IND vs AUS: ಟೆಸ್ಟ್​ ಕ್ರಿಕೆಟ್​ನಲ್ಲಿ ಅಪರೂಪದ ದಾಖಲೆ ಬರೆದ ಅಕ್ಷರ್ ಪಟೇಲ್

|

Updated on: Mar 13, 2023 | 4:31 PM

IND vs AUS: ಅತಿ ವೇಗವಾಗಿ 50 ವಿಕೆಟ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 5ನೇ ಆಲ್‌ರೌಂಡರ್‌ ಎಂಬ ಖ್ಯಾತಿಗೆ ಅಕ್ಷರ್ ಭಾಜನರಾಗಿದ್ದಾರೆ.

1 / 6
ಟೀಂ ಇಂಡಿಯಾದ ಆಲ್‌ರೌಂಡರ್ ಅಕ್ಷರ್ ಪಟೇಲ್ ಟೆಸ್ಟ್‌ಗೆ ಪದಾರ್ಪಣೆ ಮಾಡಿದಾಗಿನಿಂದಲೂ ಅವರು ಚೆಂಡು ಮತ್ತು ಬ್ಯಾಟ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಸದ್ಯ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅಕ್ಷರ್ ಬೌಲಿಂಗ್​ನಲ್ಲಿ ಮಿಂಚದಿದ್ದರೂ, ಬ್ಯಾಟಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಆದರೆ ಅಹಮದಾಬಾದ್ ಟೆಸ್ಟ್‌ನ ಐದನೇ ದಿನದಂದು ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಅವರನ್ನು ಬೌಲ್ಡ್ ಮಾಡುವ ಮೂಲಕ ದೊಡ್ಡ ದಾಖಲೆ ನಿರ್ಮಿಸಿದ್ದಾರೆ.

2 / 6
ಹೆಡ್ ವಿಕೆಟ್ ಪಡೆದ ಅಕ್ಷರ್ ಪಟೇಲ್ ಈ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಡಿಮೆ ಎಸೆತಗಳಲ್ಲಿ ಐವತ್ತು ವಿಕೆಟ್‌ ಪೂರೈಸಿದ ಸಾಧನೆ ಮಾಡಿದ್ದಾರೆ. ಅಕ್ಷರ್ ಪಟೇಲ್ ಕೇವಲ 2205 ಎಸೆತಗಳಲ್ಲಿ ಐವತ್ತು ಟೆಸ್ಟ್ ವಿಕೆಟ್ ಪೂರೈಸಿದ್ದಾರೆ.

3 / 6
ವಾಸ್ತವವಾಗಿ ಅಕ್ಷರ್​ಗೆ ಈ 50ನೇ ವಿಕೆಟ್ ಸ್ಮರಣೀಯವಾಗಿ ಉಳಿಯಲಿದೆ. ಏಕೆಂದರೆ ಅಕ್ಷರ್​ಗೆ 50 ವಿಕೆಟ್ ರೂಪದಲ್ಲಿ ಬಲಿಯಾದ ಟ್ರಾವಿಸ್ ಹೆಡ್ ಕೇವಲ 10 ರನ್​ಗಳಿಂದ ಶತಕ ವಂಚಿತರಾದರು. 90 ರನ್‌ಗೆ ಬೌಲ್ಡ್ ಆಗುವ ಮೂಲಕ ಹೆಡ್, ಭಾರತದಲ್ಲಿ ಟೆಸ್ಟ್ ಶತಕ ಗಳಿಸುವ ಅವಕಾಶವನ್ನು ಕಳೆದುಕೊಂಡರು.

4 / 6
ಅತಿ ವೇಗವಾಗಿ 50 ವಿಕೆಟ್ ಪೂರೈಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ 5ನೇ ಆಲ್‌ರೌಂಡರ್‌ ಎಂಬ ಖ್ಯಾತಿಗೆ ಅಕ್ಷರ್ ಭಾಜನರಾಗಿದ್ದಾರೆ.

5 / 6
ಹಾಗೆಯೇ ಕೇವಲ 12 ಟೆಸ್ಟ್‌ಗಳಲ್ಲಿ 50 ವಿಕೆಟ್ ಮತ್ತು 500 ರನ್ ಗಡಿ ದಾಟಿದ ಎರಡನೇ ಭಾರತೀಯ ಎಂಬ ದಾಖಲೆಯನ್ನೂ ಆಕ್ಷರ್ ಬರೆದಿದ್ದಾರೆ. ಅಕ್ಷರ್​ಗೂ ಮೊದಲು ಈ ಸಾಧನೆಯನ್ನು ಭಾರತದ ಮತ್ತೊಬ್ಬ ಆಲ್​ರೌಂಡರ್ ಆರ್ ಅಶ್ವಿನ್ ಮಾಡಿದ್ದಾರೆ.

6 / 6
ಪ್ರಸ್ತುತ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಅಕ್ಷರ್ ಪಟೇಲ್ 88ರ ಸರಾಸರಿಯಲ್ಲಿ 264 ರನ್ ಗಳಿಸಿದ್ದು, ಅವರ ಬ್ಯಾಟ್‌ನಿಂದ 3 ಅರ್ಧಶತಕಗಳು ಹೊರಹೊಮ್ಮಿವೆ.

Published On - 4:31 pm, Mon, 13 March 23