IND vs AUS: ರಿಂಕು ಸಿಂಗ್ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಹೀಗಾಗಿದ್ದು ಇದೇ ಮೊದಲು
IND vs AUS, Rinku Singh: ಸರಣಿಯಲ್ಲಿ ಫಿನಿಶರ್ ಪಾತ್ರ ನಿರ್ವಹಿಸಿದ ರಿಂಕು ಸಿಂಗ್ ಭಾಗಶಃ ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಸರಣಿಯ ಕೊನೆಯ ಪಂದ್ಯದಲ್ಲಿ ಅವರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಪಂದ್ಯದಲ್ಲಿ ರಿಂಕು ಸಿಂಗ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಹಿಂದೆಂದೂ ಸಂಭವಿಸದ ಘಟನೆಗೆ ಸಾಕ್ಷಿಯಾದರು.
1 / 7
ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿರುವ ಟೀಂ ಇಂಡಿಯಾ ವಿಶ್ವಕಪ್ ಸೋಲಿನ ನಿರಾಸೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ಸಮಾಧಾನ ತರಿಸಿದೆ. ಇನ್ನು ಸರಣಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ರಿಂಕು ಸಿಂಗ್ ಸ್ಫೋಟಕ ಬ್ಯಾಟಿಂಗ್ ಮೂಲಕ ಎಲ್ಲರ ಮನ ಗೆದ್ದಿದ್ದರು.
2 / 7
ಸರಣಿಯಲ್ಲಿ ಫಿನಿಶರ್ ಪಾತ್ರ ನಿರ್ವಹಿಸಿದ ರಿಂಕು ಸಿಂಗ್ ಭಾಗಶಃ ಎಲ್ಲಾ ಪಂದ್ಯಗಳಲ್ಲೂ ಅದ್ಭುತ ಇನ್ನಿಂಗ್ಸ್ ಆಡಿದರು. ಆದರೆ ಸರಣಿಯ ಕೊನೆಯ ಪಂದ್ಯದಲ್ಲಿ ಅವರರಿಗೆ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಅಲ್ಲದೆ ಈ ಪಂದ್ಯದಲ್ಲಿ ರಿಂಕು ಸಿಂಗ್ ತಮ್ಮ ಅಂತರಾಷ್ಟ್ರೀಯ ವೃತ್ತಿ ಜೀವನದಲ್ಲಿ ಹಿಂದೆಂದೂ ಸಂಭವಿಸದ ಘಟನೆಗೆ ಸಾಕ್ಷಿಯಾದರು.
3 / 7
ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಸರಣಿಯ ಐದನೇ ಪಂದ್ಯದಲ್ಲಿ ರಿಂಕು ಸಿಂಗ್ ಕೇವಲ 8 ರನ್‌ಗಳಿಗೆ ಔಟಾದರು. ಭಾರತ ತಂಡದ ಇನಿಂಗ್ಸ್‌ನ 10ನೇ ಓವರ್‌ನಲ್ಲಿ ತನ್ವೀರ್ ಸಂಘದ ಬಾಲ್‌ನಲ್ಲಿ ದೊಡ್ಡ ಹೊಡೆತವನ್ನು ಆಡಲು ಪ್ರಯತ್ನಿಸುವಾಗ, ಅವರು ಬೌಂಡರಿ ಬಳಿ ನಿಂತಿದ್ದ ಟಿಮ್ ಡೇವಿಡ್‌ಗೆ ಕ್ಯಾಚ್ ನೀಡಿದರು.
4 / 7
ಇದರೊಂದಿಗೆ ರಿಂಕು ಸಿಂಗ್ ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಒಂದಂಕಿಗೆ ಔಟಾದರು. ಇದಕ್ಕೂ ಮೊದಲು ರಿಂಕು ಆಡಿದ ಎಲ್ಲ ಪಂದ್ಯಗಳಲ್ಲಿ ಎರಡಂಕಿಯ ಇನ್ನಿಂಗ್ಸ್ ಆಡಿದ್ದರು.
5 / 7
ಆಸ್ಟ್ರೇಲಿಯಾ ವಿರುದ್ಧದ ಈ ಸರಣಿಯಲ್ಲಿ 52.50 ಸರಾಸರಿಯಲ್ಲಿ ಬ್ಯಾಟ್ ಬೀಸಿದ ರಿಂಕು ಸಿಂಗ್ 105 ರನ್ ಕಲೆಹಾಕಿದರು. ಅದರಲ್ಲೂ ತಿರುವನಂತಪುರಂನಲ್ಲಿ ನಡೆದ ಎರಡನೇ ಟಿ20 ಪಂದ್ಯದಲ್ಲಿ ಒಂಬತ್ತು ಎಸೆತಗಳಲ್ಲಿ ಅಜೇಯ 31 ರನ್ ಬಾರಿಸಿದ ರಿಂಕು ಭಾರತದ 44 ರನ್ಗಳ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
6 / 7
ಅದೇ ಸಮಯದಲ್ಲಿ, ನಾಲ್ಕನೇ ಪಂದ್ಯದಲ್ಲೂ 29 ಎಸೆತಗಳಲ್ಲಿ 46 ರನ್ಗಳ ಇನ್ನಿಂಗ್ಸ್ ಆಡಿದ ರಿಂಕು ಭಾರತದ 20 ರನ್ಗಳ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದಲ್ಲದೆ, ತಂಡ ಟಿ20 ಸರಣಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸಿದರು.
7 / 7
ಆಸೀಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿದ ರಿಂಕು ದಕ್ಷಿಣ ಆಫ್ರಿಕಾ ಪ್ರವಾಸಕ್ಕಾಗಿ ಟಿ20 ಹಾಗೂ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ರಿಂಕು ಸಿಂಗ್ ಭಾರತ ತಂಡದ ಏಕದಿನ ತಂಡದಲ್ಲಿ ಸ್ಥಾನ ಪಡೆದಿರುವುದು ಇದೇ ಮೊದಲು. ಟೀಂ ಇಂಡಿಯಾ ಕೂಡ ಮುಂದಿನ ವರ್ಷ ಟಿ20 ವಿಶ್ವಕಪ್ ಆಡಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ರಿಂಕು ಸಿಂಗ್ಗೆ ಈ ಪ್ರವಾಸ ಅತ್ಯಂತ ಮಹತ್ವದ್ದಾಗಿದೆ.