಯಾದರೆ, ಆರ್ ಅಶ್ವಿನ್ ಹಾಗೂ ವಿರಾಟ್ ಕೊಹ್ಲಿ ಹೆಸರಿನಲ್ಲಿ ಅಪರೂಪದ ದಾಖಲೆಯೊಂದು ದಾಖಲಾಗಲಿದೆ.

3 / 6
ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಎರಡು ವಿಶ್ವಕಪ್ ವಿಜೇತ ತಂಡಗಳಲ್ಲಿ ಭಾರತದ ಯಾವ ಆಟಗಾರನೂ ಆಡಿಲ್ಲ.  ಆರ್ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ 2011 ರ ವಿಶ್ವಕಪ್ ವಿಜೇತ ತಂಡದಲ್ಲಿ ಆಡಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಹಾಗೂ ಆರ್ ಅಶ್ವಿನ್ ರೋಹಿತ್ ಶರ್ಮಾ ನಾಯಕತ್ವದಲ್ಲಿ ಆಡಲಿದ್ದಾರೆ.

4 / 6
ಇದಲ್ಲದೆ ಭಾರತದಲ್ಲಿ ಒಂದಕ್ಕಿಂತ ಹೆಚ್ಚು ಏಕದಿನ ವಿಶ್ವಕಪ್ ಆಡಿದ ಆಟಗಾರರ ಪಟ್ಟಿಗೆ ವಿರಾಟ್ ಮತ್ತು ಅಶ್ವಿನ್ ಸೇರಲಿದ್ದಾರೆ. ಇವರಿಗಿಂತ ಮುಂಚೆ ಮೊಹಮ್ಮದ್ ಅಜರುದ್ದೀನ್ (1987,1996), ನವಜೋತ್ಸಿಂಗ್ ಸಿಧು (1987,1996), ಮನೋಜ್ ಪ್ರಭಾಕರ್ (1987,1996), ಸಚಿನ್ ತೆಂಡೂಲ್ಕರ್ (1996,2011) ಈ ಸಾಧನೆ ಮಾಡಿದ್ದರು.

5 / 6
ಏಕದಿನ ವಿಶ್ವಕಪ್‌ನಲ್ಲಿ ಭಾರತದ ಮೊದಲ ಪಂದ್ಯ ಆಸ್ಟ್ರೇಲಿಯಾ ವಿರುದ್ಧ ನಡೆಯಲಿದೆ.  ಈ ಪಂದ್ಯ ಅಕ್ಟೋಬರ್ 8 ರಂದು ನಡೆಯಲಿದೆ.  ಅದರ ನಂತರ ಅಕ್ಟೋಬರ್ 11 ರಂದು ಅಫ್ಘಾನಿಸ್ತಾನ ಮತ್ತು ಅಕ್ಟೋಬರ್ 14 ರಂದು ಪಾಕಿಸ್ತಾನ ವಿರುದ್ಧ ಭಾರತ ಕಣಕ್ಕಿಳಿಯಲ್ಲಿದೆ.

6 / 6
ವಿಶ್ವಕಪ್​ಗೆ ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಆರ್. ಅಶ್ವಿನ್ ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್.