ಅಫ್ಘಾನ್ ವಿರುದ್ಧ ಅರ್ಧಶತಕ ಸಿಡಿಸಿ ವಿಶ್ವಕಪ್ನಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ ಕಿಂಗ್ ಕೊಹ್ಲಿ..!
Virat Kohliಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಬ್ಯಾಕ್ ಟು ಬ್ಯಾಕ್ ಗೆಲುವಿನ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಪ್ರಮುಖ ದಾಖಲೆಗಳನ್ನು ಮುರಿದಿದ್ದಾರೆ.:
1 / 8
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ನಲ್ಲಿ ಅದ್ಭುತ ಫಾರ್ಮ್ನಲ್ಲಿರುವ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಎರಡು ಬ್ಯಾಕ್ ಟು ಬ್ಯಾಕ್ ಗೆಲುವಿನ ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಇದರೊಂದಿಗೆ ಪ್ರಮುಖ ದಾಖಲೆಗಳನ್ನು ಮುರಿದಿದ್ದಾರೆ.
2 / 8
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಕಠಿಣ ಪರಿಸ್ಥಿತಿಯಲ್ಲಿ 85 ರನ್ಗಳ ಅದ್ಭುತ ಇನ್ನಿಂಗ್ಸ್ ಆಡಿದ್ದ ವಿರಾಟ್ ಇದೀಗ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಪಂದ್ಯದಲ್ಲಿ 56 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ತಂಡವನ್ನು ಗೆಲುವಿನ ದಡ ಸೇರಿಸಿ ವಿಶ್ವಕಪ್ನಲ್ಲಿ ಮತ್ತೊಂದು ದಾಖಲೆಯನ್ನು ಮುರಿದರು.
3 / 8
ಕೊಹ್ಲಿ 55 ರನ್ ಕಲೆಹಾಕುವ ಮೂಲಕ ಏಕದಿನ ಮತ್ತು ಟಿ20 ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ್ದಾರೆ. ಅಫ್ಘಾನಿಸ್ತಾನದ ಪಂದ್ಯದ ಮೊದಲು, ಕೊಹ್ಲಿ ವಿಶ್ವಕಪ್ನ ಎರಡೂ ಸ್ವರೂಪಗಳಲ್ಲಿ 2256 ರನ್ಗಳನ್ನು ಕಲೆಹಾಕಿದ್ದರು.
4 / 8
ಅಫ್ಘಾನಿಸ್ತಾನದ ವಿರುದ್ಧ 19 ರನ್ ಗಳಿಸಿದ್ದಾಗ ಅಜ್ಮತುಲ್ಲಾ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಮೈಲಿಗಲ್ಲನ್ನು ತಲುಪಿದರು. ಈಗ ವಿಶ್ವಕಪ್ನ ಎರಡೂ ಮಾದರಿಗಳಲ್ಲಿ ಒಟ್ಟು ಕೊಹ್ಲಿ 2311 ರನ್ಗಳನ್ನು ಕಲೆಹಾಕಿದ್ದಂತ್ತಾಗಿದೆ.
5 / 8
ಕೊಹ್ಲಿಗೂ ಮೊದಲು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಟೀಂ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಏಕದಿನ ವಿಶ್ವಕಪ್ನಲ್ಲಿ ಒಟ್ಟು 2,278 ರನ್ ಕಲೆಹಾಕಿದ್ದರು.
6 / 8
ಕೊಹ್ಲಿ ಹಾಗೂ ಸಚಿನ್ ತೆಂಡೂಲ್ಕರ್ ನಂತರ ಮೂರನೇ ಸ್ಥಾನದಲ್ಲಿರುವ ಶ್ರೀಲಂಕಾದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ಕುಮಾರ ಸಂಗಕ್ಕಾರ ಎರಡೂ ಮಾದರಿಯ ವಿಶ್ವಕಪ್ನಲ್ಲಿ 2193 ರನ್ ಬಾರಿಸಿದ್ದರು.
7 / 8
ನಾಲ್ಕನೇ ಸ್ಥಾನದಲ್ಲಿರುವ ವೆಸ್ಟ್ ಇಂಡೀಸ್ ತಂಡದ ಮಾಜಿ ಸ್ಫೋಟಕ ಬ್ಯಾಟ್ ಕ್ರಿಸ್ ಗೇಲ್ ಎರಡೂ ಮಾದರಿಯ ವಿಶ್ವಕಪ್ನಲ್ಲಿ 2.151 ರನ್ ಕಲೆಹಾಕಿದ್ದರು.
8 / 8
ಇದೊಂದೇ ದಾಖಲೆಯಲ್ಲದೆ ಐಸಿಸಿ ಸೀಮಿತ ಓವರ್ಗಳ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ. ಕೊಹ್ಲಿ ಈಗ ಸೀಮಿತ ಓವರ್ಗಳ ಪಂದ್ಯಾವಳಿಗಳಲ್ಲಿ 2840 ರನ್ಗಳನ್ನು ಕಲೆಹಾಕಿದ್ದಾರೆ.