IND vs AUS 3rd T20I: ಬುಧವಾರ ಭಾರತ-ಆಸ್ಟ್ರೇಲಿಯಾ ತೃತೀಯ ಟಿ20: ಗುವಾಹಟಿಯಲ್ಲಿ ಪಂದ್ಯ ನಡೆಯುತ್ತಾ?-ಇಲ್ವಾ?

|

Updated on: Nov 27, 2023 | 12:42 PM

Guwahati Weather and Pitch Report: ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿರುವುದರಿಂದ ಇನ್ನೊಂದು ಪಂದ್ಯ ಗೆದ್ದರೆ ಸರಣಿ ವಶಪಡಿಸಿಕೊಳ್ಳಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ತೃತೀಯ ಟಿ20 ಪಂದ್ಯವನ್ನು ಎದುರು ನೋಡುತ್ತಿದೆ. ಆದರೆ, ಮೂರನೇ ಟಿ20 ನಡೆಯುತ್ತಾ?.

1 / 6
ಭಾನುವಾರ ತಿರುವನಂತಪುರಂನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ 2-0 ಮುನ್ನಡೆ ಸಾಧಿಸಿರುವ ಟೀಮ್ ಇಂಡಿಯಾ ಇದೀಗ ಮೂರನೇ ಪಂದ್ಯಕ್ಕೆ ಸಜ್ಜಾಗುತ್ತಿದೆ. ನವೆಂಬರ್ 28 ರಂದು ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೂರನೇ ಟಿ20 ಆಯೋಜಿಸಲಾಗಿದೆ.

2 / 6
ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತ 2-0 ಮುನ್ನಡೆ ಪಡೆದುಕೊಂಡಿರುವುದರಿಂದ ಇನ್ನೊಂದು ಪಂದ್ಯ ಗೆದ್ದರೆ ಸೂರ್ಯ ಪಡೆ ಸರಣಿ ವಶಪಡಿಸಿಕೊಳ್ಳಲಿದೆ. ಇದಕ್ಕಾಗಿ ಟೀಮ್ ಇಂಡಿಯಾ ಮಂಗಳವಾರದ ಪಂದ್ಯವನ್ನು ಎದುರು ನೋಡುತ್ತಿದೆ. ಆದರೆ, ಮೂರನೇ ಟಿ20 ನಡೆಯುತ್ತಾ?, ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಸಾಧ್ಯತೆ ಇದೆಯೇ?, ಇಲ್ಲಿದೆ ನೋಡಿ ಗುವಾಹಟಿಯ ಹವಾಮಾನ ವರದಿ.

3 / 6
ವೆದರ್ ಚಾನೆಲ್‌ನ ಇತ್ತೀಚಿನ ಅಪ್‌ಡೇಟ್ ಪ್ರಕಾರ, ನವೆಂಬರ್ 28 ರಂದು ಗುವಾಹಟಿಯಲ್ಲಿ ಯಾವುದೇ ಮಳೆ ಸೂಚನೆ ಇಲ್ಲ. ಪಂದ್ಯವು 7 ಗಂಟೆಗೆ ಪ್ರಾರಂಭವಾಗುತ್ತಿದ್ದಂತೆ, ಗರಿಷ್ಠ ತಾಪಮಾನವು 21 ಡಿಗ್ರಿ ಸೆಲ್ಸಿಯಸ್ ತಲುಪುವ ನಿರೀಕ್ಷೆಯಿದೆ. ಕ್ರಮೇಣ ಪಂದ್ಯ ಅಂತ್ಯದ ವೇಳೆಗೆ 19 ಡಿಗ್ರಿ C ಗೆ ಇಳಿಯುತ್ತದೆ.

4 / 6
ಹೀಗಾಗಿ ಪಂದ್ಯದ ದಿನದಂದು ಯಾವುದೇ ಮಳೆಯ ನಿರೀಕ್ಷೆಯಿಲ್ಲ. ದಿನವಿಡೀ, ಆರ್ದ್ರತೆಯು ಸುಮಾರು 67% ಎಂದು ಅಂದಾಜಿಸಲಾಗಿದೆ. ಇದು ನಂತರ ಅವಧಿಯಲ್ಲಿ ಶೇ. 90 ಕ್ಕೆ ಹೆಚ್ಚಾಗುತ್ತದೆ. ಆದ್ದರಿಂದ, ಭಾರತ-ಆಸ್ಟ್ರೇಲಿಯಾ 3 ನೇ ಟಿ20I ಪಂದ್ಯ ಯಾವುದೇ ಅಡಚಣೆಗಳಿಲ್ಲದೆ ನಡೆಯಲಿದೆ.

5 / 6
ಇನ್ನು ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿನ ಪಿಚ್ ನಿಧಾನವಾಗಿದೆ. ಆದಾಗ್ಯೂ ಇತ್ತೀಚಿನ ದಾಖಲೆ ಗಮನಿಸಿದರೆ ಇದು ಬ್ಯಾಟಿಂಗ್‌ಗೆ ಅನುಕೂಲಕರ ಎಂದು ಹೇಳಬಹುದು. ಬೌಲರ್‌ಗಳಿಗೆ ಹೆಚ್ಚಿನ ಸಹಾಯ ಮಾಡುವುದಿಲ್ಲ. ಈ ಸ್ಥಳದಲ್ಲಿ ಆಯೋಜಿಸಲಾದ ಮೂರು T20I ಗಳಲ್ಲಿ, ಸರಾಸರಿ ಸ್ಕೋರ್ 118 ಆಗಿದೆ.

6 / 6
ಮೊದಲು ಬ್ಯಾಟಿಂಗ್ ಮಾಡುವ ಮತ್ತು ಚೇಸಿಂಗ್ ಮಾಡುವ ತಂಡಗಳ ಗೆಲುವು-ಸೋಲಿನ ದಾಖಲೆಯು 1-1 ರಲ್ಲಿ ಸಮಬಲವಿದೆ. ಆಟ ಶುರುವಾದ ನಂತರ ಇಬ್ಬನಿಯ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಹೀಗಾಗಿ ಈ ಪಂದ್ಯದಲ್ಲಿ ಮೊದಲು ಟಾಸ್ ಗೆದ್ದ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ ಆಯ್ಕೆ.