IND vs AUS: ಭಾರತ ವಿರುದ್ಧ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಗ್ರೀನ್! ರೋಹಿತ್ ಪಡೆಗೆ ಸಂಕಷ್ಟ

Updated on: Mar 10, 2023 | 12:53 PM

IND vs AUS: ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಗ್ರೀನ್, ಖವಾಜಾ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದಲ್ಲದೆ, ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

1 / 5
ಅಹಮದಾಬಾದ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯ ಮುಂದುವರಿದಿದೆ. ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರ ಅದ್ಭುತ ಶತಕದ ನಂತರ, ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಸ್ಫೋಟಕ ಶತಕ ಬಾರಿಸಿದ್ದಾರೆ.

ಅಹಮದಾಬಾದ್ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾದ ಪ್ರಾಬಲ್ಯ ಮುಂದುವರಿದಿದೆ. ತಂಡದ ಆರಂಭಿಕ ಆಟಗಾರ ಉಸ್ಮಾನ್ ಖವಾಜಾ ಅವರ ಅದ್ಭುತ ಶತಕದ ನಂತರ, ಆಲ್ ರೌಂಡರ್ ಕ್ಯಾಮರೂನ್ ಗ್ರೀನ್ ಕೂಡ ಸ್ಫೋಟಕ ಶತಕ ಬಾರಿಸಿದ್ದಾರೆ.

2 / 5

ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ಗೆ ಇಳಿದ ಗ್ರೀನ್, ಖವಾಜಾ ಜೊತೆ ಅದ್ಭುತ ಇನ್ನಿಂಗ್ಸ್ ಕಟ್ಟಿದಲ್ಲದೆ, ಮೊದಲ ಬಾರಿಗೆ ಟೆಸ್ಟ್‌ನಲ್ಲಿ ಶತಕ ಬಾರಿಸಿ ದಾಖಲೆ ಬರೆದಿದ್ದಾರೆ.

3 / 5

ವಾಸ್ತವವಾಗಿ ಗ್ರೀನ್ 4 ಇನ್ನಿಂಗ್ಸ್​​ಗಳಲ್ಲಿ ಶತಕದಂಚಿಗೆ ಬಂದು ಎಡವಿದ್ದರು. ಇದರೊಂದಿಗೆ ಚೊಚ್ಚಲ ಶತಕ ಬಾರಿಸುವ ಅವಕಾಶ ಕೂಡ ಕಳೆದುಕೊಂಡಿದ್ದರು. ಗ್ರೀನ್, ಕಳೆದ ವರ್ಷ ನಾಲ್ಕು ಬಾರಿ 70 ಮತ್ತು 80 ರ ನಡುವೆ ಔಟಾಗಿದ್ದರು. ಅಲ್ಲದೆ 2021 ರಲ್ಲಿ ಭಾರತದ ವಿರುದ್ಧ 84 ರನ್ ಗಳಿಸಿ ಶತಕ ವಂಚಿತರಾಗಿದ್ದರು.

4 / 5

ಇನ್ನು ತಮ್ಮ ಶತಕದ ಇನ್ನಿಂಗ್ಸ್​ನಲ್ಲಿ 143 ಎಸೆತಗಳನ್ನು ಎದುರಿಸಿದ ಗ್ರೀನ್, 16 ಬೌಂಡರಿಗಳ ನೆರವಿನಿಂದ ಗ್ರೀನ್ ಸೆಂಚುರಿ ಬಾರಿಸಿದರು. ಇದರೊಂದಿಗೆ ಭಾರತ ಪ್ರವಾಸದಲ್ಲಿ ಮೊದಲ ಶತಕ ಬಾರಿಸಿದ ದಾಖಲೆ ಬರೆದ ಗ್ರೀನ್​, ಏಷ್ಯನ್ ನೆಲದಲ್ಲಿ ಮೂರನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.

5 / 5

ಹಾಗೆಯೇ ಚೊಚ್ಚಲ ಶತಕದೊಂದಿಗೆ ಭಾರತದಲ್ಲಿ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ ಆಸ್ಟ್ರೇಲಿಯನ್ ತಂಡದ 6ನೇ ಆಟಗಾರ ಎಂಬ ಕೀರ್ತಿಗೆ ಗ್ರೀನ್ ಪಾತ್ರರಾಗಿದ್ದಾರೆ. ಗ್ರೀನ್​ಗೂ ಮುನ್ನ ಲೆಸ್ ಫಾವೆಲ್, ಪಾಲ್ ಶೀಹನ್, ಡೀನ್ ಜೋನ್ಸ್, ಮೈಕೆಲ್ ಕ್ಲಾರ್ಕ್, ಗ್ಲೆನ್ ಮ್ಯಾಕ್ಸ್‌ವೆಲ್ ಭಾರತದಲ್ಲಿ ಮೊದಲ ಟೆಸ್ಟ್ ಶತಕ ಬಾರಿಸಿದ್ದರು.

Loading...
Unable to load recommendations.
Follow Us