IND vs AUS: ಧೋನಿ, ಕೊಹ್ಲಿ, ರೋಹಿತ್​ಗೂ ಆಗಿರಲಿಲ್ಲ; 9 ವರ್ಷಗಳ ಬಳಿಕ ವಿಶೇಷ ದಾಖಲೆ ಬರೆದ ಪಾಂಡ್ಯ

|

Updated on: Mar 18, 2023 | 11:54 AM

Hardik Pandya: ವಾಸ್ತವವಾಗಿ, ಹಾರ್ದಿಕ್ ಪಾಂಡ್ಯ ಉರುಳಿಸಿದ ಆ ಒಂದು ವಿಕೆಟ್ ವಿಶೇಷವೇನೆಂದರೆ, 9 ವರ್ಷಗಳ ನಂತರ, ಟೀಂ ಇಂಡಿಯಾದ ನಾಯಕನೊಬ್ಬ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್ ಪಡೆದಿದ್ದಾರೆ.

1 / 6
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡಿದ್ದಾರೆ. ಅದರಲ್ಲೂ ನಾಯಕನ ಆಟವಾಡಿದ ಹಾರ್ದಿಕ್ ಪಾಂಡ್ಯ, ಬೌಲಿಂಗ್​ನಲ್ಲಿ ಕೇವಲ ಒಂದು ವಿಕೆಟ್ ಪಡೆಯುವ ಮೂಲಕ 9 ವರ್ಷಗಳ ಬರವನ್ನು ಕೊನೆಗೊಳಿಸಿದ್ದಾರೆ.

2 / 6
ವಾಸ್ತವವಾಗಿ, ಹಾರ್ದಿಕ್ ಪಾಂಡ್ಯ ಉರುಳಿಸಿದ ಆ ಒಂದು ವಿಕೆಟ್ ವಿಶೇಷವೇನೆಂದರೆ, 9 ವರ್ಷಗಳ ನಂತರ, ಟೀಂ ಇಂಡಿಯಾದ ನಾಯಕನೊಬ್ಬ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್ ಪಡೆದಿದ್ದಾರೆ.

3 / 6
ಈ ಹಿಂದೆ 2014ರಲ್ಲಿ ಸುರೇಶ್ ರೈನಾ ಈ ಕೆಲಸ ಮಾಡಿದ್ದರು. ಈ ನಡುವೆ ಧೋನಿ, ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ತಂಡದ ನಾಯಕತ್ವವಹಿಸಿದರಾದರೂ, ಇವರ್ಯಾರು ಬೌಲಿಂಗ್ ಮಾಡಿ ವಿಕೆಟ್ ಪಡೆದಿರಲಿಲ್ಲ.

4 / 6
ಈಗ ರೋಹಿತ್ ಬದಲಿಗೆ ಏಕದಿನ ಕ್ರಿಕೆಟ್​ನಲ್ಲಿ ನಾಯಕನಾಗುವ ಅವಕಾಶ ಪಡೆದುಕೊಂಡಿದ್ದ ಪಾಂಡ್ಯ, 13ನೇ ಓವರ್​ನಲ್ಲಿ ಸ್ಟೀವ್ ಸ್ಮಿತ್ ವಿಕೆಟ್ ಪಡೆಯುವ ಮೂಲಕ ಈ ಬರವನ್ನು ಕೊನೆಗೊಳಿಸಿದ್ದಾರೆ.

5 / 6
ವಾಸ್ತವವಾಗಿ ಸ್ಮಿತ್ ಅವರ ಈ ವಿಕೆಟ್ ಬಹಳ ಮುಖ್ಯವಾಗಿತ್ತು. ಏಕೆಂದರೆ ಸ್ಮಿತ್ ಮತ್ತು ಮಾರ್ಷ್ 72 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡಿದ್ದರು. ಅಲ್ಲದೆ ಈ ಇಬ್ಬರ ಜೊತೆಯಾಟ ಆಸ್ಟ್ರೇಲಿಯಾ ಬಿಗ್ ಟಾರ್ಗೆಟ್ ಸೆಟ್ ಮಾಡುವ ಸೂಚನೆಯನ್ನೂ ನೀಡಿತ್ತು.

6 / 6
ಬಾಲ್ ಮಾತ್ರವಲ್ಲದೆ ಬ್ಯಾಟ್‌ನಲ್ಲೂ ಉತ್ತಮ ಕೊಡುಗೆ ನೀಡಿದ ಪಾಂಡ್ಯ, ಕಠಿಣ ಪಿಚ್‌ನಲ್ಲಿ 31 ಎಸೆತಗಳಲ್ಲಿ 25 ರನ್ ಬಾರಿಸಿದರು. ಪಾಂಡ್ಯ ಅವರ ಇನ್ನಿಂಗ್ಸ್‌ನಲ್ಲಿ ಮೂರು ಬೌಂಡರಿ ಮತ್ತು ಒಂದು ಸಿಕ್ಸರ್ ಕೂಡ ಸೇರಿತ್ತು. ಅಲ್ಪ ಮೊತ್ತದ ಈ ಪಂದ್ಯದಲ್ಲಿ ಪಾಂಡ್ಯ ಕೊಡುಗೆ ಪ್ರಮುಖವಾಗಿತ್ತು.